ETV Bharat / state

ಅಕ್ಕಿ ಕಾಳಿನಲ್ಲಿ ನಾಡಗೀತೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದ ಹಾವೇರಿಯ ಮೈಕ್ರೋ ಕಲಾವಿದ - etv bharat karnataka

India book of records: ಮೈಕ್ರೋ ಕಲಾವಿದ ಪರಮೇಶ್​ ಶಂಕ್ರಪ್ಪ ಬಂಡಿ ಅವರು ಅಕ್ಕಿ ಕಾಳಿನ ಮೇಲೆ ನಾಡಗೀತೆ ಬರೆದು ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ಗೆ ಸೇರ್ಪಡೆಯಾಗಿದ್ದಾರೆ.

ಮೈಕ್ರೋ ಕಲಾವಿದ ಪರಮೇಶ್​ ಶಂಕ್ರಪ್ಪ ಬಂಡಿ
ಮೈಕ್ರೋ ಕಲಾವಿದ ಪರಮೇಶ್​ ಶಂಕ್ರಪ್ಪ ಬಂಡಿ
author img

By ETV Bharat Karnataka Team

Published : Oct 28, 2023, 12:05 PM IST

Updated : Oct 28, 2023, 10:24 PM IST

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದ ಹಾವೇರಿಯ ಮೈಕ್ರೋ ಕಲಾವಿದ

ಹಾವೇರಿ: ತಾಲೂಕಿನ ಗುಡಿಸಲಕೊಪ್ಪ ಗ್ರಾಮದ ಪರಮೇಶ್​ ಶಂಕ್ರಪ್ಪ ಬಂಡಿ ಎಂಬ ಮೈಕ್ರೋ ಕಲಾವಿದ ಅಕ್ಕಿ ಕಾಳಿನ ಮೇಲೆ ನಾಡಗೀತೆ ಬರೆದು ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ಗೆ ಸೇರ್ಪಡೆಯಾಗಿದ್ದಾರೆ. ಸೂಕ್ಷ್ಮಕಲೆಯನ್ನು ಕರಗತ ಮಾಡಿಕೊಂಡಿರುವ ಪರಮೇಶ್​ ಕೇವಲ 80 ನಿಮಿಷದಲ್ಲಿ 144 ಅಕ್ಕಿಕಾಳಿನಲ್ಲಿ ನಾಡಗೀತೆ ಬರೆದು ಈ ದಾಖಲೆ ನಿರ್ಮಿಸಿದ್ದಾರೆ.

ಮೈಕ್ರೋ ಕಲಾವಿದ ಪರಮೇಶ್​ ಶಂಕ್ರಪ್ಪ ಬಂಡಿ
ಮೈಕ್ರೋ ಕಲಾವಿದ ಪರಮೇಶ್​ ಶಂಕ್ರಪ್ಪ ಬಂಡಿ

ಪರಮೇಶ್ ಪಿಯುಸಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರಸ್ತುತ ಅವರು ಕುಕ್ಕೆ ಸುಬ್ರಹ್ಮಣ್ಯ ಶ್ರೀಕ್ಷೇತ್ರದಲ್ಲಿ ಡ್ರೈಫ್ರೂಟ್ ಅಂಗಡಿ ನಡೆಸುತ್ತ ಜೀವನ ಸಾಗಿಸುತ್ತಿದ್ದಾರೆ. ಪರಮೇಶ್ ಈ ಹಿಂದೆ 92 ಅಕ್ಕಿಕಾಳುಗಳಲ್ಲಿ ವಂದೇ ಮಾತರಂ ಗೀತೆ ಬರೆದು ಅದನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. 111 ಅಕ್ಕಿಕಾಳುಗಳಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ತೋತ್ರ ಬರೆದು ಅದನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅಡಳಿತ ಮಂಡಳಿಗೆ ನೀಡಿದ್ದಾರೆ. ಕೇವಲ 30 ಅಕ್ಕಿಕಾಳುಗಳಲ್ಲಿ ಕಾಂತಾರ ಸಿನಿಮಾದ ವರಾಹ ರೂಪಂ ಗೀತೆಯನ್ನ ಬರೆದಿದ್ದಾರೆ. ರಾಷ್ಟ್ರೀಯ ಸ್ವಯಂ ಸಂಘದ ಗೀತೆಯನ್ನ ಕನ್ನಡ, ಹಿಂದಿ ಮತ್ತು ಇಂಗ್ಲಿಷ್​​ ಭಾಷೆಗಳಲ್ಲಿ ಬರೆದಿದ್ದಾರೆ.

