ETV Bharat / state

ಹಾವೇರಿ : ಸಂತಾನ ನೀಡುವ ಶಾಂತೇಶನ ದರ್ಶನಕ್ಕೆ ಸಾವಿರಾರು ಭಕ್ತರ ದಂಡು - ಈಟಿವಿ ಭಾರತ ಕನ್ನಡ

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕು ಸಾತೇನಹಳ್ಳಿ ಗ್ರಾಮದ ಶಾಂತೇಶ ದೇವಸ್ಥಾನದಲ್ಲಿ ವಿಜಯದಶಮಿಯ ಶ್ರವಣಾ ನಕ್ಷತ್ರದಲ್ಲಿ ಮಾತ್ರ ಇಲ್ಲಿ ಸಂತಾನ ಔಷಧ ನೀಡಲಾಗುತ್ತದೆ. ಈ ದೇವಸ್ಥಾನದ ಪ್ರಸಾದದಿಂದ ಮಗುವಾಗುತ್ತದೆ ಎಂಬ ನಂಬಿಕೆ ಬೆಳೆದು ಬಂದಿದೆ.

haveri-shantesha-temple-vijayadashami-pooja
ಸಂತಾನ ನೀಡುವ ಶಾಂತೇಶನ ದರ್ಶನಕ್ಕೆ ಸಾವಿರಾರು ಭಕ್ತರ ದಂಡು
author img

By

Published : Oct 5, 2022, 10:44 PM IST

ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕು ಸಾತೇನಹಳ್ಳಿ ಗ್ರಾಮದ ಶಾಂತೇಶ ದೇವಸ್ಥಾನದಲ್ಲಿ ಪ್ರತಿವರ್ಷ ವಿಶಿಷ್ಟ ಆಚರಣೆಯೊಂದು ಆಚರಿಸಿಕೊಂಡು ಬರಲಾಗುತ್ತಿದೆ. ಶಾಂತೇಶ ದೇವಸ್ಥಾನದಲ್ಲಿ ಪ್ರತಿವರ್ಷ ವಿಜಯದಶಮಿಯಂದು ಮಕ್ಕಳಿಲ್ಲದ ಮಹಿಳೆಯರಿಗೆ ಇಲ್ಲಿ ಔಷಧ ನೀಡಲಾಗುತ್ತದೆ.

ವಿಜಯದಶಮಿಯ ಶ್ರವಣಾ ನಕ್ಷತ್ರದಲ್ಲಿ ಮಾತ್ರ ಇಲ್ಲಿ ಸಂತಾನ ಔಷಧ ನೀಡಲಾಗುತ್ತದೆ. ಈ ಔಷಧ ಪಡೆಯಲು ಆಂಧ್ರ, ತಮಿಳುನಾಡು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಹಿಳೆಯರು ಆಗಮಿಸಿದ ಸಂತಾನ ಔಷಧ ಪಡೆಯುತ್ತಾರೆ. ದೇವಸ್ಥಾನದ ಅರ್ಚಕ ಕುಟುಂಬದವರು ಕಳೆದ ಹಲವು ದಶಕಗಳಿಂದ ಇಲ್ಲಿ ಈ ಔಷಧ ನೀಡಲಾಗುತ್ತಿದೆ. ಶಾಂತೇಶನ ಪ್ರಸಾದ ಎಂದೇ ಕರೆಯಲಾಗುವ ಈ ಪ್ರಸಾದವನ್ನ ಬಾಳೆಹಣ್ಣಿನಲ್ಲಿ ಔಷಧ ನೀಡಲಾಗುತ್ತದೆ.

ಅರ್ಚಕರು ನೀಡುವ ಸ್ಥಳದಲ್ಲಿ ಈ ಪ್ರಸಾದ ಸ್ವೀಕರಿಸಿಬೇಕು ನಂತರ ನೀಡುವ ತೆಂಗಿನಕಾಯಿಯನ್ನು ಉಡಿ ತುಂಬಲಾಗುತ್ತದೆ. ಈ ರೀತಿ ನೀಡಿದ ತೆಂಗಿನಕಾಯಿಯನ್ನ ಮನಗೆ ತಗೆದಕೊಂಡು ಹೋಗಿ ದೇವರಮನೆಯಲ್ಲಿಟ್ಟು ಪೂಜೆ ಮಾಡಬೇಕು. ಈ ರೀತಿ ಮಾಡಿದರೆ ಒಂದು ವರ್ಷದಲ್ಲಿ ಮಕ್ಕಳಾಗುತ್ತವೆ ಎನ್ನುವ ನಂಬಿಕೆ ಇಲ್ಲಿ ಮನೆ ಮಾಡಿದೆ.

