ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕು ಹಂಸಭಾವಿ ಪೊಲೀಸ್ ಠಾಣೆಯ ಪಿಎಸ್ಐ ಮೇಲೆ ಯುವಕನಿಗೆ ಥಳಿಸಿದ ಆರೋಪ ಕೇಳಿ ಬಂದಿದೆ.
ಕಳೆದ ರಾತ್ರಿ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಪಿಎಸ್ಐ ಡಿಪ್-ಡಿಮ್ ನೀಡಲಿಲ್ಲ. ಹೀಗಾಗಿ ಬೈಕ್ನಲ್ಲಿದ್ದ ಯುವಕ ಗುಂಡಿಗೆ ಬಿದ್ದಿದ್ದಾನೆ. ಇದನ್ನ ಪ್ರಶ್ನಿಸಿದ್ದಕ್ಕೆ ಪಿಎಸ್ಐ ಜಯಪ್ಪ, ಯುವಕ ಹರೀಶ್ಗೆ ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಾನು ಹಂಸಭಾವಿ ಪಿಎಸ್ಐ, ನನಗೆ ಡಿಪ್-ಡಿಮ್ ಹೇಳ್ತಿಯಾ ಎಂದು ಹಲ್ಲೆ ಮಾಡಿದ್ದಾರೆ ಎಂದು ಹರೀಶ್ ಆರೋಪಿಸಿದ್ದಾರೆ. ಅಲ್ಲದೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಬೇರೆ ಕಡೆ ವರ್ಗಾಯಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.