ETV Bharat / state

ದೇಶದಲ್ಲಿ ದೊಡ್ಡ ರಾಜಕೀಯ ಅವಘಡ ಆಗಲಿದೆ: ಮತ್ತೊಮ್ಮೆ ಕೋಡಿಮಠ ಶ್ರೀ ಭವಿಷ್ಯ - ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ

ಈ ಹಿಂದೆ ಆಶ್ವೀಜದಿಂದ ಸಂಕ್ರಾಂತಿಯೊಳಗೆ ಜಗತ್ತು ತಲ್ಲಣಗೊಳ್ಳುತ್ತೆ ಎಂದು ಹೇಳಿದ್ದೆ, ಅದರಂತೆ ಮೊನ್ನೆ ಆಯ್ತಲ್ಲಾ ಎಂದು ಕೋಡಿಮಠ ಶ್ರೀಗಳು ನೆನಪಿಸಿದರು. ಜೊತೆಗೆ ಮತ್ತೊಂದು ರಾಜಕೀಯ ತಲ್ಲಣ ಸಂಭವಿಸಲಿದೆ ಎಂದು ಭವಿಷ್ಯ ನುಡಿದರು.

ಕೋಡಿಮಠ ಶ್ರೀ ಭವಿಷ್ಯ
ಕೋಡಿಮಠ ಶ್ರೀ ಭವಿಷ್ಯ
author img

By

Published : Dec 24, 2021, 7:43 PM IST

Updated : Dec 24, 2021, 8:16 PM IST

ಹಾವೇರಿ : ಇತ್ತೀಚೆಗೆ ನಡೆದ ದೊಡ್ಡ ಅವಘಡದಂತೆ ಸಂಕ್ರಾಂತಿಯೊಳಗಾಗಿ ಮತ್ತೊಂದು ರಾಜಕೀಯ ತಲ್ಲಣ ಸಂಭವಿಸಲಿದೆ ಎಂದು ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಕೋಡಿಮಠ ಶ್ರೀ ಭವಿಷ್ಯ

ಈ ಬಗ್ಗೆ ಇಂದು ರಾಣೆಬೆನ್ನೂರಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿ ಸ್ವಾಮೀಜಿಯವರು ಈ ಬಾರಿ ರೂಪಾಂತರಿ ಒಮಿಕ್ರಾನ್, ರಾಜಕೀಯ ಅವಘಡದ ಬಗ್ಗೆ ಮಾತನಾಡಿದರು. ಈಗಾಗಲೇ ನಾನು ಹೇಳಿದಂತೆ ದೊಡ್ಡ ಅವಘಢ ಸಂಭವಿಸಿದೆ. ಇದೀಗ ಮತ್ತೆ ದೇಶದಲ್ಲಿ ಅಂತಹುದ್ದೇ ದುರಂತ ಸಂಭವಿಸೋ ಮುನ್ಸೂಚನೆ ಇದೆ ಎಂದರು.

ಕೊರೊನಾ ರೂಪಾಂತರಿ ಹೆಚ್ಚಾಗುವ ಲಕ್ಷಣಗಳಿವೆ. ರೋಗ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ದೇಶದಲ್ಲಿ ಸಂಶಯ, ಅಸಹನೆ, ದ್ವೇಷ ಹಾಗೂ ಕಲಹಗಳು ಹೆಚ್ಚಾಗಲಿವೆ. ಕೆಲವೇ ದಿನಗಳಲ್ಲಿ ಮಳೆ ಕೂಡ ಅಧಿಕವಾಗಿ ಸುರಿಯುವ ಲಕ್ಷಣವಿದೆ ಎಂದು ಶ್ರೀಗಳು ಭವಿಷ್ಯ ನುಡಿದರು.

Last Updated : Dec 24, 2021, 8:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.