ETV Bharat / state

ಹಾವೇರಿ: ಅಂಬಿಗರ ಚೌಡಯ್ಯ ಐಕ್ಯ ಮಂಟಪ ಅಭಿವೃದ್ಧಿಗೆ ಒತ್ತಾಯ - ಶರಣ ಅಂಬಿಗರ ಚೌಡಯ್ಯ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರದಲ್ಲಿರುವ ಅಂಬಿಗರ ಚೌಡಯ್ಯ ಐಕ್ಯ ಮಂಟಪ ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ambigara Choudayya Ekya Mandapam
ಅಂಬಿಗರ ಚೌಡಯ್ಯ ಐಕ್ಯ ಮಂಟಪ ಅಭಿವೃದ್ಧಿಗೆ ಒತ್ತಾಯ
author img

By

Published : Aug 20, 2023, 8:50 AM IST

ಅಂಬಿಗರ ಚೌಡಯ್ಯ ಐಕ್ಯ ಮಂಟಪ ಅಭಿವೃದ್ಧಿಗೆ ಒತ್ತಾಯ

ಹಾವೇರಿ : 12ನೇ ಶತಮಾನ ಹಲವು ಶರಣರಿಂದ ಕೂಡಿದ ಕಾಲಘಟ್ಟ. ಈ ಶತಮಾನದಲ್ಲಿದ್ದ ಪ್ರಮುಖರಲ್ಲಿ ಅಂಬಿಗರ ಚೌಡಯ್ಯ ಒಬ್ಬರು. ಅಂಬಿಗ ಸಮುದಾಯಕ್ಕೆ ಸೇರಿದ ಇವರನ್ನು 'ನಿಜಶರಣ ಅಂಬಿಗರ ಚೌಡಯ್ಯ' ಎಂದೇ ಕರೆಯಲಾಗುತ್ತದೆ. ಪ್ರಮುಖ ಶಿವಶರಣ ಮತ್ತು ವಚನಕಾರರಾಗಿದ್ದ ಚೌಡಯ್ಯ ಹಲವು ಮಹತ್ವದ ವಚನಗಳನ್ನು ರಚಿಸಿದ್ದಾರೆ.

ಮೊನಚು ವಚನಗಳಿಂದ ನಿಷ್ಠರಾಗಿದ್ದ ಅಂಬಿಗರ ಚೌಡಯ್ಯ ಹಾವೇರಿ ಜಿಲ್ಲೆಯವರು. ಬಸವಣ್ಣನವರ ಅನುಭವ ಮಂಟಪದಲ್ಲಿ ಸ್ಥಾನ ಗಳಿಸಿದ್ದರು. ವೃತ್ತಿಯಲ್ಲಿ ಅಂಬಿಗರಾಗಿ ಪ್ರವೃತ್ತಿಯಲ್ಲಿ ಅನುಭವಿಯಾಗಿದ್ದ ಇವರು ಬದುಕಿನ ಕೊನೆಯ ದಿನಗಳನ್ನು ಕಳೆದಿದ್ದು ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರದಲ್ಲಿ. ಚೌಡಯ್ಯದಾನಪುರದ ತುಂಗಭದ್ರಾ ನದಿಯ ತಟದಲ್ಲೇ ಐಕ್ಯರಾಗಿದ್ದರು.

"ಇಂದು ಅಂಬಿಗರ ಚೌಡಯ್ಯ ಅವರ ಐಕ್ಯ ಮಂಟಪ ಅನಾಥವಾಗಿದೆ. ತುಂಗಭದ್ರೆ ಮೈದುಂಬಿದಾಗ ನೀರಲ್ಲಿ ಮುಳುಗುವ ಐಕ್ಯಮಂಟಪ ಉಳಿದ ದಿನಗಳಲ್ಲಿ ಭಕ್ತರ ದರ್ಶನಕ್ಕೆ ಲಭ್ಯವಾಗುತ್ತದೆ. ಈ ಮಂಟಪವನ್ನು 1968ರಲ್ಲಿ ಅಂದಿನ ಚೌಡಯ್ಯದಾನಪುರದ ಶಿವದೇವ ಒಡೆಯರು ನಿರ್ಮಿಸಿದ್ದರು. ಆದ್ರೆ, ಯಾವ ಸರ್ಕಾರವೂ ಸಹ ಇದುವರೆಗೆ ಐಕ್ಯ ಮಂಟಪದ ಅಭಿವೃದ್ಧಿಗೆ ಮುಂದಾಗಿಲ್ಲ. ಅಂದು ನಿರ್ಮಿಸಿದ ಕಲ್ಲಿನ ಮಂಟಪ ಬಿಟ್ಟರೆ ಸ್ಥಳದ ಬೇರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಮಂಟಪವನ್ನು ಕೂಡಲಸಂಗಮದ ಬಸವಣ್ಣನವರ ಐಕ್ಯ ಮಂಟಪದಂತೆಯೇ ಅಭಿವೃದ್ಧಿ ಮಾಡಬೇಕು" ಎನ್ನುತ್ತಾರೆ ಸ್ಥಳೀಯರಾದ ಗೋಣೆಪ್ಪಾ ದೀಪಾವಳಿ.

