ETV Bharat / state

ಪಶು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಆಕಳು ಸಾವು: ಮಾಲೀಕ‌ನ ಕಣ್ಣೀರು

ಕಳೆದ ಮೂರು ದಿನಗಳಿಂದ ಆಕಳೊಂದು ಥೈರಾಯ್ಡ್ ಹಾಗೂ ಜ್ವರದಿಂದ ಬಳಲುತ್ತಿದ್ದು, ನಿನ್ನೆ ಸರ್ಕಾರಿ ಪಶು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಸರಿಯಾದ ವೇಳೆ ಪಶು ವೈದ್ಯರು ಚಿಕಿತ್ಸೆ ನೀಡದ ಪರಿಣಾಮ ಆಕಳು ಮೃತಪಟ್ಟಿದೆ.

Cow died due to negligence of veterinary doctor
ಪಶು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಆಕಳು ಸಾವು....ಮಾಲೀಕ‌ ಕಣ್ಣೀರು
author img

By

Published : Mar 17, 2020, 10:21 AM IST

ರಾಣೆಬೆನ್ನೂರು: ಪಶು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಸುಮಾರು 40 ಸಾವಿರ ರೂ. ಮೌಲ್ಯದ ಆಕಳು ಸಾವನ್ನಪ್ಪಿದ ಘಟನೆ ರಾಣೆಬೆನ್ನೂರು ನಗರದ ಪಶು ಆಸ್ಪತ್ರೆಯಲ್ಲಿ ನಡೆದಿದೆ.

ಪಶು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಆಕಳು ಸಾವು: ಮಾಲೀಕ‌ ಕಣ್ಣೀರು

ಕಳೆದ ಮೂರು ದಿನಗಳಿಂದ ಆಕಳು ಥೈರಾಯ್ಡ್ ಹಾಗೂ ಜ್ವರದಿಂದ ಬಳಲುತ್ತಿದ್ದು, ನಿನ್ನೆ ಸರ್ಕಾರಿ ಪಶು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ನಿನ್ನೆ ಬೆಳಿಗ್ಗೆ 10 ಗಂಟೆಗೆ ಆಕಳನ್ನ ಆಸ್ಪತ್ರೆಗೆ ತಂದಾಗ ಯಾರೊಬ್ಬ ಪಶು ವೈದ್ಯರೂ ಚಿಕಿತ್ಸೆ ನೀಡಿಲ್ಲ. ಸತತ ನಾಲ್ಕು ಗಂಟೆಗಳ ಬಳಿಕ ವೈದ್ಯರು ಚಿಕಿತ್ಸೆ ನೀಡಲು ಮುಂದಾಗಿದ್ದು, ಆ ಕೂಡಲೇ ಆಕಳು ಸಾವನ್ನಪ್ಪಿದೆ.

ಇದರಿಂದ ಆಕ್ರೋಶಗೊಂಡ ಆಕಳು ಮಾಲೀಕರು ಶಾಸಕ ಅರುಣ ಕುಮಾರ ಪೂಜಾರ ಆಪ್ತ ಸಹಾಯಕರನ್ನು ಸ್ಥಳಕ್ಕೆ ಕರೆಯಿಸಿ, ಆಸ್ಪತ್ರೆ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಆಕಳಿಗೆ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು. ಮಾಲೀಕ, ಆಕಳು ಮೃತಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿಯೇ ಕಣ್ಣೀರು ಹಾಕಿದ ಘಟನೆ ನಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.