ಹಾವೇರಿ : ಹೊಸ ಕೊಳವೆ ಬಾವಿ ಕೊರೆಸುವಾಗ ಅಕ್ಕಪಕ್ಕದ ಕೊಳವೆ ಬಾವಿಗಳಲ್ಲಿ ಏಕಾಏಕಿ ನೀರು ಉಕ್ಕಿ ಹರಿದ ವಿಚಿತ್ರ ಘಟನೆ ಹಾವೇರಿಯ ಶಿವಬಸವನ ನಗರದಲ್ಲಿ ನಡೆದಿದೆ.
ನಗರಸಭೆ ವತಿಯಿಂದ ಶಿವಬಸವನ ನಗರದಲ್ಲಿ ಇಂದು ಹೊಸದಾಗಿ ಕೊಳವೆ ಬಾವಿ ಕೊರೆಸಲಾಯ್ತು. ಈ ವೇಳೆ ಹೊಸದಾಗಿ ಕೊಳವೆ ಬಾವಿ ಕೊರೆಸುವ ಸ್ಥಳದ ಪಕ್ಕದ ಮನೆಯ ಆವರಣದಲ್ಲಿ ನೀರು ಕಾಣದೆ ಒಂದು ಕೊಳವೆ ಬಾವಿ ಫೇಲ್ ಆಗಿತ್ತು. ಫೇಲ್ ಆಗಿದ್ದ ಕೊಳವೆ ಬಾವಿ, ಹೊಸ ಕೊಳವೆ ಬಾವಿ ಸೇರಿ ಒಟ್ಟು ಮೂರು ಕೊಳವೆ ಬಾವಿಗಳಲ್ಲಿ ಭರಪೂರ ನೀರು ಕಾಣಿಸಿಕೊಂಡಿದೆ. ಒಂದು ಕೊಳವೆ ಬಾವಿಯಲ್ಲಂತೂ ನೀರು ಆಕಾಶದೆತ್ತರಕ್ಕೆ ಕಾರಂಜಿಯಂತೆ ಚಿಮ್ಮುತಿತ್ತು.
ನಗರಸಭೆ ವತಿಯಿಂದ ಹೊಸದಾಗಿ ಕೊರೆಸುತ್ತಿದ್ದ ಬಾವಿಯಲ್ಲಿ ನೂರು ಅಡಿಗೆ ನೀರು ಕಾಣಿಸಿಕೊಂಡಿದೆ. 3 ಕೊಳವೆ ಬಾವಿಯಲ್ಲಿ ನೀರು ಬಂದಿದ್ದನ್ನು ಕಂಡ ಸ್ಥಳೀಯರು ಫುಲ್ ಖುಷ್ ಆಗಿದ್ದಾರೆ.