ETV Bharat / state

ಪರಿಸರ ಸ್ನೇಹಿ ಗಣಪತಿ ತಯಾರು ಮಾಡುವ ಹಾವೇರಿಯ ನೆಗಳೂರುಮಠ ಕುಟುಂಬ - ಗಣೇಶ ಮೂರ್ತಿ ತಯಾರಿಕೆಯ ಒಂದು ಶತಮಾನದ ನಂಟಿದೆ

ಹಾವೇರಿಯ ನೆಗಳೂರುಮಠ ಕುಟುಂಬದ ಸದಸ್ಯರು ಗಣಪತಿ ಹಬ್ಬದ ಸಮಯದಲ್ಲಿ ಎಲ್ಲರೂ ಒಂದಾಗಿ ಸೇರಿ ಪರಿಸರ ಸ್ನೇಹಿ ಗಣಪತಿ ತಯಾರಿಸುತ್ತಾರೆ. ಹಣ ನಿಗದಿ ಮಾಡದೇ ಮಾರಾಟ ಮಾಡುತ್ತಾರೆ. ಇವರ ಗಣಪತಿ ತಯಾರಿಕೆಗೆ ಹತ್ತಿರ ಸ್ನೇಹಿತರೂ ಪಾಲ್ಗೊಳ್ಳುತ್ತಾರೆ.

Haveri family that prepares eco friendly Ganapati
ಪರಿಸರ ಸ್ನೇಹಿ ಗಣಪತಿ ತಯಾರು ಮಾಡುವ ಹಾವೇರಿಯ ನೆಗಳೂರುಮಠವರ ಕುಟುಂಬ
author img

By

Published : Aug 29, 2022, 9:53 AM IST

Updated : Aug 29, 2022, 4:49 PM IST

ಹಾವೇರಿ: ಗಣೇಶ ಚತುರ್ಥಿ ಬಂದರೆ ಸಾಕು ಎಲ್ಲೆಡೆ ಸಂಭ್ರಮವೂ ಸಂಭ್ರಮ. ಹಾವೇರಿ ತಾಲೂಕು ಗುತ್ತಲ ಪಟ್ಟಣದ ನೆಗಳೂರುಮಠ ಮನೆಯಲ್ಲಂತೂ ಸಂಭ್ರಮ ಇಮ್ಮಡಿಯಾಗುತ್ತದೆ. ಇದಕ್ಕೆ ಕಾರಣ ಗಣೇಶ ಚತುರ್ಥಿ ದಿನ ಹತ್ತೀರವಾಗುತ್ತಿದ್ದಂತೆ ಈ ಕುಟುಂಬದ 15 ಕ್ಕೂ ಅಧಿಕ ಸದಸ್ಯರು ಒಟ್ಟಿಗೆ ಸೇರುವುದು.

ವಿವಿಧ ಇಲಾಖೆಗಳಲ್ಲಿ ಸರ್ಕಾರಿ ನೌಕರಿ ಮಾಡುವ ನೆಗಳೂರುಮಠ ಕುಟುಂಬದ ಸದಸ್ಯರು ಗಣೇಶನ ಹಬ್ಬಕ್ಕೆ ಒಟ್ಟಾಗಿ ಸೇರುತ್ತಾರೆ. ಗಣೇಶ ಮೂರ್ತಿ ತಯಾರಿಸುವ ಈ ಕುಟುಂಬದ ಸದಸ್ಯರು ಹಬ್ಬ ಸಮೀಪಿಸುತ್ತಿದ್ದಂತೆ ಗಣೇಶ ಮೂರ್ತಿ ತಯಾರಿಕೆಯಿಂದ ಬಣ್ಣ ಹಚ್ಚುವುದರಲ್ಲಿ ಪಾಲ್ಗೊಳ್ಳುತ್ತಾರೆ. ಕುಟುಂಬದ ಹಿರಿಯ ಸದಸ್ಯರಿಂದ ಹಿಡಿದು ಐದು ವರ್ಷದ ಮಗುವಿನವರೆಗೆ ಎಲ್ಲರೂ ಗಣೇಶ ಮೂರ್ತಿ ತಯಾರಿಸುತ್ತಾರೆ. ಈ ಕುಟುಂಬಕ್ಕೆ ಗಣೇಶ ಮೂರ್ತಿ ತಯಾರಿಕೆಯ ಒಂದು ಶತಮಾನದ ನಂಟಿದೆ.

