ETV Bharat / state

ಎಂಎಲ್​ಸಿ ಮಾಡುವ ಭರವಸೆ ನೀಡಿದ್ದಾರೆ, ನಾನು ಯಾವುದೇ ಸಭೆಯಲ್ಲಿ ಭಾಗವಹಿಸಿಲ್ಲ: ಆರ್.ಶಂಕರ್​​​

ನನಗೆ ಯಡಿಯೂರಪ್ಪನವರು ಮಾತು ಕೊಟ್ಟಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ತಾರೆ ಎಂದು ನೂರಕ್ಕೆ ನೂರರಷ್ಟು ವಿಶ್ವಾಸವಿದೆ. ಪದೇ ಪದೆ ಸಿಎಂ ಅವರೇ ಹೇಳಿರುವಾಗ ನಾವು ಹೋಗಿ ಕೇಳೋ ಅಗತ್ಯವಿಲ್ಲ ಎಂದು ಮಾಜಿ ಸಚಿವ ಆರ್​.ಶಂಕರ್​ ತಮಗೆ ಎಂಎಲ್​ಸಿ ಸ್ಥಾನ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ex-minister-r-shankar
ಮಾಜಿ ಸಚಿವ ಆರ್.ಶಂಕರ್
author img

By

Published : May 29, 2020, 12:30 PM IST

ರಾಣೆಬೆನ್ನೂರು: ಸಿಎಂ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನನ್ನನ್ನು ಎಂಎಲ್​ಸಿ ಮಾಡುತ್ತಾರೆ. ನಾನು ಯಾವುದೇ ಸಭೆಯಲ್ಲಿ ಭಾಗವಹಿಸಿಲ್ಲ ಎಂದು ಮಾಜಿ ಸಚಿವ ಆರ್.ಶಂಕರ್ ಹೇಳಿದರು.

ರಾಣೆಬೆನ್ನೂರಿನ‌ ತಮ್ಮ ನಿವಾಸದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನಾನು ನಿನ್ನೆ ನಡೆದ ಶಾಸಕರ ಸಭೆಯಲ್ಲಿ ಭಾಗವಹಿಸಿಲ್ಲ. ಬೆಳಿಗ್ಗೆಯೇ ನಾನು ಬೆಂಗಳೂರು ಬಿಟ್ಟು ರಾಣೆಬೆನ್ನೂರಿಗೆ ಬಂದಿದ್ದೇನೆ. ಈಗ ಎಂಎಲ್​ಸಿ ಚುನಾವಣೆ ಬಂದಿದ್ದು, ಅವರವರ ಡಿಮ್ಯಾಂಡ್ ಮತ್ತು ಹಕ್ಕನ್ನ ಕೇಳ್ತಿದ್ದಾರೆ. ಸಿಎಂ ಇವೆಲ್ಲವನ್ನೂ ನಿಭಾಯಿಸ್ತಾರೆ, ಸರಿದೂಗಿಸ್ತಾರೆ ಎಂಬ ಭರವಸೆ ಇದೆ ಎಂದರು.

ಮಾಜಿ ಸಚಿವ ಆರ್.ಶಂಕರ್

ನನಗೆ ಯಡಿಯೂರಪ್ಪನವರು ಮಾತು ಕೊಟ್ಟಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ತಾರೆ ಎಂದು ನೂರಕ್ಕೆ ನೂರರಷ್ಟು ವಿಶ್ವಾಸವಿದೆ. ಪದೇ ಪದೆ ಸಿಎಂ ಅವರೇ ಹೇಳಿರುವಾಗ ನಾವು ಹೋಗಿ ಕೇಳೋ ಅಗತ್ಯವಿಲ್ಲ. ಕೊರೊನಾ ಸಲುವಾಗಿ ಬಹಳ ದಿನಗಳಿಂದ ಸಿಎಂರನ್ನ ಭೇಟಿ ಮಾಡಿಲ್ಲ. ಕೆಲವು ದಿನಗಳ ಹಿಂದಷ್ಟೇ ಸಿಎಂರನ್ನ ಭೇಟಿ ಮಾಡಿದ್ದೆ. ಆಗಲೂ ಸಿಎಂ, ಮಾಡ್ತೀವಪ್ಪ ಶಂಕರ ಎಂದು ಭರವಸೆ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ಕೊರೊನಾ‌ ಎದುರಿಸುವಲ್ಲಿಯೂ ಯಡಿಯೂರಪ್ಪ ಉತ್ತಮ ಕೆಲಸ ಮಾಡ್ತಿದ್ದಾರೆ ಎಂದು ಯಡಿಯೂರಪ್ಪರನ್ನು ಹೊಗಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.