ಹಾವೇರಿ: ನಗರದಲ್ಲಿ ಮಾಸ್ಕ್ ಧರಿಸದೇ ಸಂಚರಿಸುವ ದ್ವಿಚಕ್ರವಾಹನ ಸವಾರರನ್ನು ತಡೆಯುವ ಪೊಲೀಸರು ದಂಡ ವಸೂಲಿ ಮಾಡುವ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ.
ರಾಜ್ಯದಲ್ಲಿ ನಿರಂತರವಾಗಿ ಏರುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಸಹ ಜನರು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಕೋವಿಡ್ ಎರಡನೇ ಅಲೆ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಪ್ರವೃತ್ತರಾಗಿರುವ ಹಾವೇರಿ ಪೊಲೀಸರು, ನಿಯಮ ಪಾಲಿಸದ ಸವಾರರಿಗೆ 100 ರೂ. ದಂಡ ವಿಧಿಸುತ್ತಿದ್ದಾರೆ.
ಇದ್ರ ಜೊತೆಗೆ, ವಿನಾಕಾರಣ ಮನೆಯಿಂದ ಹೊರ ಬರದಂತೆ, ಗುಂಪು ಸೇರದಂತೆ ಹಾಗೂ ಮತ್ತೆ ಲಾಕ್ಡೌನ್ ಆಗದಂತೆ ಎಚ್ಚರ ವಹಿಸಲು ಮನವಿ ಮಾಡಿದರು.
ಇದನ್ನೂ ಓದಿ: ಕಲಬುರಗಿಯಲ್ಲಿ 513 ಕೋವಿಡ್ ಸೋಂಕಿತರು ಪತ್ತೆ, 6 ಜನ ಬಲಿ