ETV Bharat / state

ಮಕ್ಕಳಿಲ್ಲದವರು ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ಸಂತಾನಭಾಗ್ಯ ಖಚಿತವಂತೆ: ಭಕ್ತರ ಇಷ್ಟಾರ್ಥ ಈಡೇರಿಸುತ್ತಿರುವ ಈ ದೇವಸ್ಥಾನ ಎಲ್ಲಿದೆ ಗೊತ್ತಾ? - ಆಂಜನೇಯ ಸ್ವಾಮಿ ದೇವಸ್ಥಾನ

ಮಕ್ಕಳು ಆಗದೇ ಇರುವವರು ಹಾವೇರಿಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರೆ ಮಕ್ಕಳಾಗುತ್ತವೆ ಎಂಬುದ ಭಕ್ತರ ನಂಬಿಕೆಯಾಗಿದೆ.

ಭಕ್ತರ ಇಷ್ಟಾರ್ಥ ಈಡೇರಿಸುತ್ತಿರುವ ದೇವಸ್ಥಾನ
ಭಕ್ತರ ಇಷ್ಟಾರ್ಥ ಈಡೇರಿಸುತ್ತಿರುವ ದೇವಸ್ಥಾನ
author img

By ETV Bharat Karnataka Team

Published : Oct 24, 2023, 8:26 AM IST

Updated : Oct 24, 2023, 9:37 AM IST

ಭಕ್ತರ ಇಷ್ಟಾರ್ಥ ಈಡೇರಿಸುತ್ತಿರುವ ದೇವಸ್ಥಾನ

ಹಾವೇರಿ: ಹಿರೇಕೆರೂರು ತಾಲೂಕು ಸಾತೇನಹಳ್ಳಿಯಲ್ಲೊಂದು ವಿಶಿಷ್ಟ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ವಿಶೇಷತೆ ಬಂದಿರುವುದು ಇಲ್ಲಿ ನೀಡುತ್ತಿರುವ ಸಂತಾನ ಭಾಗ್ಯ ಪ್ರಸಾದದಿಂದ. ಹೌದು ಸಾತೇನಹಳ್ಳಿ ಗ್ರಾಮದ ಶಾಂತೇಶ (ಹನುಮಂತ ದೇವರ) ದೇವಸ್ಥಾನದ ಅರ್ಚಕರು ಮಕ್ಕಳಾಗದ ಮಹಿಳೆಯರಿಗೆ ಸಂತಾನ ಭಾಗ್ಯ ನೀಡುವ ಔಷಧವನ್ನು ದೇವಸ್ಥಾನದ ಅರ್ಚಕರು ಸುಮಾರು ಎರಡುನೂರು ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ. ನವರಾತ್ರಿಯ ಈ ದಿನಗಳಲ್ಲಿ ಆಯುಧಪೂಜೆಯ ದಿನದಂದು ಶ್ರವಣಾ ನಕ್ಷತ್ರದಲ್ಲಿ ಈ ಔಷಧ ಭಕ್ತರಿಗೆ ವಿತರಿಸಲಾಗುತ್ತದೆ.

ಶಾಂತೇಶನ ದೇವಸ್ಥಾನದಲ್ಲಿ ಬಾಳೇಹಣ್ಣಿನಲ್ಲಿ ನೀಡುವ ಔಷಧ ತೆಗೆದುಕೊಂಡರೆ ಸಂತಾನ ಭಾಗ್ಯ ಪ್ರಾಪ್ತಿ ಆಗುತ್ತದೆ ಎಂಬುದು ಭಕ್ತರ ನಂಬಿಕೆ ಆಗಿದೆ. ಅರ್ಚಕರು ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿ ಹಲವು ಧಾರ್ಮಿಕ ಕಾರ್ಯಗಳ ಮೂಲಕ ಈ ಔಷಧ ತಯಾರಿಸಲಾಗುತ್ತದೆ. ಶ್ರವಣಾ ನಕ್ಷತ್ರದಂದು ದೇವಸ್ಥಾನಕ್ಕೆ ಆಗಮಿಸುವ ಮಕ್ಕಳಾಗದ ಮಹಿಳೆಯರಿಗೆ ಈ ಔಷಧ ವಿತರಿಸಲಾಗುತ್ತದೆ. ಶಾಂತೇಶನ ಆಶೀರ್ವಾದದಿಂದ ತಯಾರಿಸಲ್ಪಟ್ಟ ಔಷಧವನ್ನ ದೇವಸ್ಥಾನದಲ್ಲೇ ಸ್ವೀಕರಿಸಬೇಕು.

