ETV Bharat / state

ಬೆಳಗಾವಿ ನಮ್ಮದು.. ಮಹಾಜನ ವರದಿ ಓದಿರಿ: ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಗುಡುಗು.. - ಮೊಕದ್ದಮೆ ವಾಪಸ್ಸು ಪಡೆಯಿರಿ

ಹಾವೇರಿಯಲ್ಲಿ ನಡೆದ ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ - ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರಿಂದ ಕನ್ನಡ ಆಶಯ ನುಡಿ - ಎಂಟು ಜ್ಞಾನಪೀಠ ಪಡೆದ ಶ್ರೀಮಂತ ಕನ್ನಡ ನಮ್ಮದು, ಬೆಳಗಾವಿ ನಮ್ಮದು ಒಂದು ಅಂಗುಲ ಜಾಗವೂ ಬಿಡುವುದಿಲ್ಲ ಆಗ್ರಹ, ಕನ್ನಡ ನೆಲ ಜಲ ರಕ್ಷಣೆಗೆ ಸಂಸದರು ಹೋರಾಟ ಮಾಡಬೇಕು. ನಿಮ್ಮೊಡನೆ ನಾವು ಬರುತ್ತೇವೆ ಎಂದು ಸಲಹೆ ನೀಡಿದರು.

Sahitya Sammelan President Prof. Doddarange Gowda
ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೋ ದೊಡ್ಡರಂಗೇಗೌಡ ಆಶಯ ನುಡಿ
author img

By

Published : Jan 6, 2023, 8:45 PM IST

Updated : Jan 7, 2023, 12:02 PM IST

ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ

ಹಾವೇರಿ: ಶರಣೆಂಬೆ ಅರಿವಿಗೆ, ಶರಣೆಂಬೆ ಗುರುವಿಗೆ, ಶರಣೆಂಬೆ ಸಾಹಿತ್ಯ, ಸಂಗೀತ ಸರಸ್ವತಿಗೆ, ಶರಣ ಶರಣೆಂಬೆ ನಿಮ್ಮೆಲ್ಲರಿಗೆ ಎಂದು ಈ ರೀತಿ ಹಾಡುತ್ತಾ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಭವ್ಯ ಸ್ವಾಗತ ಬಯಸಿದರು. ಹಾವೇರಿಯಲ್ಲಿ ನಡೆದ 86 ನೇ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ದೊಡ್ಡರಂಗೇಗೌಡ ಈ ರೀತಿ ಸ್ವಾಗತ ಕೋರಿ ನಂತರ ಮಾತನಾಡಿದ ಅವರು, ಮರಾಠಿಗರು ಇವತ್ತು ಬೆಳಗಾವಿ ನಮ್ಮದು ಅನ್ನುತ್ತಿದ್ದಾರೆ. ನಮ್ಮದು ಎಂದು ಹಠ ಮಾಡುತ್ತಿದ್ದಾರೆ. ಬಸ್ ಸುಡುವುದು ಮಾಡುತ್ತಿದ್ದಾರೆ. ಇದು ಬಗೆಹರಿಯುವಂತೆ ಕಾಣುತ್ತಿಲ್ಲ. ಬೆಳಗಾವಿಯ ಒಂದು ಅಂಗುಲ ಜಾಗವನ್ನೂ ಬಿಡುವುದಿಲ್ಲ. ಇದು ನಮ್ಮ ಶಪಥ. ಇದು ನಮ್ಮ ನಿಜವಾದ ಆಶಯ ಎಂದು ಹೇಳಿದರು.

ಮಹಾಜನ ವರದಿ ಓದಿರಿ:ನೀವೂ ಬೇಕಾದರೆ ಮನೆಗೆ ಹೋಗಿ ಮಹಾಜನ ವರದಿ ಓದಿರಿ. ಎಲ್ಲ ಪ್ರಕಾರಗಳಿಂದಲೂ ಬೆಳಗಾವಿ ನಮ್ಮದು. ಅದಕ್ಕೆ ಸಂಬಂಧಿಸಿದ ದಾಖಲೆಗಳು ಸಾಗರದಷ್ಟಿವೆ. ಗಡಿ ಬಿಕ್ಕಟ್ಟು ಏನಾದರೂ ಇದ್ದರೆ ಅದನ್ನು ಕಾನೂನಾತ್ಮಕವಾಗಿ, ಸಮಾಧಾನಚಿತ್ತದಿಂದ ಬಗೆಹರಿಸಿಕೊಳ್ಳಬೇಕೇ ವಿನಃ ಗಡಿ ಕ್ಯಾತೆ ಪದೇ ಪದೆ ಮಾಡುವುದು ಸಮಂಜಸವಲ್ಲ ಎಂದು 86ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡರು ಗುಡುಗಿದರು.

