ETV Bharat / state

ಹಾವೇರಿ... ಕಾಂಗ್ರೆಸ್ ಮುಳುಗುತ್ತಿರುವ ಹಡಗು : ಸಿಟಿ ರವಿ ಟೀಕೆ

ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ತುದಿಗಾಲಲ್ಲಿದ್ದಾರೆ - ​ಕಾಂಗ್ರೆಸ್​ ಮುಳುಗುತ್ತಿರುವ ಹಡಗು - ಮುಳುಗುತ್ತಿರುವ ಹಡಗಿಗೆ ಯಾರು ಹೋಗುತ್ತಾರೆ - ಕಾಂಗ್ರೆಸ್ ವಿರುದ್ಧ​ ಸಿಟಿ ರವಿ ಗುಡುಗು.

ct-ravi-talked-against-congress
ಸಿಟಿ ರವಿ
author img

By

Published : Jan 23, 2023, 6:12 PM IST

ಸಿಟಿ ರವಿ ಪ್ರತಿಕ್ರಿಯೆ

ಹಾವೇರಿ: ಕಾಂಗ್ರೆಸ್‌ನಿಂದ ಬಿಜೆಪಿ ಸೇರಲು ಸುಮಾರು ಜನ ತುದಿಗಾಲಲ್ಲಿದ್ದಾರೆ. ಆದರೆ, ನಾವು ಸೆಲೆಕ್ಟ ಮಾಡಿ ಯಾರನ್ನ ತಗೋಬೇಕು ಯಾರನ್ನ ತಗೋಬಾರದು ಎಂದು ವಿಚಾರ ಮಾಡಿ ತಗೋತಿವಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. ಜಿಲ್ಲೆಯ ರಾಣೆಬೆನ್ನೂರಿನ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಗುಜರಾತ್‌ನಲ್ಲಿ ಕಳೆದ ಎಲೆಕ್ಷನ್​​ನಲ್ಲಿ 77 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿತ್ತು. ಈಗ ಅದು 17ಕ್ಕೆ ಬಂದಿದೆ. ಅಂದರೆ ಅವರು 60 ಸ್ಥಾನ ಕಳೆದುಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಕೇವಲ ಎರಡೇ ಎರಡು ಸೀಟುಗಳನ್ನು ಪಡೆದಿದೆ. ಹೀಗಿರುವಾಗ ಯಾರು ಹೋಗ್ತಾರೆ ಮುಳುಗುತ್ತಿರುವ ಹಡಗಿಗೆ. ರಾಜ್ಯದಲ್ಲಿ ಸಹ ಇದೇ ಪರಿಸ್ಥಿತಿ ಇದೆ. ಸ್ವಲ್ಪ ದಿನಗಳಲ್ಲಿ ಕಾಂಗ್ರೆಸ್​​ ಪಕ್ಷದೊಳಗೆ ಮಹಾಭಾರತ ನಡೆಯುತ್ತದೆ ಎಂದು ಸಿಟಿ ರವಿ ಭವಿಷ್ಯ ನುಡಿದರು.