ಪ್ರಸ್ತುತ ವರ್ಷ ಔಷಧ ವಿತರಣಿ ಸೋಮವಾರ ಶ್ರವಣಾ ನಕ್ಷತ್ರದ ವೇಳೆ ನಡೆಯಿತು. ಹೈದರಾಬಾದ್, ಮಹಾರಾಷ್ಟ್ರ ತಮಿಳುನಾಡು ಸೇರಿದಂತೆ ವಿವಿಧಡೆಯಿಂದ ಸಾವಿರಾರು ಮಹಿಳೆಯರು ಔಷಧ ಸ್ವೀಕರಿಸಲು ಸರತಿಯಲ್ಲಿ ನಿಂತಿದ್ದರು. ಶ್ರವಣಾ ನಕ್ಷತ್ರ ಆರಂಭವಾಗುತ್ತಿದ್ದಂತೆ ಔಷಧವನ್ನ ಅರ್ಚಕರಾದ ವಾಮನಾಚಾರ್ಯ ಮತ್ತು ಬದರಿನಾಥಾಚರ್ಯ ವಿತರಿಸಿದರು.

ಸರತಿಯಲ್ಲಿ ಆಗಮಿಸಿದ ಮಹಿಳೆಯರು ಪ್ರಸಾದ ರೂಪದಲ್ಲಿ ಔಷಧ ಸ್ವೀಕರಿಸಿ ನಂತರ ದೇವಸ್ಥಾನದಲ್ಲಿ ನೀಡುವ ಕಾಮದೇನು ಕಲ್ಪವೃಕ್ಷದ ತೆಂಗಿನಕಾಯಿಯನ್ನ ಸ್ವೀಕರಿಸಿದರು. ಈ ರೀತಿ ನೀಡುವ ತೆಂಗಿನಕಾಯಿಯನ್ನ ಮನೆಯಲ್ಲಿರುವ ದೇವರ ಜಗ್ಗಲಿಯಲ್ಲಿಟ್ಟು ಪೂಜೆ ಮಾಡುವುದು ವಾಡಿಕೆ. ಅರ್ಚಕರು ನೀಡುವ ತೆಂಗಿನಕಾಯಿಯನ್ನು ಒಂದು ವರ್ಷಗಳ ಕಾಲ ಮನೆಯಲ್ಲಿಟ್ಟು ಪೂಜೆ ಮಾಡಬೇಕು. ಹೀಗೆ ಮಾಡವುದರಿಂದ ಮಕ್ಕಳಾಗುತ್ತವೆ ಎಂಬುದು ಭಕ್ತರ ನಂಬಿಕೆ.

ವರ ಫಲಿಸಿದವರಿಂದ ಹರಕೆ ತೀರಿಕೆ: ಕಳೆದ ವರ್ಷದ ದಸರಾ ಹಬ್ಬದ ಸಮಯದಲ್ಲಿ ದೇವಸ್ಥಾನಕ್ಕೆ ಬಂದು ಪ್ರಸಾದ ಸೇವಿಸಿ ಸಂತಾನಭಾಗ್ಯ ಪಡೆದುಕೊಂಡವರು ಇದೇ ದಿನ ದೇವಸ್ಥಾನಕ್ಕೆ ಬಂದು ಶಾಂತೇಶನಿಗೆ ಹರಕೆ ತೀರಿಸುತ್ತಾರೆ. ಸಂತಾನಭಾಗ್ಯ ಪಡೆದವರಲ್ಲಿ ಹಲವರು ತಮ್ಮ ಮಕ್ಕಳ ತೂಕದಷ್ಟು ತೆಂಗಿನಕಾಯಿಗಳನ್ನು ಇಟ್ಟು ತುಲಾಬಾರ ನೆರವೇರಿಸುತ್ತಾರೆ. ಮತ್ತೆ ಕೆಲವರು ಬೆಳ್ಳಿ, ಬಂಗಾರದ ಆಭರಣ ಸೇರಿದಂತೆ ದವಸಧಾನ್ಯಗಳನ್ನು ದೇವಸ್ಥಾನಕ್ಕೆ ನೀಡುತ್ತಾರೆ. ಸುಮಾರು ವರ್ಷಗಳಿಂದ ದೇವಸ್ಥಾನದಲ್ಲಿ ಈ ನಂಬಿಕೆ ನಡೆದುಕೊಂಡು ಬಂದಿದೆ. ಮಕ್ಕಳಾಗದ ಹೆಣ್ಣು ಮಕ್ಕಳು ಬಂದು ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಮಕ್ಕಳ ಭಾಗ್ಯ ಕರುಣಿಸುವಂತೆ ಶಾಂತೇಶನಲ್ಲಿ ಪ್ರಾರ್ಥಿಸುತ್ತಾರೆ.

