ETV Bharat / state

ಹಾವೇರಿಯಲ್ಲಿ ಕಣ್ಮನ ಸೆಳೆಯುವ ಗುಲ್​ಮೋಹರ್​ ಪುಷ್ಪಗಳ ಸೌಂದರ್ಯ

ರಸ್ತೆಯ ಇಕ್ಕೆಲಗಳು, ಉದ್ಯಾನಗಳಲ್ಲಿ ಬೆಳೆಯುವ ಗುಲ್​ ಮೋಹರ್​ ಪುಷ್ಪಗಳು ಜನರನ್ನು ಆಕರ್ಷಿಸುತ್ತಿವೆ.

ಗುಲ್​ಮೋಹರ್
ಗುಲ್​ಮೋಹರ್
author img

By

Published : May 29, 2023, 12:18 PM IST

Updated : May 29, 2023, 1:12 PM IST

ಸಾಹಿತಿ ಸತೀಶ್​ ಕುಲಕರ್ಣಿ ಅವರು ಗುಲ್​ಮೋಹರ್ ಹೂವಿನ ಬಗೆಗೆ ಮಾತನಾಡಿದ್ದಾರೆ

ಹಾವೇರಿ : ಮೇ ತಿಂಗಳು ಬಂದರೆ ಸಾಕು ಎಲ್ಲೆಲ್ಲಿಯೂ ಗುಲ್ ಮೋಹರ್ ಪುಷ್ಪಗಳದ್ದೇ ಸೌಂದರ್ಯ. ಮರದ ತುಂಬೆಲ್ಲ ಎಲೆಗಳು ಕಾಣದಂತೆ ಗುಲ್ ಮೋಹರ್ ಪುಷ್ಪಗಳು ಅರಳಿ ಕಣ್ಣಿಗೆ ಮುದ ನೀಡುತ್ತವೆ. ಬಿರುಬೇಸಿಗೆಯಲ್ಲೂ ಸಹ ಈ ಹೂಗಳು ಅರಳಿ ಮೈ ಮಸನಸ್ಸನ್ನು ಸೆಳೆಯುತ್ತವೆ. ಗೊಂಚಲು ಗೊಂಚಲಾಗಿ ಬಿಡುವ ಹೂವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಇದನ್ನು ಮೇ ಫ್ಲವರ್ ಎಂದೂ ಕರೆಯುತ್ತಾರೆ. ಹೂಗಳು ಮರದ ತುಂಬಾ ರಾರಾಜಿಸುತ್ತವೆ. ಸಾಮಾನ್ಯವಾಗಿ ಉಷ್ಣವಲಯದ ವಾತಾವರಣದಲ್ಲಿ ಈ ಮರಗಳು ಬೆಳೆಯುತ್ತವೆ. ಸುಡು ಬಿಸಿಲಿನಲ್ಲಿ ಕಣ್ಣಿಗೆ ಖುಷಿ ನೀಡುವ ಪುಷ್ಪಗಳ ಸುತ್ತ ಮಕರಂದ ಹೀರುವ ಜೇನ್ನೊಣಗಳು ಸುಳಿದಾಡುತ್ತಿರುತ್ತವೆ.

