ETV Bharat / state

ಕೇಂದ್ರ-ರಾಜ್ಯ ಸರ್ಕಾರದ ಮೇಲೆ ಹಕ್ಕೊತ್ತಾಯ ತಂದು ಎಸ್ಟಿ ಮೀಸಲಾತಿ ಪಡೆಯುತ್ತೇವೆ : ಕಾಗಿನೆಲೆ ಶ್ರೀಗಳು - ST reservation to kuruba community news

ಕರ್ನಾಟಕ ರಾಜ್ಯಾದ್ಯಂತ ಈ ಹೋರಾಟಕ್ಕೆ ಅಭೂತಪೂರ್ವ ಜನ ಬೆಂಬಲ ಸಿಗುತ್ತಿದ್ದು, ಎಲ್ಲರೂ ಸಹಕಾರ ಮಾಡುತ್ತಿದ್ದಾರೆ. ಅಲ್ಲದೆ ಕೆಲವರು ಎತ್ತಿನ ಬಂಡಿ, ಕುರಿ ಬಂಡಿ, ಕುರಿಗಳ ಹಿಂಡುಗಳ ಜತೆ ಪಾದಯಾತ್ರೆಗೆ ಬರುತ್ತಿದ್ದಾರೆ..

Kaginele Shree
ಕಾಗಿನಲೆ ಗುರುಪೀಠದ ನಿರಂಜನಾನಂದ ಸ್ವಾಮೀಜಿ
author img

By

Published : Jan 18, 2021, 4:27 PM IST

Updated : Jan 18, 2021, 4:39 PM IST

ರಾಣೆಬೆನ್ನೂರು : ಕಟ್ಟ ಕಡೆಯ ಕುರುಬನಿಗೆ ಎಸ್ಟಿ ಮೀಸಲಾತಿ ಸಿಗಬೇಕು ಎಂಬ ಉದ್ದೇಶದಿಂದ ಪೂಜ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಕಾಗಿನಲೆ ಶ್ರೀಗಳು ಹೇಳಿದರು.

ಕಾಗಿನಲೆ ಗುರುಪೀಠದ ನಿರಂಜನಾನಂದ ಸ್ವಾಮೀಜಿ

ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮಕ್ಕೆ ಆಗಮಿಸಿದ ಎಸ್ಟಿ ಹೋರಾಟ ಮೀಸಲಾತಿ ಪಾದಯಾತ್ರೆಯ ನಾಲ್ಕನೇ ದಿನ ಜಾಗೃತಿ ಸಭೆ ಕುರಿತು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬ ಸಮುದಾಯದ ಈ ಹೋರಾಟದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಹಕ್ಕೊತ್ತಾಯ ತಂದು ಎಸ್ಟಿ ಮೀಸಲಾತಿ ಪಡೆಯುತ್ತೇವೆ ಎಂದರು.

ಓದಿ:ಎಸ್​ಟಿ ಮೀಸಲಾತಿ ಹೋರಾಟ: 3ನೇ ದಿನಕ್ಕೆ ಕಾಲಿಟ್ಟ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಪಾದಯಾತ್ರೆ

ಕರ್ನಾಟಕ ರಾಜ್ಯಾದ್ಯಂತ ಈ ಹೋರಾಟಕ್ಕೆ ಅಭೂತಪೂರ್ವ ಜನ ಬೆಂಬಲ ಸಿಗುತ್ತಿದ್ದು, ಎಲ್ಲರೂ ಸಹಕಾರ ಮಾಡುತ್ತಿದ್ದಾರೆ. ಅಲ್ಲದೆ ಕೆಲವರು ಎತ್ತಿನ ಬಂಡಿ, ಕುರಿ ಬಂಡಿ, ಕುರಿಗಳ ಹಿಂಡುಗಳ ಜತೆ ಪಾದಯಾತ್ರೆಗೆ ಬರುತ್ತಿದ್ದಾರೆ.

ಇದನ್ನೆಲ್ಲ ನೋಡಿದ್ರೆ ಈ ಒಂದು ಪಾದಯಾತ್ರೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತದೆ ಎಂಬ ಭರವಸೆ ನನಗಿದೆ ಎಂದು ಕಾಗಿನಲೆ ಗುರುಪೀಠದ ನಿರಂಜನಾನಂದ ಸ್ವಾಮೀಜಿ ಹೇಳಿದರು. ಇಂದಿನ‌ ಪಾದಯಾತ್ರೆ ರಾಣೆಬೆನ್ನೂರು ನಗರದಿಂದ ಹರಿಹರ ಗ್ರಾಮಕ್ಕೆ ತೆರಳಿ ಅಲ್ಲಿ ವಾಸ್ತವ್ಯ ಮಾಡಲಾಗುತ್ತದೆ.

Last Updated : Jan 18, 2021, 4:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.