ಹಾವೇರಿ: ನೆರೆ ಸಂತ್ರಸ್ಥರ ನೆರವಿಗೆ ಇದೀಗ ಹಾವೇರಿ ಹುಕ್ಕೇರಿಮಠ ಮತ್ತು ಅಗಡಿಯ ಅಕ್ಕಿಮಠ ಮುಂದಾಗಿದೆ.
ಇನ್ನೂ ಈ ಕುರಿತಂತೆ ಹುಕ್ಕೇರಿಮಠ ಸದಾಶಿವಶ್ರೀಗಳು ಮಾತನಾಡಿ, ಆಗಸ್ಟ್ 11ರವರೆಗೆ ಸಂತ್ರಸ್ಥರಿಗೆ ತಲುಪಿಸಬೇಕಾದ ವಸ್ತುಗಳನ್ನು ಮಠಕ್ಕೆ ಒಪ್ಪಿಸಿದರೆ ತಾವು ಸಂತ್ರಸ್ಥರಿಗೆ ತಲುಪಿಸುವುದಾಗಿ ತಿಳಿಸಿದ್ದಾರೆ. ಇನ್ನು ಅಗಡಿ ಅಕ್ಕಿಮಠ ಶಿವಬಸವಶ್ರೀಗಳು ಸ್ವತಃ ಜೋಳಿಗೆ ಹಿಡಿದು ಭಕ್ತರಿಂದ ಸಂತ್ರಸ್ಥರಿಗೆ ಆಹಾರ ಪದಾರ್ಥಗಳನ್ನು ಸ್ವೀಕರಿಸುತ್ತಿದ್ದಾರೆ.
ರಾಜ್ಯದ ಹಲವೆಡೆ ನೆರೆ ಹಾವಳಿ ಸಂಭವಿಸಿದ್ದು, ಜನರು ಅಕ್ಷರಶಃ ಅತಂತ್ರವಾಗಿದ್ದಾರೆ. ಅಂಥವರ ನೋವಿಗೆ ಭಕ್ತರು ಸ್ಪಂಧಿಸುವಂತೆ ಉಭಯಮಠಾಧೀಶರು ಭಕ್ತರಲ್ಲಿ ಮನವಿ ಮಾಡಿದ್ದಾರೆ.