ಕವಿಗಳಿಗೆ ಪ್ರೇರಣೆ: ಈ ರೀತಿಯ ಮೈತುಂಬ ಕೆಂಪು ಕೆಂಪು ಪುಷ್ಪಗಳ ಹೊತ್ತ ಮರ ಬೆಂಕಿಯ ಚೆಂಡಿನಂತೆ ಕಾಣುತ್ತದೆ. ಮಳೆಗಾಲದ ಆರಂಭದಲ್ಲಿ ಕೆಂಪು ಹೊದ್ದುಕೊಳ್ಳುವ ಮೇಫ್ಲವರ್ ಒಂದು ಮಳೆಯಾದರೆ ಸಾಕು ಪುಷ್ಪದ ಪಕಳೆಗಳೆಲ್ಲ ಕಳಚಿಕೊಳ್ಳುತ್ತವೆ. ಈ ಪುಷ್ಪ ಕವಿಗಳಿಗೆ, ಕವಿಯತ್ರಿಗಳಿಗೆ ಕವನ ಬರೆಯಲು, ಲೇಖನ ಬರೆಯಲು ಪ್ರೇರಣೆಯೂ ಹೌದು. ಈ ಮರವನ್ನು ಸೌಂದರ್ಯಕ್ಕಾಗಿ ಉದ್ಯಾನಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಲಾಗುತ್ತದೆ. ರಾಜ್ಯದಲ್ಲಿ ವಿವಿಧ ಹೆಸರುಗಳಿಂದ ಕರೆಯುವ ಗುಲ್​ಮೋಹರ್‌ ಮೂಲತಃ ಮಡಗಾಸ್ಕರ್​ಗೆ ಸೇರಿದ್ದಂತೆ.

ಮೇಫ್ಲವರ್ ಫಬಿಯೇಸೆ ಕುಟುಂಬಕ್ಕೆ ಸೇರಿದ್ದು. ಇದರ ಸಸ್ಯಶಾಸ್ತ್ರೀಯ ಹೆಸರು ಡೆಲೊನಿಕ್ಸ್ ರೆಜಿಯ. ಐದು ದಳಗಳನ್ನು ಹೊಂದಿರುವ ಗುಲ್ ಮೋಹರ್ ಐದರಲ್ಲಿ ಒಂದು ದಳ ರಾಜ ಎಂದು ಗುರುತಿಸಿದ್ದರೆ, ಉಳಿದ ನಾಲ್ಕು ದಳಗಳನ್ನು ರಾಣಿಯರು ಎಂದು ಕರೆಯಲಾಗುತ್ತದೆ. ಬೇಸಿಗೆಯಲ್ಲಿ ದಾರಿಹೋಕರಿಗೆ ನೆರಳಿನ ಜೊತೆಗೆ ಪುಷ್ಪಗಳ ಸೊಬಗು ಆಕರ್ಷಣೀಯವಾಗುತ್ತದೆ. ದಿನನಿತ್ಯದ ಜಂಜಾಟಗಳಿಂದ ಕೆಲಕಾಲ ಮೇಪ್ಲವರ್ ರಿಲ್ಯಾಕ್ಸ್ ನೀಡುತ್ತೆ. ರಸ್ತೆ ಇಕ್ಕೆಲಗಳಲ್ಲಿ ಹಚ್ಚಲಾಗಿರುವ ಮೇಫ್ಲವರ್ ಮರಗಳು ರಸ್ತೆಯ ಅಗಲೀಕರಣದಿಂದಾಗಿ ಇತ್ತೀಚೆಗೆ ಕಡಿಮೆಯಾಗುತ್ತಿವೆ ಎಂಬ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸುತ್ತಾರೆ.

ಅರಣ್ಯ ಇಲಾಖೆ ಸರ್ಕಾರಗಳು ಈ ಮರಗಳನ್ನು ಹೆಚ್ಚು ಹೆಚ್ಚು ನೆಡಬೇಕು. ಇದರಿಂದ ಸೌಂದರ್ಯದ ಜೊತೆಗೆ ಪರಿಸರ ಕಾಳಜಿ ವಹಿಸಿದಂತಾಗುತ್ತದೆ. ಇದರ ಸೌಂದರ್ಯ ಆಸ್ವಾದಿಸುವ ಜನರು ಸಹ ಒಂದೊಂದು ಮರ ನೆಟ್ಟರೆ ಪರಿಸರ ಇನ್ನಷ್ಟು ಸುಂದರಗೊಳ್ಳುತ್ತೆ ಎನ್ನುತ್ತಾರೆ ಪರಿಸರವಾದಿಗಳು. ಪ್ರಕೃತಿ ಎಂಬ ವಿಸ್ಮಯದಲ್ಲಿ ಪ್ರಾಣಿ, ಪಕ್ಷಿ, ಮರಗಳು ತಮ್ಮದೇ ಆದ ಕೊಡುಗೆ ನೀಡುತ್ತವೆ. ಅಂತಹ ಮರಗಳಲ್ಲಿ ಮೇಫ್ಲವರ್ ಸಹ ಒಂದು. ಕೆಂಪು ಹೊತ್ತ ಮರಗಳು ದಾರಿಹೋಕರಿಗೆ ಸ್ವಾಗತ ನೀಡುತ್ತವೆ. ಪುಷ್ಪಗಳಲ್ಲಿ ವಿಶಿಷ್ಠವಾದ ದಳಗಳನ್ನು ಹೊಂದಿರುವ ಮೇಫ್ಲವರ್ ಆಹ್ಲಾದಕರ ವಾತಾವರಣ ಉಂಟು ಮಾಡುತ್ತದೆ ಎನ್ನುತ್ತಾರೆ ಸಾಹಿತಿ ಸತೀಶ್​ ಕುಲಕರ್ಣಿ.

