ಹಾವೇರಿ: ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಾವೇರಿ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದೆ.
ನಗರಸಭೆಯ 31 ಸ್ಥಾನಗಳಲ್ಲಿ 15 ಸ್ಥಾನ ಕಾಂಗ್ರೆಸ್, 9 ಸ್ಥಾನ ಬಿಜೆಪಿ ಮತ್ತು 7 ಸ್ಥಾನಗಳಲ್ಲಿ ಪಕ್ಷೇತರರಿದ್ದಾರೆ. ಅತಿಹೆ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಇದ್ದರೂ ಸಹ ಅಧಿಕಾರ ಹಿಡಿಯುವ ಮ್ಯಾಜಿಕ ನಂಬರ್ ಕಾಂಗ್ರೆಸ್‌ಗೆ ಇಲ್ಲ. ಹೀಗಾಗಿ ಇಲ್ಲಿ ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ.
ಈ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಪಕ್ಷಗಳ ಮುಖಂಡರು ಸ್ಥಳೀಯ ನಾಯಕರುಗಳ ಸಭೆಗಳು ಆರಂಭವಾಗಿವೆ. ಕಾಂಗ್ರೆಸ್‌ನಲ್ಲಿ ಸಂಜೀವ್ಕುಮಾರ್ ನೀರಲಗಿ ಮತ್ತು ಮಾಜಿ ಸಚಿವ ಶಿವಣ್ಣನವರ್ ಪುತ್ರ ನಿಂಗಪ್ಪ ಅವರ ಹೆಸರು ಕೇಳಿಬರುತ್ತಿದೆ. ಇನ್ನು ಬಿಜೆಪಿಯಲ್ಲಿ ಗಿರೀಶ್ ತುಪ್ಪದ ಹೆಸರು ಮುಂಚೂಣಿಯಲ್ಲಿದ್ದು, ಅಧ್ಯಕ್ಷಗಿರಿ ಯಾರಿಗೆ ಒಲಿಯುತ್ತೆ ಎಂಬುದನ್ನು ಕಾದು ನೋಡಬೇಕಿದೆ.