ಶಾಂತೇಶನ ಪ್ರಸಾದ ಪಡೆದು ಬಹತೇಕ ಮಹಿಳೆಯರು ಸಂತಾನ ಭಾಗ್ಯ ಪಡೆದಿದ್ದಾರೆ. ಈ ರೀತಿ ಮಕ್ಕಳು ಪಡೆದ ಮಹಿಳೆಯರು ಈ ದಿನ ದೇವಸ್ಥಾನಕ್ಕೆ ಆಗಮಿಸಿ ದೇವರಲ್ಲಿ ಹರಕೆ ಸಲ್ಲಿಸುತ್ತಾರೆ. ಮಕ್ಕಳನ್ನ ಕರೆದುಕೊಂಡು ಬಂದು ಶಾಂತೇಶನಿಗೆ ತೆಂಗಿನಕಾಯಿ ತುಲಾಭಾರ ನೀಡುತ್ತಾರೆ. ಕೆಲ ಮಹಿಳೆಯರು ತೊಟ್ಟಿಲು ನೀಡುತ್ತಾರೆ. ಪ್ರತಿವರ್ಷ ವಿಜಯದಶಮಿಗೆ ಶಾಂತೇಶನ ದರ್ಶನ ಪಡೆದು ಹರಕೆ ತೀರಿಸುತ್ತಾರೆ. ಮೊದಲ ವರ್ಷ ಮಕ್ಕಳಾಗದಿದ್ದರೆ ಕನಿಷ್ಟ ಮೂರು ವರ್ಷ ಶಾಂತೇಶನ ಪ್ರಸಾದ ತಗೆದುಕೊಂಡರೆ ಮಕ್ಕಳಾಗುತ್ತವೆ ಎನ್ನಲಾಗುತ್ತದೆ.

ಸಂತಾನ ನೀಡುವ ಶಾಂತೇಶನ ದರ್ಶನಕ್ಕೆ ಸಾವಿರಾರು ಭಕ್ತರ ದಂಡು

ಹಲವು ವೈದ್ಯರಲ್ಲಿ ತೋರಿಸಿ ಮಕ್ಕಳಾಗದ ಮಹಿಳೆಯರಿಗೆ ಇಲ್ಲಿ ಮಕ್ಕಳಾಗಿರುವ ಉದಾಹರಣಿಗಳಿವೆ. ಹಿಂದೂ- ಮುಸ್ಲಿಂ ಕ್ರೈಸ್ತ ಎನ್ನದೇ ಎಲ್ಲ ಧರ್ಮದ ಮಹಿಳೆಯರು ಇಲ್ಲಿ ಔಷಧ ಪಡೆಯುತ್ತಾರೆ. ಶಾಂತೇಶನ ದರ್ಶನ ಪಡೆದು ಅರ್ಚಕರು ನೀಡುವ ಪ್ರಸಾದ ಸ್ವೀಕರಿಸಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಾರೆ. ತಾವು ಮಕ್ಕಳು ಪಡೆದು ಸಂತಾನ ಭಾಗ್ಯ ಪಡೆದಿದ್ದೇವೆ ಇಲ್ಲಿಗೆ ಬರುವ ಭಕ್ತರಿಗೆ ಶಾಂತೇಶ ಮಕ್ಕಳ ಭಾಗ್ಯ ಕರುಣಿಸುತ್ತಾನೆ ಎನ್ನುತ್ತಾರೆ ಇಲ್ಲಿಗೆ ಬರುವ ಮಹಿಳೆಯರು.

ಇದನ್ನೂ ಓದಿ : ಮಂಗಳೂರು ದಸರಾದ ಅದ್ಧೂರಿ ಶೋಭಾಯಾತ್ರೆ: ನಾಳೆ ಬೆಳಗ್ಗೆ ಸಂಪನ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.