ETV Bharat / state

ಬಿಜೆಪಿ ಸರ್ಕಾರ ಬರೋದಕ್ಕೆ ಸಿದ್ದರಾಮಯ್ಯ ಕಾರಣ.. ಮಾಜಿ ಸಿಎಂ ಹೆಚ್‌ಡಿಕೆ ಆರೋಪ - ಹಾವೇರಿ ಜಿಲ್ಲಾ ಸುದ್ದಿ

ಹಾನಗಲ್​ ಉಪಚುನಾವಣೆ ಮತ ಪ್ರಚಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್​ ಮತ್ತು ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಗುಡುಗಿದ ಹೆಚ್​​ಡಿಕೆ ಮೈತ್ರಿ ಸರ್ಕಾರದ ಪತನಕ್ಕೆ ಹಾಗೂ ಬಿಜೆಪಿ ಸರ್ಕಾರ ಬರಲು ಸಿದ್ದರಾಮಯ್ಯ ಕಾರಣ ಎಂದು ಹೇಳಿದ್ದಾರೆ..

hd-kumaraswamy-statement-against-bjp-and-congress
ಹೆಚ್​ಡಿಕೆ
author img

By

Published : Oct 23, 2021, 5:33 PM IST

ಹಾವೇರಿ: ಹಾನಗಲ್​​ನಲ್ಲಿ ಚೀಲದಲ್ಲಿ ಹಣ ತಂದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅದು ಯಾರ ದುಡ್ಡು ಅಲ್ಲ, ಸಾರ್ವಜನಿಕರ ಹಣ ಎಂದು ಮಾಜಿ ಸಿಎಂ ಹೆಚ್​​. ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ಗುಡುಗಿದರು.

ಕಾಂಗ್ರೆಸ್​-ಬಿಜೆಪಿ ವಿರುದ್ಧ ಮಾಜಿ ಸಿಎಂ ವಾಗ್ದಾಳಿ

ಜಿಲ್ಲೆಯ ಹಾನಗಲ್‌ನಲ್ಲಿ ಜೆಡಿಎಸ್​​ ಅಭ್ಯರ್ಥಿ ನಿಯಾಜ್​ ಶೇಖ್​ ಪರ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್​​ನವರು ಈ ಕ್ಷೇತ್ರಕ್ಕೆ ಏನು ಕೊಟ್ಟಿದ್ದಾರೆ? ಯಾವುದೋ ಒಂದೆರಡು ರಸ್ತೆಗಳನ್ನ ಮಾಡಿದ್ದು ಬಿಟ್ಟರೇ ಏನೂ ಮಾಡಿಲ್ಲ. ಇಷ್ಟು ಮಾಡಿದರೆ ಜನರ ಸಂಕಷ್ಟಗಳು ನಿವಾರಣೆ ಆಗುವುದಿಲ್ಲ. ಉಪಚುನಾವಣೆ ಅಂತಾ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಅಭಿವೃದ್ಧಿ ಕೆಲಸದ ಬಗ್ಗೆ ಸವಾಲ ಹಾಕಿಕೊಂಡಿದ್ದಾರೆ. ನಿಮಗೆ ಮನುಷ್ಯತ್ವ ಮತ್ತು ತಾಯಿ ಹೃದಯಾ ಇದೆಯಾ..? ಎಂದು ಕಿಡಿಕಾರಿದರು.

ಉದಾಸಿ ಅವರು ನಮ್ಮ ಪಕ್ಷದವರು. ಉತ್ತರ ಕರ್ನಾಟಕದಲ್ಲಿ ನಮ್ಮ ಪಕ್ಷದ ಸಂಘಟನೆ ಕುಸಿಯುತ್ತಿದೆ. ಆದರೆ, ರೈತರ ಬೆಂಬಲ ನನಗೆ ಇದೆ. ಇಲ್ಲಿನ ಜನ ಮತ ಹಾಕದಿದ್ದರು ನಾನು ಅವರ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ ಎಂದರು.

ಬಿಜೆಪಿ ಸರ್ಕಾರ ತರಲು ಸಿದ್ದರಾಮಯ್ಯ ಕಾರಣ: ಸಿದ್ದರಾಮಯ್ಯ ಐದು ವರ್ಷದ ಅಧಿಕಾರದ ಅವಧಿಯಲ್ಲಿ ಏಕೆ ಸಾಲ ಮನ್ನಾ ಮಾಡಲಿಲ್ಲ. ಆವಾಗ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ್ರಿ. ಸಾಲ ಮನ್ನಾ ಮಾಡಲು ನಾನು ತೀರ್ಮಾನ ತೆಗೆದುಕೊಂಡಾಗ ಏಕೆ ವಿರೋಧ ಮಾಡಿದ್ರಿ.

ಬಿಜೆಪಿ 2018ರಲ್ಲಿ 105ಕ್ಕೆ ತಲುಪಲು ಕಾರಣ ಸಿದ್ದರಾಮಯ್ಯ ಅವರೇ. ಈಗ ದರಿದ್ರ ಸರ್ಕಾರ ಅಂತಾ ಹೇಳ್ತೀರಿ, ಈ ದರಿದ್ರ ಸರ್ಕಾರ ತರಲು ಕಾರಣಿಭೂತ ಯಾರು. ಬಿಜೆಪಿ ಜೊತೆ ಒಳಸಂಚು ಮಾಡಿದ್ದು ನಾನಲ್ಲ, ವಿರೋಧ ಪಕ್ಷದ ಸ್ಥಾನಕ್ಕಾಗಿ ನೀವು ಒಳಸಂಚು ಮಾಡಿದ್ದು ಎಂದು ವಿಪಕ್ಷ ನಾಯಕನ ವಿರುದ್ಧ ಹೆಚ್​ಡಿಕೆ ಗುಡುಗಿದರು

ಜಮೀರ್ ವಿರುದ್ಧ ಹೆಚ್​ಡಿಕೆ ವಾಗ್ದಾಳಿ: ಎಲ್ಲೋ ಬಸ್ ಒರೆಸಿಕೊಂಡು ಇದ್ದವನನ್ನ ಕರೆದುಕೊಂಡು ಬಂದು ಶಾಸಕನನ್ನಾಗಿ ಮಾಡಿದ್ದೇನೆ. ಚಾಮರಾಜಪೇಟೆಯಲ್ಲಿ ನಾನು ಮುಸ್ಲಿಂ ಹುಡುಗನಿಗೆ ಟಿಕೆಟ್ ನೀಡಿ ಶಾಸಕನಾಗಿ ಮಾಡಿದ್ದೇನೆ. ಅವಾಗ ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು..? ಈ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಗೆಲ್ಲಿಸಿಕೊಂಡು ಬಂದರೆ ನಾನೇನೂ ಸಿಎಂ ಆಗುವುದಿಲ್ಲ. ಯಡಿಯೂರಪ್ಪ, ಬೊಮ್ಮಾಯಿ, ಸಿದ್ದರಾಮಯ್ಯ ಅವರಿಗೆ ಬುದ್ದಿ ಕಲಿಸಲಿಕ್ಕೆ ನಮ್ಮ ಅಭ್ಯರ್ಥಿಗೆ ಮತ ಹಾಕಿ ಎಂದು ಜನರಲ್ಲಿ ಹೆಚ್​ಡಿಕೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.