ETV Bharat / state

ಕನ್ನಡವೇ ತಾಯಿ, ಬೇರೆ ಭಾಷೆಗಳು ಚಿಕ್ಕಮ್ಮ-ದೊಡ್ಡಮ್ಮ ಹೊರತು ಅವು ಹೆತ್ತವ್ವನಂತಾಗಲು ಸಾಧ್ಯವಿಲ್ಲ.. ಡಾ. ಮಹೇಶ್​ ಜೋಶಿ - ಹಿಂದಿ ಭಾಷಾ ಸಮಸ್ಯೆ ಬಗ್ಗೆ ಹಾವೇರಿಯಲ್ಲಿ ಡಾ. ಮಹೇಶ್​ ಪ್ರತಿಕ್ರಿಯೆ

ನಾವು ಬೇರೆ ಭಾಷೆಗಳಿಗೂ ಗೌರವ ಕೊಡುತ್ತೇವೆ‌. ಕನ್ನಡ ಭಾಷೆ ತಾಯಿ. ಬೇರೆ ಭಾಷೆಗಳು ಚಿಕ್ಕಮ್ಮ, ದೊಡ್ಡಮ್ಮ ಇದ್ದಂತೆ. ಚಿಕ್ಕಮ್ಮ, ದೊಡ್ಡಮ್ಮರು ಚಿಕ್ಕಮ್ಮ, ದೊಡ್ಡಮ್ಮರೆ ಹೊರತು ಅವರು ತಾಯಿಯಾಗಲು ಸಾಧ್ಯವಿಲ್ಲ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಅವರು ಸ್ಪಷ್ಟಪಡಿಸಿದರು..

ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಷಿ
ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಷಿ
author img

By

Published : Apr 29, 2022, 7:43 PM IST

ಹಾವೇರಿ : ಹಿಂದಿಯನ್ನು ಅದ್ಹೇಗೆ ನೀವು ರಾಷ್ಟ್ರಭಾಷೆ ಎಂದು ಹೇಳುತ್ತೀರಿ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಅವರು ಪ್ರಶ್ನಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಹಿಂದಿ ರಾಷ್ಟ್ರಭಾಷೆಯಲ್ಲ. ಕನ್ನಡದ‌ ರೀತಿಯಲ್ಲೇ ಸಂವಿಧಾನದಲ್ಲಿ ಮನ್ನಣೆ ಪಡೆದ ಭಾಷೆಗಳಲ್ಲಿ ಅದು ಕೂಡ ಒಂದು ಎಂದರು. ನಮ್ಮ ಕನ್ನಡ ಭಾಷೆಗೆ ವಿಶೇಷತೆ ಇದೆ. ಕರ್ನಾಟಕದಲ್ಲಿ ಕನ್ನಡ ಭಾಷೆ ತಾಯಿ ಇದ್ದ ಹಾಗೆ ಎಂದು ಮಹೇಶ್ ಜೋಶಿ ಅವರು ತಿಳಿಸಿದರು.

ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಅವರು ಮಾತನಾಡಿರುವುದು..

ನಾವು ಬೇರೆ ಭಾಷೆಗಳಿಗೂ ಗೌರವ ಕೊಡುತ್ತೇವೆ‌. ಕನ್ನಡ ಭಾಷೆ ತಾಯಿ. ಬೇರೆ ಭಾಷೆಗಳು ಚಿಕ್ಕಮ್ಮ, ದೊಡ್ಡಮ್ಮ ಇದ್ದಂತೆ. ಚಿಕ್ಕಮ್ಮ, ದೊಡ್ಡಮ್ಮರು ಚಿಕ್ಕಮ್ಮ, ದೊಡ್ಡಮ್ಮರೇ ಹೊರತು ಅವರು ತಾಯಿಯಾಗಲು ಸಾಧ್ಯವಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು. ಯಾವುದೇ ಹಿಂಜರಿಕೆ ಇಲ್ಲದೆ ಚರ್ಚೆಗೆ ಆಸ್ಪದ ಕೊಡದೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡವೇ ನಮ್ಮ ಭಾಷೆ. ಕನ್ನಡವೂ ರಾಷ್ಟ್ರಭಾಷೆಯೂ ಹೌದು, ರಾಜ್ಯ ಭಾಷೆಯೂ ಹೌದು ಎಂದು ಅವರು ತಿಳಿಸಿದರು.

ಹಿಂದಿ ಹೇರಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಖಂಡಾತುಂಡವಾಗಿ ವಿರೋಧ ಮಾಡುತ್ತದೆ‌. ಕನ್ನಡಕ್ಕೆ ಇತಿಹಾಸ, ಅಸ್ಮಿತೆಯಿದೆ. ನಮ್ಮ ಮನೆಯಲ್ಲಿ ತಾಯಿಗೆನೆ ಸ್ಥಾನ. ಚಿಕ್ಕಮ್ಮ, ದೊಡ್ಡಮ್ಮರಿಗೆ ಏನು ಸ್ಥಾನ ಕೊಡಬೇಕೋ ಅದನ್ನು ಕೊಡುತ್ತೇವೆ. ಸೆಪ್ಟೆಂಬರ್ 23, 24 ಮತ್ತು 25ರಂದು ಹಾವೇರಿ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ‌‌ ನಡೆಯಲಿದೆ. ನಾಡಿದ್ದು ಹಾವೇರಿ ಜಿಲ್ಲೆ‌ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸರ್ವ ಸದಸ್ಯರ ಸಭೆ ನಡೆಯಲಿದೆ ಎಂದು ಅವರು ಹೇಳಿದರು.

ಓದಿ: ಪಂಪ್ ಸೆಟ್ ಕದಿಯಲು ಹೋದವರು ಶವವಾಗಿ ಪತ್ತೆ: ಆರೋಪಿಗಳಿಗೆ ಶೋಧ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.