ಪ್ರಜಾಧ್ವನಿ ಅಲ್ಲಾ ಕಾಂಗ್ರೆಸ್​ ಧ್ವನಿ: ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಬಗ್ಗೆ ಮಾತನಾಡಿದ ಅವರು, ಪ್ರಜಾಧ್ವನಿ ಎಂದರೆ ಜನರು ಮಾತನಾಡಬೇಕು. ಅದು ಪ್ರಜಾಧ್ವನಿ ಅಲ್ಲ ಕಾಂಗ್ರೆಸ್ ಧ್ವನಿ. ಕಾಂಗ್ರೆಸ್‌ನವರು ಇರುವುದೇ ನಮ್ಮನ್ನ ಬೈಯ್ಯೂಕೆ ಎಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಪುರಂದರದಾಸರು ನಿಂದಕರು ಇರಬೇಕು ಜಗದೊಳಗೆ ಎಂದು ಹೇಳಿದ್ದಾರೆ ಎಂದು ಉದಾಹರಣೆಯನ್ನೂ ಕೊಟ್ಟರು. ಕಾಂಗ್ರೆಸ್​ನವರ ಮಾತಿನಲ್ಲಿ ನಮ್ಮ ಬಗ್ಗೆ ಭಯ ವ್ಯಕ್ತವಾಗುತ್ತಿದೆ. ಪ್ರಜೆಗಳು ನಮ್ಮ ಜೊತೆ ಇದ್ದಾರೆ. ಪ್ರಜೆಗಳನ್ನು ಲೂಟಿ ಮಾಡಿದ ಕಾಂಗ್ರೆಸ್ಸಿಗರು ನಮ್ಮ ವಿರುದ್ದ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅವರದು ಬರೀ ಸೌಂಡ್ ನಮ್ಮದು ಗ್ರೌಂಡ್. ​ಪ್ರತಿದಿನ ಗ್ರೌಂಡ್​ ಅಲ್ಲಿ ನಮ್ಮ ಕೆಲಸ ಆಗುತ್ತಿವೆ. ಅವರು ಮೈಕ್ ಹಚ್ಚಿಕೊಂಡು ನಮಗೆ ಬೈಯ್ದರೆ ವೋಟ್ ಬರುತ್ತವಾ.? ಕಾಂಗ್ರೆಸ್‌ನವರು ಸೌಂಡ್ ಹೆಚ್ಚಿಗೆ ಮಾಡುತ್ತಾರೆ. ಪ್ರತಿಪಕ್ಷನಾಯಕ ಸಿದ್ದರಾಮಯ್ಯ 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅಪ್ಪನಾಣೆಗೂ ಪ್ರಧಾನಿಯಾಗಲ್ಲ ಎಂದು ಹೇಳಿದ್ದರು. ಮೋದಿಯವರು ಎರಡು ಬಾರಿ ಪ್ರಧಾನಿಯಾದರು ಈಗ ಅಪ್ಪನ ಬಗ್ಗೆ ನಾನು ಏನು ಹೇಳಲಿ. 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಒಂದೇ ಒಂದು ಸೀಟ್ ಬರುವುದಿಲ್ಲಾ ಎಂದಿದ್ದರು. ನಾವು ಜೆಡಿಎಸ್ ಒಗ್ಗಟ್ಟಾಗಿದ್ದೇವೆ ಎಲ್ಲಾ ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದರು ಆದರೆ ಏನಾಯಿತು, ನಾವು ಇನ್ನು ಸ್ವಲ್ಪ ಪ್ರಯತ್ನಿಸಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್​ಗೆ ಒಂದು ಸೀಟು ಬರುತ್ತಿರಲಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಸ್ಪರ್ಧೆಗೆ ಪಾಕಿಸ್ತಾನ ಕರೆಕ್ಟ್​: ಇನ್ನು ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಮಾತನಾಡಿದ ಅವರು, ನನ್ನ ಲೆಕ್ಕಾಚಾರದ ಪ್ರಕಾರ ಅವರ ಮನಸ್ಥಿತಿಗೆ ಪಾಕಿಸ್ತಾನ ಕರೆಕ್ಟ್. ಅಲ್ಲಿ ಮೋದಿಯವರಿಲ್ಲ, ಬಸವರಾಜ್ ಬೊಮ್ಮಾಯಿ ಇಲ್ಲ ಎಂದರು. ರಾಣೆಬೆನ್ನೂರಿಗೆ ಆಗಮಿಸಿದ್ದ ಸಿಟಿ ರವಿ ಅವರನ್ನು ಬೈಕ್ ರ‍್ಯಾಲಿ ಮೂಲಕ ಕಾರ್ಯಕರ್ತರು ಸ್ವಾಗತಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿ ಸಾಗಿತು. ಇನ್ನು ಸಿಟಿ ರವಿ ಆಗಮಿಸುವ ರಸ್ತೆಗಳಲ್ಲಿ ಜನರು ಪುಷ್ಪಮಾಲೆಗಳನ್ನ ಹಿಡಿದು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಹಾವೇರಿ ಜಿಲ್ಪಾ ಬಿಜೆಪಿ ಅಧ್ಯಕ್ಷ ಸಿದ್ದರಾಜ ಕಲಕೋಟಿ, ರಾಣೆಬೆನ್ನೂರು ಶಾಸಕ ಅರುಣ್​ ಕುಮಾರ್ ಗುತ್ತೂರು ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಬೆಳಗಾವಿಯಲ್ಲಿ ಕಾಂಗ್ರೆಸ್​ ವಿರುದ್ದ ಸಿಎಂ ಗುಡುಗು: ಇನ್ನು ಬೆಳಗಾವಿಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಯಿ ಅವರು ಕಾಂಗ್ರೆಸ್​ ವಿರುದ್ದ ಟೀಕಾ ಪ್ರಹಾರ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್​ ಪಕ್ಷ 300 ಕಡೆ ಪ್ರತಿಭಟನೆ ನಡೆಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರನ್ನು ಹಾಳು ಮಾಡಿದವರೇ ಅವರು. ನಗರದಲ್ಲಿ ರಾಜ ಕಾಲುವೆ ಹೆಸರಲ್ಲಿ ಭ್ರಷ್ಟಾಚಾರ ಸೇರಿದಂತೆ ಅನೇಕ ಹಗರಣಗಳು ಕಾಂಗ್ರೆಸ್​​ ಕಾಲದಲ್ಲೇ ಆಗಿವೆ. ಅವುಗಳನ್ನ ಮುಚ್ಚಿಹಾಕಲು ಈರೀತಿಯಾಗಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಕಾಂಗ್ರೆಸ್​ನ​​ ಅವಿಭಾಜ್ಯ ಅಂಗ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಗೋವಾ ಸರ್ಕಾರದಿಂದ ಮಹದಾಯಿ ಡಿಪಿಆರ್‌‌ ತಡೆಯುವ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.