ETV Bharat / state

ಹಾವೇರಿ: ತಾಯಿಯ ಹುಟ್ಟುಹಬ್ಬವನ್ನು ವಿಮಾನದಲ್ಲಿ ಆಚರಿಸಿದ ಹಳ್ಳಿ ಹೈದ - ವರ್ಷಗಳ ಕನಸನ್ನು ನನಸಾಗಿಸಿದ ಕಾನ್ಸ್​ಟೇಬಲ್

ತಾಯಿಯ ಹುಟ್ಟುಹಬ್ಬ ವಿಮಾನದಲ್ಲಿ ಆಚರಿಸಿದ ಹಳ್ಳಿ ಹೈದ - ವಿಮಾನದಲ್ಲಿ ತಾಯಿಯ ಜನ್ಮದಿನ ಆಚರಣೆ - ಹಲವು ವರ್ಷಗಳ ಕನಸನ್ನು ನನಸಾಗಿಸಿದ ಹಾವೇರಿ ಮೂಲದ ಕಾನ್ಸ್​ಟೇಬಲ್​​​​

haveri-police-constable-celebrates-mothers-birthday-on-plane
ತಾಯಿಯ ಹುಟ್ಟುಹಬ್ಬವನ್ನು ವಿಮಾನದಲ್ಲಿ ಆಚರಿಸಿದ ಹಳ್ಳಿ ಹೈದ
author img

By

Published : Jan 18, 2023, 8:04 PM IST

ತಾಯಿಯ ಹುಟ್ಟುಹಬ್ಬವನ್ನು ವಿಮಾನದಲ್ಲಿ ಆಚರಿಸಿದ ಪೊಲೀಸ್​ ಕಾನ್​ಸ್ಟೇಬಲ್​​

ಹಾವೇರಿ: ತಂದೆ ತಾಯಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತೆಯೇ ತಮ್ಮ ಹೆತ್ತವರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಅವರು ಇರುವಷ್ಟು ದಿನ ಚೆನ್ನಾಗಿ ನೋಡಿಕೊಂಡರೆ ಸಾಕು ಹೆತ್ತ ಕರುಳಿಗೆ ಖುಷಿ ತರುತ್ತದೆ. ಆದರೆ ಇಂದು ಆಧುನೀಕರಣದಿಂದಾಗಿ ಸಂಬಂಧಗಳ ಮಹತ್ವ ಕಳೆಗುಂದಿದೆ. ಎಷ್ಟೋ ಮಕ್ಕಳು ತಮ್ಮ ತಂದೆ ತಾಯಿಯನ್ನು ಕಳೆದು ಕೊಂಡಿರುತ್ತಾರೆ. ಇನ್ನು ಕೆಲವರಿಗೆ ತಂದೆ ತಾಯಿ ಇದ್ದರೂ ಇವರನ್ನು ನೋಡಿಕೊಳ್ಳುವ ಭಾಗ್ಯ ಇರುವುದಿಲ್ಲ. ಇನ್ನು ಕೆಲ ಮಕ್ಕಳು ವೃದ್ದಾಶ್ರಮಗಳಲ್ಲಿ ತಂದೆ ತಾಯಿಯನ್ನು ಬಿಟ್ಟು ನಗರದಲ್ಲಿ ವಾಸಿಸುತ್ತಾರೆ.

ಆದರೆ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಮ್ಮನಹಳ್ಳಿಯ ಹನುಮಂತಪ್ಪ ಸುಂಕದ ಎಂಬವರು ತನ್ನ ತಾಯಿಯ ಜನ್ಮದಿನವನ್ನು ವಿಶೇಷವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ. ಹನುಮಂತಪ್ಪ ತನ್ನ ತಾಯಿ ಪಾರ್ವತಿಯವರ 63ನೇ ಜನ್ಮದಿನವನ್ನು ವಿಮಾನದಲ್ಲಿ ಆಚರಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಹನುಮಂತಪ್ಪ ಅವರು ಹಾವೇರಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್​ಟೇಬಲ್​​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನನ್ನ ತಾಯಿ ಸಾಕಷ್ಟು ಕಷ್ಟಗಳಿದ್ದರೂ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ನನ್ನ ಓದಿಗೆ ಸಹಕರಿಸಿದ್ದಾರೆ. ಅವರ ಪ್ರೀತಿ ವಾತ್ಸಲ್ಯದಿಂದ ಇಂದು ನಾನು ಕಾನ್ಸ್​ಟೇಬಲ್​​ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ಈ ಸ್ಥಾನಕ್ಕೆ ಬರಲು ಪ್ರಮುಖ ಕಾರಣ ನನ್ನ ತಾಯಿ ಎಂದು ಹನುಮಂತಪ್ಪ ಹೇಳುತ್ತಾರೆ.

ಕಳೆದ ಕೆಲ ವರ್ಷಗಳಿಂದ ಹನುಮಂತಪ್ಪ ಅವರು ತನ್ನ ತಾಯಿಯ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸುವ ಕನಸು ಕಂಡಿದ್ದರು. ಆಗ ಅವರಿಗೆ ವಿಮಾನದಲ್ಲಿ ತಮ್ಮ ತಾಯಿಯ ಜನ್ಮದಿನವನ್ನು ಆಚರಿಸುವ ಐಡಿಯಾ ಹೊಳೆದಿದೆ. ಈ ವಿಷಯ ತಾಯಿಗೆ ಹೇಳಿದಾಗ ಅವರು ನಿರಾಕರಿಸಿದ್ದಾರೆ. ಅಲ್ಲದೇ ತಂದೆ ತಾಯಿಯನ್ನು ದೇವರಂತೆ ಕಾಣುತ್ತೀಯಾ. ಇಳಿವಯಸ್ಸಿನಲ್ಲಿರುವ ನಮಗೆ ಆಸರೆಯಾಗಿದ್ದೀಯಾ ನಮಗೆ ಅಷ್ಟು ಸಾಕು ಎಂದು ಹೇಳಿದ್ದಾರೆ.

