ETV Bharat / state

ಅಂಗನವಾಡಿಯಲ್ಲಿ ವ್ಯರ್ಥವಾದ ಆಹಾರ ಪದಾರ್ಥಗಳು: ಕುಳೇನೂರು ಗ್ರಾಮಸ್ಥರ ಆಕ್ರೋಶ

ಸಮಯಕ್ಕೆ ಸರಿಯಾಗಿ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ವಿತರಿಸಬೇಕಾದ ಪದಾರ್ಥಗಳನ್ನು ವಿತರಿಸದೇ ವ್ಯರ್ಥ ಮಾಡಿರುವ ಘಟನೆ ಕುಳೇನೂರು ಅಂಗನವಾಡಿಯಲ್ಲಿ ನಡೆದಿದೆ.

Haveri
ವ್ಯರ್ಥವಾದ ಆಹಾರ ಪದಾರ್ಥಗಳು
author img

By

Published : Jan 21, 2021, 9:17 AM IST

ಹಾವೇರಿ: ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ವಿತರಿಸಬೇಕಾದ ಪದಾರ್ಥಗಳನ್ನು ವ್ಯರ್ಥ ಮಾಡಿರುವ ಘಟನೆ ಕುಳೇನೂರು ಅಂಗನವಾಡಿಯಲ್ಲಿ ನಡೆದಿದೆ.

ಸಂಗೂರು ಸಕ್ಕರೆ ಕಾರ್ಖಾನೆ ಹಿಂಬದಿ ಇರುವ ಅಂಗನವಾಡಿಯಲ್ಲಿ ಈ ಪದಾರ್ಥಗಳನ್ನು ಹಾಳು ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ಅಕ್ಕಿ, ಬೆಲ್ಲ, ಸಕ್ಕರೆ, ಉಪ್ಪು ಸೇರಿದಂತೆ ವಿವಿಧ ಪದಾರ್ಥಗಳನ್ನು ವಿತರಿಸದೇ ಶೇಖರಿಸಿಟ್ಟಿದ್ದಾರೆ. ಅಕ್ಕಿಯಲ್ಲಿ ಇಲಿ ಹಿಕ್ಕೆ, ಬೂಸ್ಟ್ ಹತ್ತಿರುವ ಶೇಂಗಾ, ಒಡೆದು ಹಾಳಾಗಿರುವ ಎಣ್ಣೆ ಪ್ಯಾಕೆಟ್​ಗಳು ಅಂಗನವಾಡಿಯಲ್ಲಿ ಕಂಡು ಬಂದಿವೆ. ಈ ಎಲ್ಲ ವಸ್ತುಗಳು ಹಾಳಾಗಿದ್ದು, ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಸ್ಯೆ ಬಗೆಹರಿಸಲು ಬಂದ ಅಧಿಕಾರಿಗಳನ್ನು ಮಹಿಳೆಯರು ತೀವ್ರ ತರಾಟೆಗೆ ತಗೆದುಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಆಹಾರ ಪದಾರ್ಥ ವಿತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.