ಪ್ರಸ್ತುತ ಕುಟುಂಬದ ಹಿರಿಯ ಸದಸ್ಯರಾಗಿರುವ ಶಿವಕುಮಾರಯ್ಯ ಅವರ ತಂದೆಯಿಂದ ಗಣೇಶ ಮೂರ್ತಿ ತಯಾರಿಸುವ ಕಲೆ ಈ ಕುಟುಂಬದ ಸದಸ್ಯರಿಗೆ ಬಳುವಳಿಯಾಗಿ ಬಂದಿದೆ. ಗೃಹ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಸೇರಿರುವ ಈ ಕುಟುಂಬದ ಸದಸ್ಯರು ಗಣೇಶ ಹಬ್ಬಕ್ಕೆ ಎಂಟರಿಂದ 15 ದಿನ ರಜೆ ಹಾಕಿ ಬರುತ್ತಾರೆ.

ಅಲ್ಲದೆ ನೆಗಳೂರುಮಠ ಮನೆತನಕ್ಕೆ ಸೇರಿದ ಸೊಸೆಯಂದಿರು, ಅಳಿಯಂದಿರು ಸಹ ಬಂದು ಈ ದಿನಗಳಲ್ಲಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ಮಗ್ನರಾಗುತ್ತಾರೆ. ಮನೆಯಿಂದ ಮದುವೆಯಾದ ಹೆಣ್ಣುಮಕ್ಕಳು ಸಹ ಗಣೇಶನ ಹಬ್ಬಕ್ಕೆ ತವರು ಮನೆಗೆ ಬರುತ್ತಾರೆ. ಅವರು ಸಹ ಗಣೇಶ ಮೂರ್ತಿ ತಯಾರಿಕೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪರಿಸರ ಸ್ನೇಹಿ ಗಣಪತಿ ತಯಾರು ಮಾಡುವ ಹಾವೇರಿಯ ನೆಗಳೂರುಮಠವರ ಕುಟುಂಬ

ಈ ಕುಟುಂಬದ ವಿಶೇಷ ಅಂದರೆ ಗಣೇಶ ಮೂರ್ತಿಗಳಿಗೆ ಬೆಲೆ ನಿಗದಿ ಮಾಡುವುದಿಲ್ಲ. ಬದಲಿಗೆ ಗಣೇಶ ಮೂರ್ತಿ ತಗೆದುಕೊಂಡು ಹೋಗುವ ಭಕ್ತರು ನೀಡಿದ ಹಣ ಮಾತ್ರ ಪಡೆಯುತ್ತಾರೆ. ಈ ಕುಟುಂಬದ ಸದಸ್ಯರು ಗಣೇಶ ಮೂರ್ತಿ ತಯಾರಿಸುವ ವೇಳೆ ಅವರ ಸ್ನೇಹಿತರು ಸಹ ಬಂದು ಗಣೇಶ ಮೂರ್ತಿ ತಯಾರಿಕೆ ಮಾಡುತ್ತಾರೆ.

ಗಣೇಶ ಮೂರ್ತಿಯನ್ನ ಮಾಡಿಕೊಂಡು ಹೋಗುವುದು ಒಂದು ಕಲೆ. ಈ ಕಲೆಯಿಂದಲೇ ನಾವು ಸಮಾಜದಲ್ಲಿ ಉತ್ತಮ ಹಂತ ತಲುಪಿದ್ದೇವೆ ಎನ್ನುತ್ತಾರೆ ಈ ಕುಟುಂಬದ ಸದಸ್ಯರು. ಗಣೇಶ ಹಬ್ಬ ಬೆರಳೆಣಿಕೆಯಷ್ಟು ದಿನಗಳಿರುವಂತೆ ನೆಗಳೂರುಮಠ ಮನೆಯಲ್ಲಿ ಎಲ್ಲಿ ನೋಡಿದರಲ್ಲಿ ಕಲಾವಿದರು ಕಾಣುತ್ತಾರೆ.

ಈ ಕುಟುಂಬ ಶತಮಾನದಿಂದ ಮಣ್ಣಿನ ಗಣೇಶನನ್ನ ಅದರಲ್ಲೂ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನ ತಯಾರಿಸುತ್ತಾ ಬಂದಿರವುದು ವಿಶೇಷ. ಭಕ್ತರು ಹೇಳುವ ರೀತಿಯಲ್ಲಿ ಈ ಕುಟುಂಬ ಗಣೇಶ ಮೂರ್ತಿ ತಯಾರಿಸುತ್ತಾ ಬಂದಿದೆ.

ಇದನ್ನೂ ಓದಿ : ವೀರ ಸಾವರ್ಕರ್ ವೇದಿಕೆಯಲ್ಲಿ ಈ ಬಾರಿ ಕಾಶಿ ವಿಶ್ವನಾಥ ರಕ್ಷಕ ಗಣಪ

Last Updated : Aug 29, 2022, 4:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.