ಕನ್ನಡ ಶಾಲೆ ಸಂಸದರು ದತ್ತು ಪಡೆಯಲಿ:ಒಬ್ಬೊಬ್ಬ ಸಂಸದರು ಮೂರು ಮೂರು ಕನ್ನಡ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು. ಬನ್ನಿ ಗೆಳೆಯರೇ ಬನ್ನಿ ಗೆಳೆತಿಯರೇ ಕನ್ನಡಿಗರೆ ತೋರಿ ಅಕ್ಕರೆ ಎಂದು ತಾವೇ ಬರೆದ ಕವಿತೆಯನ್ನು ವಾಚಿಸಿ ದೊಡ್ಡರಂಗೇಗೌಡ ಕನ್ನಡದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈಗ ಲಿವಿಂಗ್ ಟುಗೆದರ್ ಬಂದು, ತಂದೆ, ತಾಯಿ ಹೀಗೆ ಯಾರೂ ಬೇಡವಾದಂತಾಗಿದೆ. ಇಂಥವರಿಂದ ನಾವು ಸಮಾಜಕ್ಕೆ ಏನು ಹೇಳಲು ಹೊರಟಿದ್ದೇವೆ. ಈಡಿ ಭಾರತದ ಅಥವಾ ವಿಶ್ವದ ಭಾವೈಕ್ಯತೆಗೆ ಶಿಶುನಾಳ ಶರೀಫರು ಒಬ್ಬರು ಸಾಕು ಎಂದು ತಿಳಿಸಿದರು.

All India 86th Kannada Literary Conference
ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕುವೆಂಪು ವಿಶ್ವಮಾನವ ಕಲ್ಪನೆಯೊಳಗೆ ಬದುಕಿ: ಅದೇ ನೀರು, ಅದೆ ಗಾಳಿ, ಅದೆ ಸೂರ್ಯ, ಅದೆ ಚಂದ್ರ ಆದರೂ ನಾವ್ಯಾಕೆ ಕಿತ್ತಾಡುತ್ತೇವೆ. ಅದನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕಾಗುತ್ತದೆ. ಅದನ್ನು ಮಾನವೀಯ ಪ್ರಪಂಚ ಎಂದು ಕರೆಯುತ್ತಾರೆ. ಕುವೆಂಪು ಅವರ ವಿಶ್ವಮಾನವ ಕಲ್ಪನೆಯನ್ನು ಬದುಕಿಗೆ ಅಳವಡಿಸಿಕೊಂಡವನು ನಾನು ಎಂದ ಅವರು, ನೀವೆಲ್ಲರೂ ಯಾಕೆ ಆಂಗ್ಲ ವ್ಯಾಮೋಹಿಗಳು ಆಗುತ್ತಿದ್ದೀರಿ ಎಂದು ದೊಡ್ಡರಂಗೇಗೌಡರು ಇದೇ ವೇಳೆ ಕನ್ನಡಿಗರನ್ನು ಪ್ರಶ್ನಿಸಿದರು.

ಸಂಸದರು ಹೋರಾಟಕ್ಕಿಳಿಯಬೇಕು: ಸಂಸದರು ಹೋರಾಟ ಮಾಡಬೇಕು. ನಿಮ್ಮೊಡನೆ ನಾವು ಬರುತ್ತೇವೆ. ಕನ್ನಡ ಬಿಟ್ಟು ಕನ್ನಡಿಗರಿಲ್ಲ. ಕನ್ನಡಿಗರನ್ನು ಬಿಟ್ಟು ಕರ್ನಾಟಕವಿಲ್ಲ. ಇವೆಲ್ಲವನ್ನು ನೋಡಿದರೆ ಗಡಿನಾಡಿನ ಸಮಸ್ಯೆಗಳು ಗೊತ್ತಾಗುತ್ತವೆ ಎಂದ ಅವರು, ನಮ್ಮ ರಾಜ್ಯದಲ್ಲಿ ಕೇವಲ ಮುನ್ನೂರು ಕೃತಿಗಳನ್ನು ಖರೀದಿ ಮಾಡುವುದರಿಂದ ಲೇಖಕನ ಪರಿಸ್ಥಿತಿ ಏನು.? ಬೇರೆ ರಾಜ್ಯಗಳಲ್ಲಿ ಪರಿಸ್ಥಿತಿ ಹೀಗಿಲ್ಲ ಎಂದು ಸಲಹೆ ನೀಡಿದರು.

