ETV Bharat / state

ಗೃಹ ಸಚಿವರ ಕ್ಷೇತ್ರದಲ್ಲೇ ಹೆಚ್ಚುತ್ತಿರುವ ಸೋಂಕಿತರು..ಲಾಕ್​ಡೌನ್​ ಮಾಡುವಂತೆ ಸ್ಥಳೀಯರ ಆಗ್ರಹ

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

corona infected  increasing in Haveri
ಗೃಹ ಸಚಿವರ ಕ್ಷೇತ್ರದಲ್ಲೇ ಹೆಚ್ಚುತ್ತಿರುವ ಸೋಂಕಿತರು..ಲಾಕ್​ಡೌನ್​ ಮಾಡುವಂತೆ ಸ್ಥಳೀಯರ ಆಗ್ರಹ
author img

By

Published : Jul 1, 2020, 10:59 PM IST

ಹಾವೇರಿ: ಲಾಕ್‌ಡೌನ್‌ ಸಡಿಲಿಕೆ ನಂತರ ರಾಜ್ಯದಲ್ಲಿ ಕೊರೊನಾ ವೈರಸ್‌ ಆರ್ಭಟಿಸುತ್ತಿದೆ. ದಿನನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಗೃಹ ಸಚಿವರ ಕ್ಷೇತ್ರದಲ್ಲೇ ಹೆಚ್ಚುತ್ತಿರುವ ಸೋಂಕಿತರು..ಲಾಕ್​ಡೌನ್​ ಮಾಡುವಂತೆ ಸ್ಥಳೀಯರ ಆಗ್ರಹ

ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. ಅದರಲ್ಲೂ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲೇ 67 ಪ್ರಕರಣಗಳು ದಾಖಲಾಗಿವೆ. ಪಟ್ಟಣದ ದೇಸಾಯಿ ಗಲ್ಲಿ, ಗೌಡರ ಓಣಿಯಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಇವುಗಳನ್ನ ಕಂಟೈನ್ಮೆಂಟ್​ ಝೋನ್​ ಮಾಡಲಾಗಿದೆ. ಹೀಗಾಗಿ ಶಿಗ್ಗಾಂವಿ ಪಟ್ಟಣದ ಜನರಲ್ಲಿ ಆತಂಕ ಶುರುವಾಗಿದ್ದು, ಕೆಲವು ದಿನಗಳ ಕಾಲ ಲಾಕ್​ಡೌನ್ ಮಾಡುವಂತೆ ಎಸಿ ಮತ್ತು ತಹಶೀಲ್ದಾರ್​ರಿಗೆ ಮನವಿ ಸಲ್ಲಿಸಿದ್ದಾರೆ. ವ್ಯಾಪಾರಸ್ಥರು ಹಾಗೂ ಸ್ಥಳೀಯರ ಮನವಿ ಆಧರಿಸಿ ತಹಶೀಲ್ದಾರ್​ ಪ್ರಕಾಶ ಕುದರಿ, ಲಾಕ್​ಡೌನ್ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಇನ್ನು, ವ್ಯಾಪಾಸ್ಥರು ಬೆಳಿಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಮಾತ್ರ ವ್ಯಾಪಾರದ ಸಮಯವನ್ನ ಸ್ವಯಂ ನಿರ್ಧರಿಸಿಕೊಂಡಿದ್ದಾರೆ. ಪಟ್ಟಣದ ಹೊಟೇಲ್ ಮಾಲೀಕರು ಸ್ವಯಂಪ್ರೇರಿತವಾಗಿ ಹೊಟೇಲ್​ಗಳನ್ನ ಬಂದ್ ಮಾಡಿದ್ದಾರೆ. ಅಲ್ಲದೇ, ಗೃಹ ಸಚಿವರು ಕ್ಷೇತ್ರದ ಜನರ ಹಿತದೃಷ್ಟಿಯಿಂದ ಕಠಿಣ ಕ್ರಮಗಳನ್ನ ಕೈಗೊಂಡು ಕೊರೊನಾ ಸೋಂಕು ವ್ಯಾಪಕವಾಗಿ ಹರಡೋದನ್ನ ತಡೆಯಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.