ಹಾವೇರಿಯಲ್ಲಿ ಕಣ್ಮನ ಸೆಳೆಯುತ್ತಿರುವ ಗುಲ್​ಮೋಹರ್​ ಪುಷ್ಪಗಳು

ಇದೊಂದು ಅದ್ಭುತವಾದ ಪ್ರಕೃತಿಯ ಕೊಡುಗೆ. ಕೊಳಚೆ ಪ್ರದೇಶಗಳಲ್ಲಿ ದಟ್ಟವಾದ ಕಡುಕೆಂಪು ಹೂ ಬಿಡುವ ಮೇ ಫ್ಲವರ್​ಗೆ ಪ್ರೀತಿಯನ್ನು ಹುಟ್ಟುಹಾಕುವ ಶಕ್ತಿ ಇದೆ. ಪ್ರಕೃತಿಯಲ್ಲಿ ಕಾಲಚಕ್ರ ತಿರುಗುತ್ತಿರುತ್ತದೆ. ಬೇಸಿಗೆಯಲ್ಲಿ ಸಹ ಪ್ರಕೃತಿ ಹಣ್ಣು ನೀಡುತ್ತೆ, ಪುಷ್ಪಗಳನ್ನು ನೀಡುತ್ತದೆ. ಅಂತಹ ಪುಷ್ಪಗಳಲ್ಲಿ ಮೇಫ್ಲವರ್ ಒಂದು ಎನ್ನುತ್ತಾರೆ ಕವಿಗಳು. ಈ ಪುಷ್ಪ ಉಲ್ಲಾಸವನ್ನು ಹೆಚ್ಚು ಮಾಡುತ್ತದೆ ಎನ್ನುತ್ತಾರೆ ಕವಿಗಳು. ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸೌಂದರ್ಯ ಆರಾಧಕರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವ ಬೇಸರವನ್ನು ಕವಿಗಳು ವ್ಯಕ್ತಪಡಿಸಿದ್ದಾರೆ.

ಪ್ರಕೃತಿಯೇ ಪುಷ್ಪಗುಚ್ಚ ನೀಡಿ ನಮ್ಮನ್ನು ಸ್ವಾಗತಿಸುತ್ತೆ ಎಂಬ ಭಾವನೆ ನೀಡುತ್ತದೆ ಎನ್ನುತ್ತಿವೆ ಕವಿಮನಸ್ಸುಗಳು. ಚೈತನ್ಯ ತುಂಬುವ ಪುಷ್ಪ ಇದಾಗಿದ್ದು, ಸಾರ್ವಜನಿಕರು ಸೌಂದರ್ಯ ಕಣ್ತುಂಬಿಕೊಳ್ಳಬೇಕಿದೆ.

ಇದನ್ನೂ ಓದಿ: ಕಾಫಿನಾಡು ಗಿರಿ ಶ್ರೇಣಿಯ ಮಡಿಲು ತುಂಬಿದ ಕುರಂಜಿ ಹೂ.. ಏನಿದರ ವಿಶೇಷತೆ

Last Updated : May 29, 2023, 1:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.