ಅಕ್ಕಿ ಕಾಳಿನಲ್ಲಿ ನಾಡಗೀತೆ
ಅಕ್ಕಿ ಕಾಳಿನಲ್ಲಿ ನಾಡಗೀತೆ

ಏಕಕಾಲದಲ್ಲಿ ಎರಡೆರಡು ದಾಖಲೆ- ಸಂತಸ: ಈಟಿವಿ ಭಾರತದೊಂದಿಗೆ ಮಾತನಾಡಿರುವ ಮೈಕ್ರೋ ಕಲಾವಿದ ಪರಮೇಶ್​ ಶಂಕ್ರಪ್ಪ ಬಂಡಿ, "ನಾನು ಕೇವಲ 80 ನಿಮಿಷದಲ್ಲಿ 144 ಅಕ್ಕಿಕಾಳನ್ನು ಬಳಸಿ ನಾಡ ಗೀತೆ ಬರೆದಿದ್ದೇನೆ. ರೆಕಾರ್ಡ್ಸ್ ಆಫ್ ಇಂಡಿಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ ತಂಡ ಖುದ್ದಾಗಿ ಬಂದು ಅಕ್ಕಿಕಾಳಿನ ಮೇಲೆ ಬರೆಯುತ್ತಿರುವುದನ್ನು ವಿಡಿಯೋ ಮಾಡಿ, ಮೆಡಲ್​ ಮತ್ತು ಪ್ರಮಾಣ ಪತ್ರವನ್ನು ಹಸ್ತಾಂತರಿಸಿದ್ದಾರೆ. ಏಕ ಕಾಲದಲ್ಲಿ ಎರಡು ದಾಖಲೆ ಮಾಡಿರುವುದು ನನಗೆ ಸಂತಸ ತಂದಿದೆ. ಮುಂದೆ ಗಿನ್ನಿಸ್​ ರೆಕಾರ್ಡ್ ಮಾಡುವ ಆಸೆ ಇದೆ. ಜನವರಿಯಲ್ಲಿ ನಡೆಯಲಿರುವ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆಯನ್ನು 10 ರಿಂದ 20 ಸಾವಿರ ಅಕ್ಕಿಕಾಳನ್ನು ಬಳಸಿ ಬರೆದು ಅವರಿಗೆ ನೀಡಿ ಗಿನ್ನಿಸ್​ ದಾಖಲೆ ಮಾಡಲು ಬಯಸಿದ್ದೇನೆ" ಎಂದು ತಿಳಿಸಿದರು.

ಅಕ್ಕಿ ಕಾಳಿನಲ್ಲಿ ನಾಡಗೀತೆ
ಅಕ್ಕಿ ಕಾಳಿನಲ್ಲಿ ನಾಡಗೀತೆ

ಗಿನ್ನೆಸ್ ದಾಖಲೆ ಬರೆಯುವ ಬಯಕೆ: "ಮೈಕ್ರೋ ಕಲಾವಿದ ಪರಮೇಶ್​ ಅವರು ಸೂಕ್ಷ್ಮಕಲೆಯನ್ನು ಕರಗತ ಮಾಡಿಕೊಂಡು ನಾಡಿನಾದ್ಯಂತ ಜನಪ್ರಿಯತೆಯನ್ನು ಗಳಿಸಿದ್ದಾರೆ. 120 ನಿಮಿಷ ಮತ್ತು ಅತಿ ಕಡಿಮೆ ಅಕ್ಕಿಕಾಳಿನಲ್ಲಿ ಬರೆಯಬೇಕೆಂಬ ಗುರಿ ಇತ್ತು, ಪರಮೇಶ್​ ಅವರು ಕೇವಲ 80 ನಿಮಿಷದಲ್ಲಿ 144 ಅಕ್ಕಿ ಕಾಳಿನಲ್ಲಿ ನಾಡಗೀತೆ ಬರೆದು ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಯಾಗಿದ್ದಾರೆ. ಅವರು ಮುಂದೆ ಗಿನ್ನಿಸ್​ ದಾಖಲೆ ಮಾಡುವ ಗುರಿಯನ್ನು ಹೊಂದಿದ್ದಾರೆ, ಅದಕ್ಕೆ ನಾವೆಲ್ಲರು ಅವರಿಗೆ ಆರ್ಥಿಕ ನೆರವು ನೀಡ ಪ್ರೋತ್ಸಾಹಿಸಬೇಕೆಂದು" - ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಮನವಿ ಮಾಡಿದರು.

ಇದನ್ನೂ ಓದಿ: ಬಟ್ಟೆ ಮೇಲೆ ಮೆಹಂದಿ ಡಿಸೈನ್ ಮಾಡಿ ದಾಖಲೆ ನಿರ್ಮಿಸಿದ ಯುವತಿ..!

Last Updated : Oct 28, 2023, 10:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.