ETV Bharat / state

ಕಟ್ಟಡ ಕೊರತೆ : ಚಳಿ, ಗಾಳಿ, ಮಳೆ ಲೆಕ್ಕಿಸದೆ ಶಾಲೆ ಹೊರಗೆ ವಿದ್ಯಾರ್ಥಿಗಳ ವ್ಯಾಸಂಗ

author img

By

Published : Dec 23, 2021, 11:34 AM IST

ಹಾವೇರಿ ಜಿಲ್ಲೆಯ ಚಿಕ್ಕಲಿಂಗದಳ್ಳಿ ಶಾಲೆಯಲ್ಲಿ ಒಂದೇ ಕೊಠಡಿಯಲ್ಲಿ ಎರಡು ಮೂರು ತರಗತಿಗಳ ವಿದ್ಯಾರ್ಥಿಗಳನ್ನ ಒಟ್ಟಿಗೆ ಕೂರಿಸಿ ಪಾಠ ಮಾಡಲಾಗುತ್ತಿದೆ. ಬಿಸಿಯೂಟ ಮತ್ತು ಸಿಬ್ಬಂದಿ ಕೊಠಡಿಯಲ್ಲಿ ಸಹ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡುವ ಅನಿವಾರ್ಯತೆ ಎದುರಾಗಿದೆ. ಕಳೆದ ಕೆಲ ತಿಂಗಳಿಂದ ಮಳೆ ಚಳಿ ಬಿಸಿಲೆನ್ನದೆ ಹೊರಗೆ ಕುಳಿತು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

chikkalingadalli-school
ಚಿಕ್ಕಲಿಂಗದಳ್ಳಿ ಶಾಲೆ

ಹಾವೇರಿ : ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಹೊರಗೆ ಕುಳಿತು ಅಭ್ಯಾಸ ಮಾಡುವ ಸ್ಥಿತಿ ಜಿಲ್ಲೆಯ ಚಿಕ್ಕಲಿಂಗದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒದಗಿಬಂದಿದೆ.

ಶಾಲೆಯಲ್ಲಿ 270ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಾಕಷ್ಟು ಕೊಠಡಿ ಇಲ್ಲದ ಪರಿಣಾಮ 50ಕ್ಕೂ ಅಧಿಕ ವಿದ್ಯಾರ್ಥಿಗಳು ಹೊರಗೆ ಕುಳಿತು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಹೊರಗೆ ದಿನನಿತ್ಯ ವಿದ್ಯಾರ್ಥಿಗಳ ಕೈಯಿಂದ ಶಿಕ್ಷಕರು ತಾಡಪತ್ರಿಯಿಂದ ರೂಮ್​ ಸಿದ್ಧಪಡಿಸಿ ಅದರಲ್ಲಿ ಕುಳಿತು ಪಾಠ ಬೋಧಿಸಲಾಗುತ್ತಿದೆ.

ಒಂದೇ ಕೊಠಡಿಯಲ್ಲಿ ಎರಡು ಮೂರು ತರಗತಿಗಳ ವಿದ್ಯಾರ್ಥಿಗಳನ್ನ ಒಟ್ಟಿಗೆ ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ. ಬಿಸಿಯೂಟ ಮತ್ತು ಸಿಬ್ಬಂದಿ ಕೊಠಡಿಯಲ್ಲಿ ಸಹ ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಪಾಠ ಮಾಡುವ ಅನಿವಾರ್ಯತೆ ಎದುರಾಗಿದೆ. ಕಳೆದ ಕೆಲ ತಿಂಗಳಿಂದ ಮಳೆ ಚಳಿ ಬಿಸಿಲೆನ್ನದೆ ಹೊರಗೆ ಕುಳಿತು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಚಳಿ, ಗಾಳಿ, ಮಳೆ ಲೆಕ್ಕಿಸದೆ ಶಾಲೆ ಹೊರಗೆ ವಿದ್ಯಾರ್ಥಿಗಳ ವ್ಯಾಸಂಗ

ಕೆಲ ವರ್ಷಗಳ ಹಿಂದೆ ಗ್ರಾಮದಲ್ಲಿದ್ದ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಪಾಳುಬಿದ್ದಿದೆ. ಪರಿಣಾಮ ವಿದ್ಯಾರ್ಥಿಗಳನ್ನು ಊರ ಹೊರಗೆ ಇರುವ ಸರ್ಕಾರಿ ಪ್ರೌಢಶಾಲೆಯ ಪಕ್ಕದಲ್ಲಿರುವ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ. ಅಂದಿನಿಂದ ಇಲ್ಲಿ ಕೊಠಡಿಗಳ ಕೊರತೆ ಸಮಸ್ಯೆ ಕಾಡುತ್ತಿದೆ. ಈ ಕುರಿತಂತೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪೋಷಕರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಗ್ರಾಮಸ್ಥರು.

ಪ್ರಸ್ತುತ ಚಳಿಗಾಲದಲ್ಲಿ ಹೊರಗೆ ಕುಳಿತು ಅಭ್ಯಾಸ ಮಾಡುತ್ತಿರುವ ಕಾರಣ ಹಲವು ವಿದ್ಯಾರ್ಥಿಗಳು ಆನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಕುರಿತಂತೆ ಅಧಿಕಾರಿಗಳನ್ನ ಕೇಳಿದರೆ ಅವರು ಹೇಳುವದು ಬೇರೆ. ಪ್ರಸ್ತುತ ಕೊರೊನಾದಿಂದಾಗಿ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳತ್ತ ಮುಖಮಾಡುತ್ತಿದ್ದಾರೆ. ಇದರಿಂದಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗುತ್ತಿದೆ. ಆದರೂ ಸಹ ಸರ್ಕಾರ ಮತ್ತು ಇಲಾಖೆ ಹೊಸ ಕೊಠಡಿಗಳ ನಿರ್ಮಾಣ ಮಾಡುತ್ತಿದೆ. ಆದಷ್ಟು ಬೇಗ ಚಿಕ್ಕಲಿಂಗದಳ್ಳಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ನಿರ್ಮಿಸುವ ಭರವಸೆಯನ್ನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್.ಪಾಟೀಲ್ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.