ವಿಮಾನದಲ್ಲಿ ತಾಯಿಯ ಹುಟ್ಟು ಹಬ್ಬ ಆಚರಣೆ : ಇನ್ನು ಹನುಮಂತಪ್ಪ ಟಿಕೆಟ್​ ಬುಕ್​ ಮಾಡುವಾಗ ತಾಯಿ ಬೇಡ ಎಂದಿದ್ದಾರೆ. ಜನ್ಮದಿನಕ್ಕೆ ಎರಡು ದಿನ ಇರುವಾಗ ಟಿಕೆಟ್ ಕಾಯ್ದಿರಿಸಿದ್ದೇನೆ. ಹಣ ವಾಪಸ್​ ಬರುವುದಿಲ್ಲ. ನೀನು ಬರಲೇಬೇಕು ತಾಯಿಯನ್ನು ಒತ್ತಾಯಿಸಿದ್ದಾರೆ. ಬಳಿಕ ತಾಯಿ ವಿಮಾನದಲ್ಲಿ ಜನ್ಮದಿನ ಆಚರಿಸಲು ಒಪ್ಪಿದ್ದಾರೆ.

ಈ ಹಿನ್ನೆಲೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುವ ಇಂಡಿಗೋ ವಿಮಾನದಲ್ಲಿ ಟಿಕೆಟ್​ ಬುಕ್​ ಮಾಡಿ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ, ಹನುಮಂತಪ್ಪ ಇಂಡಿಗೋ ವಿಮಾನದ ಸಿಬ್ಬಂದಿಗೆ ತಮ್ಮ ಆಸೆಯನ್ನು ತಿಳಿಸಿದ್ದಾರೆ. ಇದಕ್ಕೆ ವಿಮಾನದ ಸಿಬ್ಬಂದಿಗಳು ಪೂರಕವಾಗಿ ಪ್ರತಿಕ್ರಿಯಿಸಿ ಕೇಕ್ ತೆಗೆದುಕೊಂಡು ವಿಮಾನದಲ್ಲಿ ಜನ್ಮದಿನ ಆಚರಣೆ ಮಾಡಲು ಸಹಕರಿಸಿದ್ದಾರೆ. ಜೊತೆಗೆ ಗಗನಸಖಿಯರು ಜನ್ಮದಿನದ ಸಂಭ್ರಮದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ವರ್ಷಗಳ ಕನಸನ್ನು ನನಸಾಗಿಸಿದ ಕಾನ್ಸ್​ಟೇಬಲ್​​ : ಹನುಮಂತಪ್ಪ ಅವರು ನಾಲ್ಕು ಜನರಿಗೆ ಸುಮಾರು ತಲಾ ನಾಲ್ಕು ಸಾವಿರ ರೂಪಾಯಿ ಖರ್ಚು ಮಾಡಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದಾರೆ. ಈ ಮೂಲಕ ವಿಮಾನದಲ್ಲಿ ತನ್ನ ತಂದೆ, ತಾಯಿ ಮತ್ತು ಮಗಳನ್ನು ಕರೆದುಕೊಂಡು ಹೋಗಿ ಅಲ್ಲಿಯೇ ತನ್ನ ತಾಯಿಯ ಜನ್ಮದಿನ ಆಚರಿಸುವ ಮೂಲಕ ತಮ್ಮ ಕನಸು ನನಸು ಮಾಡಿದ್ದಾರೆ. ಈ ಕ್ಷಣವನ್ನು ನನ್ನ ಜೀವನದಲ್ಲಿ ಯಾವತ್ತೂ ಮರೆಯುವುದಿಲ್ಲ ಎಂದು ಹನುಮಂತಪ್ಪ ಹೇಳುತ್ತಾರೆ.

ತಾಯಿ ವಿಮಾನ ಹತ್ತುವಾಗ ಸ್ವಲ್ಪ ಹೆದರಿಕೆ ವ್ಯಕ್ತಪಡಿಸಿದ್ದರು. ವಿಮಾನ ಟೇಕಾಫ್ ಆಗುವಾಗ ಸ್ವಲ್ಪ ತಲೆ ಸುತ್ತು ಬಂದಂತೆ ಆಗಿದ್ದು ಬಿಟ್ಟರೆ ಉಳಿದಂತೆ ಮನೆಯಂತೆ ಇದೆ ಎಂದು ಹನುಮಂತಪ್ಪ ಅವರ ತಾಯಿ ಪಾರ್ವತಿ ಅವರು ತಮ್ಮ ವಿಮಾನ ಯಾನದ ಅನುಭವವನ್ನು ತಿಳಿಸಿದ್ದಾರೆ. ಅದೇ ದಿನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗಾಯಕ ವಿಜಯಪ್ರಕಾಶ್​ ಕೂಡ ಹನುಮಂತಪ್ಪ ಅವರ ತಾಯಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ : ಐನಾಪುರ ಕೃಷಿ ಮೇಳ: ಸಕ್ರಿಯವಾಗಿ ಪಾಲ್ಗೊಂಡ ಮಾಹಿತಿ ಪಡೆದ ರೈತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.