ಹಾವೇರಿ: ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಸೋಂಕಿನ ಪ್ರಕರಣ ದೃಢಪಟ್ಟಿದೆ. ಸೋಮವಾರ ದೃಢಪಟ್ಟಿದ್ದ 639ನೇ ಸೋಂಕಿತ ವ್ಯಕ್ತಿಯ ಅಣ್ಣನಿಗೆ ಇಂದು ಕೊರೊನಾ ದೃಢಪಟ್ಟಿದೆ.
ನಿನ್ನೆ 30 ವರ್ಷದ ತಮ್ಮನಿಗೆ ಸೋಂಕಿರುವುದು ಪತ್ತೆಯಾಗಿತ್ತು. ಇದೀಗ ಆತನ 40 ವರ್ಷದ ಅಣ್ಣನಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈತನನ್ನು ಪಿ-672 ಎಂದು ಗುರುತಿಸಲಾಗಿದೆ. ಈತ ತನ್ನ ತಮ್ಮನ ಹಾಗೂ ಮಗನ ಜೊತೆಯಲ್ಲಿ ಏಪ್ರಿಲ್ 28 ರಂದು ಮುಂಬೈನಿಂದ ಸವಣೂರಿಗೆ ಆಗಮಿಸಿದ್ದನು.
ಈಗ ಸಹೋದರರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಪಿ - 672ರ ಮಗನ ವರದಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ.