ಹಾವೇರಿ: ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ಶಿಗ್ಗಾಂವಿ,ಬ್ಯಾಡಗಿ ತಾಲೂಕಿನ ಕೆಲವೆಡೆ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.
ಬಂಕಾಪುರ ಪಟ್ಟಣದಲ್ಲಿ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಹಾರಿ ಹೋಗಿ ಸಂಪೂರ್ಣ ಕಟ್ಟಡ ಹಾನಿಯಾಗಿದೆ. ಅಲ್ಲದೇ ಗಾರ್ಮೆಂಟ್ಸ್‌ವೊಂದರ ಮೇಲ್ಛಾವಣಿ ಹಾರಿ ಒಳಗಿದ್ದ ಬಟ್ಟೆಗಳು ಸೇರಿ ವಿವಿಧ ವಸ್ತುಗಳು ಹಾನಿಯಾಗಿವೆ. ಕಾಗಿನೆಲೆ ಗ್ರಾಮದಲ್ಲಿ ವಿದ್ಯುತ್ ಕಂಬ ಧರೆಗೆ ಉರುಳಿವೆ. ಬಡಾವಣೆಯಲ್ಲಿನ ರಸ್ತೆಯುದ್ದಕ್ಕೂ ವಿದ್ಯುತ್ ತಂತಿಗಳು ಬಿದ್ದಿವೆ.
ಮತ್ತೊಂದೆಡೆ ಕುಂದೂರು ಗ್ರಾಮದಲ್ಲಿ ಬಾಪುಗೌಡ ಪಾಟೀಲ್ ಎಂಬುವರ ಆರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಬಿರುಗಾಳಿಗೆ ನೆಲಕ್ಕುರುಳಿವೆ. ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.