ಹಾವೇರಿ: ಜಿಲ್ಲೆಯಾದ್ಯಂತ ಇಂದು ಧಾರಾಕಾರ ಮಳೆಯಾಗಿದೆ. ಮುಂಜಾನೆಯಿಂದ ಮೋಡಕವಿದ ವಾತಾವರಣವಿದ್ದು, ಮಧ್ಯಾಹ್ನವಾಗುತ್ತಿದ್ದಂತೆ ಆರ್ಭಟಿಸಲಾರಂಭಿಸಿದ ವರುಣ ಸಂಜೆಯವರೆಗೆ ಬಿಟ್ಟು ಬಿಡದೆ ತುಂತುರು ಮತ್ತು ಧಾರಾಕಾರವಾಗಿ ಸುರಿದಿದ್ದಾನೆ.
ಜಿಲ್ಲೆಯಲ್ಲಿ ಸರಾಸರಿ 7 ಮಿಲಿಮೀಟರ್ ಮಳೆಯಾಗಿದೆ. ಸವಣೂರು ತಾಲೂಕಿನಲ್ಲಿ ಸುಮಾರು 10.1 ಮಿಲಿಮೀಟರ್ ಮಳೆಯಾದರೆ, ಹಾವೇರಿ ತಾಲೂಕಿನಲ್ಲಿ 3.2 ಮಿಲಿಮೀಟರ್ ಮಳೆಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿನ ವರುಣ ಆರ್ಭಟ ರೈತರಲ್ಲಿ ಹರ್ಷ ತಂದಿದೆ. ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರು ಬೆಳೆಗಳಿಗೆ ಗೊಬ್ಬರ ಹಾಕುವ, ಕಳೆ ತಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ.