ಹಾವೇರಿ: ಜಮೀನಿನಿಂದ ನೀರು ಹೊರಹೋಗಲು ಸರಿಯಾದ ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ರೈತರು ಅಧಿಕಾರಿಗಳೆದುರು ಆಕ್ರೋಶ ವ್ಯಕ್ತಪಡಿಸಿದ ಘಟನೆ ರಾಣೆಬೆನ್ನೂರಿನ ಬಳಿ ನಡೆದಿದೆ. ತುಂಗಾ ಮೇಲ್ದಂಡೆ ವೀಕ್ಷಣೆಗೆ ಬಂದಿದ್ದ ಇಬ್ಬರು ಅಧಿಕಾರಿಗಳ ಕಾರು ತಡೆದು ಹೊಲದಲ್ಲಿ ನೀರು ನಿಂತು ಬೆಳೆ ನಾಶವಾಗಿರುವುದನ್ನು ತೋರಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂಜಿನಿಯರ್ಗಳಾದ ಚಂದ್ರಶೇಖರ್ ನೆಗಳೂರು ಹಾಗೂ ಆನಂದ ಕುಲಕರ್ಣಿ ತುಂಗಾ ಮೇಲ್ದಂಡೆ ವೀಕ್ಷಿಸಲು ಬಂದಿದ್ದರು. ಹೊಲದಲ್ಲಿ ನೀರು ನಿಂತು ಕೆರೆಯಂತಾಗಿದ್ದ ಜಮೀನಲ್ಲಿ ಹಾನಿಯಾದ ಬೆಳೆ ಕಂಡು ಆಕ್ರೋಶಗೊಂಡಿದ್ದ ರೈತರು ನೀರು ನಿಲ್ಲದಂತೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ರು.
ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ನಂತರ ರೈತರು ಸುಮ್ಮನಾಗಿದ್ದಾರೆ. ಶೀಘ್ರವಾಗಿ ಸಮಸ್ಯೆ ಪರಿಹರಿಸದೆ ಹೋದರೆ ರಸ್ತೆಯನ್ನೇ ಕೊರೆದು ನೀರು ಹೊರಬಿಡುವುದಾಗಿ ಎಚ್ಚರಿಸಿದ್ದಾರೆ.