ಮೊಕದ್ದಮೆ ವಾಪಸ್​ ಪಡೆಯಿರಿ: ಸರ್ ಸರಳವಾಗಿ ಹೇಳುತ್ತಿದ್ದೇನೆ. ಕನ್ನಡಿಗರು ಕರ್ನಾಟಕದ ಪರವಾಗಿ, ನಮ್ಮ ನೆಲದ ಪರವಾಗಿ, ಕನ್ನಡದ ಪರವಾಗಿ ಹೋರಾಟ ಮಾಡಿದರೆ ಅವರನ್ನು ಜೈಲಿಗೆ ಯಾಕೆ ಹಾಕುತ್ತೀರಿ. ಅವರನ್ನು ಬಿಡುಗಡೆ ಆಗಬೇಕು. ಅವರ ಮೆಲಿನ ಎಲ್ಲ ಕೇಸುಗಳನ್ನು ವಜಾ ಮಾಡಿರಿ. ಅವರು ಬೇರೆ ದೇಶದಿಂದ ಬಂದಿಲ್ಲ. ಈ ನೆಲದ ಕೆಲಸ ಮಾಡುತ್ತಿದ್ದಾರೆ. ತಾಯಿ ಭುವನೇಶ್ವರಿಯ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕನ್ನಡದ ಕೆಲಸ ಮಾಡುವ ಹೋರಾಟಗಾರರ ಮೇಲಿನ ಕೇಸ್‌ಗಳನ್ನು ವಾಪಸ್ಸು ಪಡೆಯುವಂತೆ ಸರಕಾರಕ್ಕೆ ಸಲಹೆ ನೀಡಿದರು.

ಎಂಟು ಜ್ಞಾನಪೀಠ ಪಡೆದ ಕನ್ನಡ ನಮ್ಮದು: ಕನ್ನಡಕ್ಕೆ ಕಿಮ್ಮತ್ತು ಇಲ್ಲವೆನ್ನುವವರಿಗೆ ನೀವು ಮನಸ್ಸು ಮಾಡಿದರೆ, ಕನ್ನಡದ ಮಹತ್ವ ಗೊತ್ತಾಗುತ್ತದೆ. ಕನ್ನಡಕ್ಕೆ ನಿಜವಾದ ಪ್ರಬಲ ಶಕ್ತಿ ಇದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆ ನಮ್ಮದು. ಅವರನ್ನೀಗ ಸಾಂಸ್ಕೃತಿಕ ರಾಯಭಾರಿ ಎಂದು ಕರೆಯಬೇಕಾದ ಸಂದರ್ಭ ಬಂದಿದೆ. ಕನ್ನಡದ ಬಗೆಗಿನ ಈ ವರೆಗಿನ ಘೋಷಣೆಗಳ ಜತೆಗೆ ಕನ್ನಡ ಈಗ ವಿಶ್ವಮುಖಿ ಎಂಬ ಘೋಷಣೆ ಮಾಡುತ್ತೇನೆ ಎಂದು ತಮ್ಮದೇ ಘೋಷಣೆ ಸೇರಿಸಿದರು.

ಸೂರ್ಯ ಚಂದ್ರರು ಇರುವವರೆಗೆ ಕನ್ನಡ ಇರುತ್ತದೆ. ಭೂಮಿ ಭಾನು ಇರುವವರಿಗೆ ಕನ್ನಡ ಇರುತ್ತದೆ. ಕನ್ನಡಕ್ಕೆ ಸಾವಿಲ್ಲ. ಕರ್ನಾಟಕದ ತುಂಬ ಕನ್ನಡ ಹರಿದಾಡುತ್ತದೆ ಎನ್ನುವುದರೊಂದಿಗೆ ಮಾತು ಮುಗಿಸಿದರು.
ಇದನ್ನೂಓದಿ:ಹಾವೇರಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಗಮನ ಸೆಳೆದ ಕಲಾ ಪ್ರದರ್ಶನ

Last Updated : Jan 7, 2023, 12:02 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.