ETV Bharat / state

ಕುದುರೆಯೊಂದಿಗೆ ಹಳ್ಳಿಕಾರ್ ಹೋರಿ ಕಟ್ಟಿ ಓಡಿಸುವ ರೈತ: ಕಾರಣವೇನು ಗೊತ್ತೇ? - ಗಾಡಾ ಓಡಿಸುವ ಹೋರಿ

ಬೆಟ್ಟಪ್ಪ ಕುಳೇನೂರು ಎಂಬವರು ಗಾಡಾ ಓಡಿಸುವ ಹೋರಿಗೆ ದಮ್ಮು ಹತ್ತಬಾರದೆಂದು ಕುದುರೆಯೊಂದಿಗೆ ಕಟ್ಟಿ ಮೂರು ಕಿಲೋ ಮೀಟರ್​ ಓಡಿಸಿ ತಾಲೀಮು ನಡೆಸುತ್ತಿದ್ದಾರೆ.

ಹಳ್ಳಿಕಾರ್ ಹೋರಿಯೊಂದಿಗೆ ಕುದುರೆ ಕಟ್ಟಿ ಓಡಿಸುವ ರೈತ

author img

By

Published : Aug 21, 2023, 10:31 PM IST

ಕುದುರೆಯೊಂದಿಗೆ ಹಳ್ಳಿಕಾರ್ ಹೋರಿ ಕಟ್ಟಿ ಓಡಿಸುವ ರೈತ

ಹಾವೇರಿ : ಜಿಲ್ಲೆಯ ಪ್ರಮುಖ ಜಾನಪದ ಕ್ರೀಡೆಗಳೆಂದರೆ ದನ ಬೆದರಿಸುವ ಸ್ಪರ್ಧೆ, ಗಾಡಾ ಓಡಿಸುವ ಸ್ಪರ್ಧೆ ಮತ್ತು ಟಗರು ಕಾಳಗ. ಈ ಸ್ಪರ್ಧೆಗಳಿಗಾಗಿ ಹಾವೇರಿ ಜಿಲ್ಲೆಯಲ್ಲಿ ವಿಶೇಷವಾದ ಹೋರಿಗಳು, ಟಗರುಗಳನ್ನು ತಯಾರು ಮಾಡಲಾಗುತ್ತದೆ. ದನ ಬೆದರಿಸುವ ಸ್ಪರ್ಧೆಗಾಗಿ ಹೋರಿಗಳನ್ನು ನದಿಯಲ್ಲಿ ಈಜಿಸುವುದೂ ಸೇರಿದಂತೆ ವಿವಿಧ ತಾಲೀಮುಗಳನ್ನು ಮಾಡಲಾಗುತ್ತದೆ. ಇನ್ನು ಗಾಡಾ ಓಡಿಸುವ ಹೋರಿಗಳಿಗೆ ದಮ್ಮು ಹತ್ತಬಾರದು ಎಂದು ಹಲವು ತಾಲೀಮುಗಳನ್ನು ನಡೆಸುತ್ತಾರೆ.

ಆದರೆ, ಹಾವೇರಿಯ ಬೆಟ್ಟಪ್ಪ ಕುಳೇನೂರು ತಮ್ಮ ಹಳ್ಳಿಕಾರ್ ಹೋರಿಗೆ ದಮ್ಮು ಹತ್ತದಂತೆ ನೋಡಿಕೊಳ್ಳಲು ಬೇರೆಯೇ ಉಪಾಯ ಮಾಡಿದ್ದಾರೆ. ಬೆಟ್ಟಪ್ಪ ಅವರು ಹಳ್ಳಿಕಾರ್ ಹೋರಿಗೆ ದಮ್ಮು ಹತ್ತದಂತೆ ಅಭ್ಯಾಸ ಮಾಡಲು ಕುದುರೆ ಜೊತೆ ಓಡಿಸುತ್ತಾರೆ. ಪ್ರತಿವಾರ ಮೂರು ಕಿಲೋ ಮೀಟರ್​ ದೂರ ಖಾಲಿ ಗಾಡಾದಲ್ಲಿ ಕುದುರೆ ಮತ್ತು ಹೋರಿಯನ್ನು ಕಟ್ಟಿ ಓಡಿಸುತ್ತಾರೆ. ಇದರಿಂದ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ತಮ್ಮ ಹೋರಿ ಹೆಚ್ಚು ದೂರ ದಮ್ಮಿಲ್ಲದೆ ಓಡುತ್ತದೆ ಎನ್ನುತ್ತಾರೆ ಬೆಟ್ಟಪ್ಪ.