ambigara Choudayya Ekya Mandapam
ಅಂಬಿಗರ ಚೌಡಯ್ಯ ಐಕ್ಯ ಮಂಟಪ ಅಭಿವೃದ್ಧಿಗೆ ಒತ್ತಾಯ

ಇದನ್ನೂ ಓದಿ : ಅಂಬಿಗರ ಚೌಡಯ್ಯ ನಾಮಫಲಕ ತೆರವುಗೊಳಿಸುವಂತೆ ಆಗ್ರಹ, ದಸಂಸ ವತಿಯಿಂದ ಪ್ರತಿಭಟನೆ

ಅಂಬಿಗರ ಚೌಡಯ್ಯರ ಐಕ್ಯ ಮಂಟಪ ಅಭಿವೃದ್ಧಿ ಮಾಡುವುದರಿಂದ ಚೌಡಯ್ಯದಾನಪುರ ಪ್ರವಾಸಿತಾಣವಾಗುತ್ತದೆ. ರಾಜ್ಯದ ವಿವಿಧೆಡೆಯಿಂದ ಬರುವ ಭಕ್ತರು ಮಳೆಗಾಲದಲ್ಲೂ ಐಕ್ಯ ಮಂಟಪವನ್ನು ಕಣ್ತುಂಬಿಕೊಳ್ಳಬಹುದು. ಸರ್ಕಾರಗಳು ಗಮನಹರಿಸಿ ಕಾಯಕಲ್ಪ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬಸವಣ್ಣನ ಜತೆ ಅಂಬಿಗರ ಚೌಡಯ್ಯ ಜಾತಿ , ಮೌಢ್ಯ ತೊಲಗಿಸಲು ಶ್ರಮಿಸಿದ ನಿಜ ಶರಣ..

"ಐಕ್ಯ ಮಂಟಪ ನದಿಯಲ್ಲಿ ಇರುವುದರಿಂದ ಬಟ್ಟೆ ತೊಳೆಯಲು ಬರುವ ಮಹಿಳೆಯರು ಮಂಟಪದ ಮೇಲೆಯೇ ಮಲಿನ ಬಟ್ಟೆಗಳನ್ನು ಹಾಕುತ್ತಾರೆ. ತೊಳೆದ ಬಟ್ಟೆಗಳನ್ನು ಒಣ ಹಾಕಲು ಐಕ್ಯ ಮಂಟಪ ಉಪಯೋಗಿಸುತ್ತಾರೆ. ಬೇಸಿಗೆ ಕಾಲದಲ್ಲಿ ಮಕ್ಕಳು ಇದನ್ನು ಆಟದ ಮೈದಾನವಾಗಿ ಮಾಡಿಕೊಳ್ಳುತ್ತಾರೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು. ಆದಷ್ಟು ಬೇಗ ಐಕ್ಯ ಮಂಟಪನ್ನು ಅಭಿವೃದ್ಧಿ ಮಾಡಬೇಕು. ಮಂಟಪದ ಸಮೀಪದಲ್ಲೇ ಕಲ್ಯಾಣಿ ಚಾಲುಕ್ಯರು ಕಟ್ಟಿಸಿದ ಮುಕ್ತೇಶ್ವರ ದೇವಸ್ಥಾನವಿದೆ. ಇಲ್ಲಿಂದ ನೇರವಾಗಿ ಮಂಟಪಕ್ಕೆ ಮಾರ್ಗ ಕಲ್ಪಿಸಬೇಕು. ರಾಜ್ಯ ಸರ್ಕಾರ ಪುರಾತತ್ವ ಇಲಾಖೆ ಜೊತೆ ಚರ್ಚಿಸಿ ಆದಷ್ಟು ಬೇಗ ಅಂಬಿಗರ ಚೌಡಯ್ಯ ಐಕ್ಯಮಂಟಪ ಅಭಿವೃದ್ಧಿಪಡಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

ಇದನ್ನೂ ಓದಿ : ಅಂಬಿಗರ ಚೌಡಯ್ಯ ಭವನ ಕಾಮಗಾರಿ ಚುರುಕುಗೊಳಿಸಲು ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.