ETV Bharat / state

ಹಾವೇರಿ: ಕೊರೊನಾ ಭೀತಿಗೆ ಗ್ರಾಮವನ್ನೇ ಲಾಕ್​ಡೌನ್ ಮಾಡಿದ ಗ್ರಾಮಸ್ಥರು! - Villagers lockdown Village for fear of Corona

ಹಲಗೇರಿ ಗ್ರಾಮದ ಪ್ಲಾಟಿನ್ ನಿವಾಸಿಯಾದ 33 ವರ್ಷದ ಮಹಿಳೆಯಲ್ಲಿ ನಿನ್ನೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ಜನರು ಸ್ವಯಂ ಪ್ರೇರಿತರಾಗಿ ಗ್ರಾಮವನ್ನೇ ಲಾಕ್​ಡೌನ್​ ಮಾಡಿದ್ದಾರೆ.

ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮ
ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮ
author img

By

Published : Jul 1, 2020, 6:45 PM IST

ಹಾವೇರಿ: ಕೊರೊನಾ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ಜನರು ಸ್ವಯಂ ಪ್ರೇರಿತರಾಗಿ ಸಂಪೂರ್ಣ ಗ್ರಾಮವನ್ನೇ ಲಾಕ್​ಡೌನ್​ ಮಾಡಿದ್ದಾರೆ.

ಕೊರೊನಾಕ್ಕೆ ಹೆದರಿ ಗ್ರಾಮವನ್ನೇ ಲಾಕ್​ಡೌನ್ ಮಾಡಿದ ಗ್ರಾಮಸ್ಥರು

ಗ್ರಾಮದ ಜನತಾ ಪ್ಲಾಟಿನ್ ನಿವಾಸಿಯಾದ 33 ವರ್ಷದ ಮಹಿಳೆಯಲ್ಲಿ ನಿನ್ನೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಗ್ರಾಮದಲ್ಲಿ ಸಾಮಾಜಿಕ ಅಂತರ ಮತ್ತು ಮುಂಜಾಗ್ರತೆ ಸಲುವಾಗಿ ಬಹುತೇಕ ಎಲ್ಲಾ ಅಂಗಡಿ-ಮುಂಗಟ್ಟಗಳನ್ನು ‌ಮುಚ್ಚಲಾಗಿದೆ. ಅಲ್ಲದೇ ಗ್ರಾಮಕ್ಕೆ ಹೊರಗಿನಿಂದ ಯಾರೂ ಬರದಂತೆ ನಿಷೇಧ ಹೇರಲಾಗಿದೆ.

ಉಳಿದಂತೆ ಗ್ರಾಮದಲ್ಲಿ ದಿನಸಿ ಅಂಗಡಿ ಮತ್ತು ಔಷಧಿ ಅಂಗಡಿಗೆ ವಿನಾಯಿತಿ ನೀಡಲಾಗಿದ್ದು, ಇನ್ನುಳಿದ ಬಹುತೇಕ ಅಂಗಡಿ-ಮುಂಗಟ್ಟಗಳು ಮುಚ್ಚಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.