ಬೆಟ್ಟಪ್ಪರಿಗೆ ಬಾಲ್ಯದಿಂದಲೂ ದನ ಬೆದರಿಸುವ ಸ್ಪರ್ಧೆ ಎಂದರೆ ಪಂಚಪ್ರಾಣ. ಹೀಗಾಗಿ ಸ್ಪರ್ಧೆಗಾಗಿ ಹೋರಿಗಳ ಸಿದ್ಧತೆ ಮಾಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ದನ ಬೆದರಿಸುವ ಸ್ಪರ್ಧೆಯಲ್ಲಿ ನಡೆಯುವ ಅಪಘಾತಗಳನ್ನು ನೋಡಿರುವ ಬೆಟ್ಟಪ್ಪ, ಇದೀಗ ಗಾಡಾ ಓಡಿಸುವ ಸ್ಪರ್ಧೆಯತ್ತ ಮುಖ ಮಾಡಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಹಳ್ಳಿಕಾರ್ ಹೋರಿ ಮತ್ತು ಕುದುರೆ ಕಟ್ಟಿರುವ ಇವರು ಪ್ರತಿವಾರ ಮೂರು ಕಿಲೋ ಮೀಟರ್ ತಾಲೀಮು ಮಾಡಿಸುತ್ತಾರೆ.

ತಮಿಳುನಾಡಿನಿಂದ ಸುಮಾರು 1 ಲಕ್ಷ 30 ಸಾವಿರ ರೂಪಾಯಿ ನೀಡಿ ಹಳ್ಳಿಕಾರ್ ಹೋರಿ ತಂದಿದ್ದಾರೆ. ಈ ಜಾತಿಯ ಹೋರಿ ವೇಗವಾಗಿ ಓಡುವುದರಲ್ಲಿ ಪ್ರಸಿದ್ಧಿ. ಇದನ್ನು ಕುದುರೆ ಜೊತೆ ಓಡಿಸಿದರೆ ಸ್ಪರ್ಧೆಯಲ್ಲಿ ಬಹುಮಾನ ಗ್ಯಾರಂಟಿ ಎನ್ನುತ್ತಾರೆ ಬೆಟ್ಟಪ್ಪ. ಈ ಹಳ್ಳಿಕಾರ್ ಹೋರಿಗೆ ಗಂಭೀರ್ ಎಂದು ಹೆಸರಿಟ್ಟಿದ್ದಾರೆ. ಅದರಂತೆ ಹೆಣ್ಣು ಕುದುರೆಗೆ ರಂಗಿ ಎಂದು ಕರೆಯುತ್ತಿದ್ದು, ಅದರ ಗಂಡುಮರಿಗೆ ಬಾದಲ್ ಎಂದು ಕರೆಯುತ್ತಿದ್ದಾರೆ.

ಪ್ರತಿನಿತ್ಯ ಹೋರಿ ಮತ್ತು ಕುದುರೆಗೆ ವಿಶೇಷವಾದ ಆಹಾರ ತಿನ್ನಿಸಿ ಗಾಡಾ ಓಡಿಸುವ ಸ್ಪರ್ಧೆಗೆ ಹೋರಿಯನ್ನು ಹುರಿಗೊಳಿಸುತ್ತಿದ್ದಾರೆ. 66ರ ಇಳಿವಯಸ್ಸಿನಲ್ಲಿಯೂ ಬೆಟ್ಟಪ್ಪ ಹದಿಹರೆಯದ ಹುಡುಗನಂತೆ ಓಡಾಡುತ್ತಿದ್ದಾರೆ. ಇವರ ಹುರುಪು, ಹುಮ್ಮಸ್ಸು ನೋಡಿ ತೋಟದಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ದನ ಬೆದರಿಸುವ ಸ್ಪರ್ಧೆಗೆ ಹೋಗುತ್ತಿದ್ದೆ: "ನನಗೆ ಮೊದಲಿನಿಂದ ದನ ಬೆದರಿಸುವ ಸ್ಪರ್ಧೆ ಅಚ್ಚುಮೆಚ್ಚು. ಚಿಕ್ಕವನಾಗಿದ್ದಾಗಲೇ ನಾನು ನನ್ನ ತಂದೆಯ ಜೊತೆ ಸ್ಪರ್ಧೆಗೆ ಹೋಗುತ್ತಿದ್ದೆ. ಅಂದಿನಿಂದ ನನಗೆ ಈ ಹೋರಿ ಹಬ್ಬ ಗಾಡಾ ಓಡಿಸುವ ಹಬ್ಬದ ಹವ್ಯಾಸ ಶುರುವಾಯಿತು. ಅಲ್ಲಿಂದ ಆರಂಭವಾದ ಹವ್ಯಾಸ ಈಗಲೂ ಕಡಿಮೆಯಾಗಿಲ್ಲ. ಏನಾದರೊಂದು ಪ್ರಯೋಗ ಮಾಡಬೇಕು ಎನಿಸುತ್ತದೆ. ಅದಕ್ಕಾಗಿ ನಾನು ಗಾಡಾಕ್ಕೆ ಹಳ್ಳಿಕಾರ್ ಹೋರಿಗೆ ಕುದುರೆ ಕಟ್ಟಿ ಓಡಿಸುತ್ತೇನೆ. ನನ್ನನ್ನು ಹಲವರು ಆಶ್ಚರ್ಯದಿಂದ ನೋಡುತ್ತಾರೆ' ಎಂದು ಬೆಟ್ಟಪ್ಪ ಹೇಳಿದರು.

ಇದನ್ನೂ ಓದಿ: ಹಾವೇರಿ: ಮಿಂಚಿನಂತೆ ಓಡಿ ನೋಡುಗರನ್ನು ರೋಮಾಂಚನಗೊಳಿಸಿದ ಎತ್ತುಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.