ಹಾವೇರಿ : ಸರ್ವೋಚ್ಚ ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರಿ ಪೊಲೀಸರು ಬೈಕ್ ಸವಾರರಿಗೆ ರಸ್ತೆ ನಿಯಮಗಳ ಕುರಿತಂತೆ ಜಾಗೃತಿ ಮೂಡಿಸಿದರು.
ನಂಬರ್ ಪ್ಲೇಟ್‌ಗಳ ಮೇಲೆ ಸಂಖ್ಯೆಯನ್ನು ಬಿಟ್ಟು ಹೆಸರು ಇತ್ಯಾದಿಗಳನ್ನು ಹಾಕಿದ ಸವಾರರಿಗೆ ದಂಡಹಾಕಿ ಎಚ್ಚರಿಸಿದರು. ಅಲ್ಲದೇ ಆ ರೀತಿ ಹಾಕಿದ ಅಕ್ಷರಗಳನ್ನು ಕಿತ್ತು ಹಾಕಿದರು. ಇದೇ ವೇಳೆ ಹೆಲ್ಮೆಟ್ ಧರಿಸದೇ ಬಂದ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದರು.
ಸಂಚಾರಿ ಪಿಎಸ್ಐ ಪಲ್ಲವಿ ವಾಹನ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಹಾವೇರಿ ಸಂಚಾರಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.