ಮಕ್ಕಳಾದವರು ದಂಪತಿಸಮೇತರಾಗಿ ಬಂದು ತಮ್ಮಿಷ್ಟದಂತೆ ದೇವರಿಗೆ ಹರಕೆ ತೀರಿಸಿ, ದೇವಸ್ಥಾನದಲ್ಲಿ ಶಾಂತೇಶಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಶಾಂತೇಶನ ಕೃಪೆಗೆ ಪಾತ್ರರಾಗುತ್ತಾರೆ. ದಸರಾ ಹೊರತುಪಡಿಸಿ ದೇವಸ್ಥಾನದಲ್ಲಿ ಪ್ರತಿದಿನವೂ ಶಾಂತೇಶ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ಸಾತೇನಹಳ್ಳಿಯ ಶಾಂತೇಶ ಸ್ವಾಮಿ ಅಂದರೆ ಮಕ್ಕಳಾಗದವರಿಗೆ ಮಕ್ಕಳನ್ನು ಕರುಣಿಸುವ ದೇವರಾಗಿದ್ದಾರೆ ಎಂದು ಭಕ್ತರು ಹೇಳಿದ್ದಾರೆ. ಈ ದೇವಸ್ಥಾನಕ್ಕೆ ಕೇವಲ ಹಿಂದೂಗಳಷ್ಟೇ ಅಲ್ಲದೆ ಮುಸ್ಲಿಂ ಮಹಿಳೆಯರು ಸಹ ಬಂದು ಪ್ರಾರ್ಥಿಸುತ್ತಾರೆ.

ಭಕ್ತರು ಹೇಳುವುದಿಷ್ಟು: ಈ ಬಗ್ಗೆ ಧಾರವಾಡ ಶಿಕ್ಷಕಿ ಮತ್ತು ಭಕ್ತರು ಆಗಿರುವ ಶ್ವೇತ ಶಿರಟ್ಟಿ ಎಂಬುವವರು ಮಾತನಾಡಿ, ತಮಗೆ ಮುದವೆಯಾಗಿ ಎಂಟು ವರ್ಷಗಳು ಕಳೆದಿದ್ದವು ಮಕ್ಕಳಾಗಿರಲಿಲ್ಲ. ಬಳಿಕ ಪರಿಚಯಸ್ತರೊಬ್ಬರು ಈ ಹನುಮಂತನ ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದರು. ಅದರಂತೆ ದಂಪತಿ ಸಮೇತವಾಗಿ ದೇವಸ್ಥಾನಕ್ಕೆ ಬೇಟಿ ನೀಡಿ ದರ್ಶನ ಪಡೆದಿದ್ದೇವೆ. ಅದಾದ ಬಳಿಕ 1 ವರ್ಷದಲ್ಲಿ ತಮಗೆ ಹೆಣ್ಣು ಮಗು ಜನನವಾಯಿತು. ದೇವಸ್ಥಾನ ಬೇಟಿಗೂ ಮುನ್ನ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇದನ್ನೂ ಓದಿ: 'ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್': ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕ

Last Updated : Oct 24, 2023, 9:37 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.