ಹಾವೇರಿ: ಕೊರೊನಾ ಕರಿನೆರಳು ಹಾವೇರಿಯ ಸಿಂದಗಿ ಮಠದ ಕಜ್ಜಾಯ ಸಂಪ್ರದಾಯದ ಮೇಲೆ ಮೂಡಿದ್ದು, ಮಠದ ಏಳುದಶಕಗಳ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಕಜ್ಜಾಯ ಮತ್ತು ದಾಸೋಹ ನಿಲ್ಲಿಸಲಾಗಿದೆ.
ಏಲಕ್ಕಿ ನಗರಿ ಹಾವೇರಿಗೆ ಮರಿಕಲ್ಯಾಣ ಅಥವಾ ಎರಡನೇಯ ಕಲ್ಯಾಣ ಎಂದು ಹೆಸರಿದೆ. ಹಾವೇರಿಗೆ ಈ ಹೆಸರು ಬರಲು ಕಾರಣ ಇಲ್ಲಿ ಇರುವ ಮಠಗಳ ಸಂಖ್ಯೆ. ಹೌದು ಕಲ್ಯಾಣದಲ್ಲಿ 65 ಮಠಗಳಿದ್ದರೇ ಹಾವೇರಿಯಲ್ಲಿ 53 ಮಠಗಳಿವೆ. ಈ ಮಠಗಳಲ್ಲಿ ಪ್ರಮುಖವಾದ ಮಠಗಳಲ್ಲಿ ಒಂದು ಸಿಂದಗಿಮಠ.
ಸಿಂದಗಿ ಶಾಂತವಿರೇಶ್ವರರಿಂದ ಆರಂಭವಾದ ಮಠ ತನ್ನದೇ ಆದ ಕಜ್ಜಾಯ ಸಂಪ್ರದಾಯದಿಂದ ನಾಡಿನ ಗಮನಸೆಳೆದಿದೆ. ಈ ಮಠಕ್ಕೆ ಅಧ್ಯಯನಕ್ಕೆ ಬರುವ ವಟುಗಳು ನಗರದ ಮನೆ ಮನೆಗೆ ತೆರಳಿ ಭಕ್ತರ ನೀಡುವ ಆಹಾರವನ್ನ ಮಠಕ್ಕೆ ತರುತ್ತಾರೆ. ನಂತರ ಈ ರೀತಿ ತಂದ ಆಹಾರವನ್ನ ವಟುಗಳು ಮಠಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ದಾಸೋಹದ ರೂಪದಲ್ಲಿ ಉಣಬಡಿಸಲಾಗುತ್ತೆ. ಆದರೆ, ಈ ವಿಶಿಷ್ಠ ಪರಂಪರೆಗೆ ಇದೀಗ ಕರೋನಾ ಕರಿಛಾಯೆ ಬಿದ್ದಿದೆ. ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ವಟುಗಳನ್ನು ಸ್ವಗ್ರಾಮಗಳಿಗೆ ಕಳಿಸಲಾಗಿದೆ. ಕಜ್ಜಾಯ ಮತ್ತು ದಾಸೋಹವನ್ನ ಏಪ್ರೀಲ್ 14 ರವರೆಗೆ ನಿಲ್ಲಿಸಲಾಗಿದೆ. ಹೀಗಾಗಿ ಮಠದ ಭಕ್ತರು ಸಹಕರಿಸುವಂತೆ ಮಠದ ಅಡಳಿತಾಧಿಕಾರಿಗಳು ತಿಳಿಸಿದ್ದಾರೆ.