ETV Bharat / state

ಏಲಕ್ಕಿನಾಡಿನಲ್ಲಿ ಹಳದಿ, ಕೆಂಪು ಸುಂದರಿಯರದ್ದೇ ಮಾತು... ಇವರೇ ಆ ಚಂದುಳ್ಳಿ ಚಲುವೆಯರು - undefined

ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ಏಲಕ್ಕಿನಗರಕ್ಕೆ ಹೊಸ ಕಳೆ ಬರಲಾರಂಭಿಸುತ್ತದೆ. ಈ ಹೊಸ ಕಳೆಗೆ ಕಾರಣ ನಗರದ ಪ್ರಮುಖ ರಸ್ತೆಗಳಲ್ಲಿ ಮೈತಳೆಯುವ ಗುಲ್ಮಮೋಹರ್ ಮತ್ತು ಗೋಲ್ಡನ ಚೈನ್ ಪುಷ್ಪಗಳು. ನಗರದ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದುನಿಂತಿರುವ ಈ ಮರಗಳಲ್ಲಿ ಇದೀಗ ಕೆಂಪು ಮತ್ತು ಹಳದಿ ಪುಷ್ಪಗಳ ಅರಳುವಿಕೆ ಆರಂಭವಾಗಿದೆ. ಮರಕ್ಕೆ ಮರನೇ ಹೂ ತೊಟ್ಟಂತೆ ನಿಲ್ಲುವ ಈ ಪುಷ್ಪಗಳನ್ನು ಎಷ್ಟು ನೋಡಿದರು ಸಾಲದು.

ಏಲಕ್ಕಿನಾಡಿಗೆ ಕೈ ಬಿಸಿ ಕರೆಯುತ್ತಿವೆ ಗುಲ್​​​ಮೋಹರ್,ಗೋಲ್ಡನ ಚೈನ್
author img

By

Published : Apr 25, 2019, 11:07 PM IST

ಹಾವೇರಿ: ಏಲಕ್ಕಿ ನಗರ ಹಾವೇರಿಯಲ್ಲಿ ಇದೀಗ ಕೆಂಪು ಮತ್ತು ಹಳದಿ ಸುಂದರಿಯರದೇ ಮಾತು. ಕೆಂಪು ಹಳದಿ ಸುಂದರಿಯರ ವನಪು ವಯ್ಯಾರಕ್ಕೆ ಮನಸೋತ ಜನ ಕೆಲಕಾಲ ನಿಂತು ಸುಂದರಿಯರ ಕಣ್ತುಂಬಿಕೊಳ್ಳುತ್ತಾರೆ. ಅವರ ಬೆಡಗು ಭಿನ್ನಾಣಕ್ಕೆ ಏಲಕ್ಕಿನಗರಿಯ ಮನಸೋತಿದ್ದಾರೆ. ಈ ಸುಂದರಿಯರ ಸುತ್ತ ಕಾಕಪೀಕಗಳ ಸದ್ದು ಸುಂದರಿಯರ ಚೆಲುವಿಗೆ ಮತ್ತಷ್ಟು ಮೆರಗು ನೀಡುತ್ತಿವೆ.

ಏಲಕ್ಕಿನಾಡಿಗೆ ಕೈ ಬಿಸಿ ಕರೆಯುತ್ತಿವೆ ಗುಲ್​​​ಮೋಹರ್,ಗೋಲ್ಡನ ಚೈನ್

ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ಏಲಕ್ಕಿನಗರಕ್ಕೆ ಹೊಸ ಕಳೆ ಬರಲಾರಂಭಿಸುತ್ತದೆ. ಈ ಹೊಸ ಕಳೆಗೆ ಕಾರಣ ನಗರದ ಪ್ರಮುಖ ರಸ್ತೆಗಳಲ್ಲಿ ಮೈತಳೆಯುವ ಗುಲ್ಮೊಹರ್ ಮತ್ತು ಗೋಲ್ಡನ್ ಚೈನ್ ಪುಷ್ಪಗಳು. ನಗರದ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದುನಿಂತಿರುವ ಈ ಮರಗಳಲ್ಲಿ ಇದೀಗ ಕೆಂಪು ಮತ್ತು ಹಳದಿ ಪುಷ್ಪಗಳ ಅರಳುವಿಕೆ ಆರಂಭವಾಗಿದೆ. ಮರಕ್ಕೆ ಮರನೇ ಹೂ ತೊಟ್ಟಂತೆ ನಿಲ್ಲುವ ಈ ಪುಷ್ಪಗಳನ್ನು ಎಷ್ಟು ನೋಡಿದರು ಸಾಲದು.

ಇವುಗಳ ಸೌಂದರ್ಯಕ್ಕೆ ಮನಸೋಲದವರೆ ಇಲ್ಲಾ. ಎಷ್ಟೇ ಅವಸರವಿರಲಿ ಜಂಜಾಟವಿರಲಿ ಕೆಲಕ್ಷಣ ಈ ಮರಗಳ ಬಳಿ ನಿಂತ ವೀಕ್ಷಕರು ಪುಷ್ಪಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಪುಷ್ಪಗಳ ಬೆಡಗು ಬಿನ್ನಾಣ ವನಪು ವಯ್ಯಾರಗಳಲ್ಲಿ ಮೈಮರೆಯುತ್ತಾರೆ. ಸ್ಥಳೀಯವಾಗಿ ಮೇ ಪ್ಲವರ್ ಮತ್ತು ಗೋಲ್ಡನ್ ಚೈನ್ ಟ್ರೀಗಳೆಂದು ಕರೆಸಿಕೊಳ್ಳುವ ಈ ಮರಗಳು ಇದೀಗ ಪುಷ್ಪಗಳನ್ನ ಮೈತಳೆದು ನಿಂತಿವೆ.

ಗಾಳಿಗೆ ಬಳುಕುವು ಪುಷ್ಪಗಳು ಅವುಗಳಲ್ಲಿನ ಮದು ಹೀರಲು ಬಂದ ದುಂಬಿಗಳು ಇತ್ತ ಕೂಹೂ ಕೂಹೂ ಎಂದು ಕೂಗುವೆ ಕೊಗಿಲೆಯ ನಿನಾದ ಕಣ್ಣಿಗೆ ಸೊಬಗು ನೀಡುವ ಜೊತೆಗೆ ಕಿವಿಗಳನ್ನು ಇಂಪಾಗಿಸುತ್ತದೆ. ಎಂತಹ ಒತ್ತಡಗಳಿದ್ದರು ಕೆಲಕಾಲ ಈ ಮರಗಳತ್ತ ಮುಖಮಾಡಿದರೇ ಸಾಕು ಕೆಲಕಾಲ ಮರೆಯಾಗುತ್ತವೆ ಎನ್ನುತ್ತಾರೆ ದಾರಿಹೋಕರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.