ETV Bharat / state

ಹಾವೇರಿ: ಶಿಥಿಲಗೊಂಡ ಸರ್ಕಾರಿ ನೌಕರರ ವಸತಿಗೃಹಗಳು..

ಸರ್ಕಾರಿ ನೌಕರರಿಗೆ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ವಸತಿಗೃಹಗಳು ಲಭ್ಯವಿಲ್ಲದಿರುವುದರಿಂದ ಸಮಸ್ಯೆ - ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ ಕುಮಾರ್ ನೀರಲಗಿ ಒತ್ತಾಯ.

Dilapidated Government Employees quarters
ಹಾವೇರಿ:ಶಿಥಿಲಗೊಂಡ ಸರ್ಕಾರಿ ನೌಕರರ ವಸತಿಗೃಹಗಳು..
author img

By

Published : Feb 12, 2023, 10:54 PM IST

ಹಾವೇರಿ: ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಸರ್ಕಾರಿ ನೌಕರರ ವಸತಿಗೃಹಗಳನ್ನು ನಿರ್ಮಿಸಿ ಹಲವು ದಶಕಗಳೇ ಕಳೆದಿವೆ. ಹಾವೇರಿ ತಾಲೂಕು ಕೇಂದ್ರವಾಗಿದ್ದಾಗ ಅಂದಿನ ಸರ್ಕಾರಿ ನೌಕರರಿಗಾಗಿ 1965ರಲ್ಲಿ ವಸತಿಗೃಹಗಳು ನಿರ್ಮಾಣಗೊಂಡಿದ್ದವು. ಪಿಡಬ್ಲುಡಿ ಇಲಾಖೆಯಲ್ಲಿ ಸುಮಾರು 100ಕ್ಕೂ ಅಧಿಕ ವಸತಿಗೃಹಗಳಿದ್ದು ಇದರಲ್ಲಿ 70ರಷ್ಟು ಮನೆಗಳು ಶಿಥಿಲಗೊಂಡಿವೆ.

ಪಕ್ಕದ ಜಿಲ್ಲೆ, ನಗರಗಳಲ್ಲಿ ವಾಸವಾಗಿರುವ ನೌಕರರು.. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಸಮರ್ಪಕ ವಸತಿಗೃಹಗಳು ಇಲ್ಲದ ಕಾರಣ ಸರ್ಕಾರಿ ನೌಕರರು ನಗರದಲ್ಲಿ ಉಳಿಯುತ್ತಿಲ್ಲಾ ಎಂಬ ಆರೋಪಗಳು ಕೇಳಿಬಂದಿದೆ. ಹಾವೇರಿಯಲ್ಲಿ ಕೆಲಸ ಮಾಡುವ ಬಹುತೇಕ ಸರ್ಕಾರಿ ನೌಕರರು ನೇರೆಯ ಜಿಲ್ಲೆಗಳಾದ ದಾವಣಗೆರೆ, ಧಾರವಾಡ, ಗದಗ, ರಾಣೆಬೆನ್ನೂರು ಸೇರಿದಂತೆ ದೂರದ ಊರುಗಳಲ್ಲಿ ಮನೆ ಮಾಡಿದ್ದಾರೆ.

ಬಾಡಿಗೆ ಮನೆಗಳಲ್ಲಿರುವ ಪರಿಸ್ಥಿತಿ ನಿರ್ಮಾಣವಾಗಿದೆ.. ಈ ಕಟ್ಟಡಗಳಲ್ಲಿ ಕೆಲವನ್ನು ತೆರವುಗೊಳಿಸಿ ಹೊಸದಾಗಿ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ಜಿಲ್ಲೆಯ ಸರ್ಕಾರಿ ನೌಕರರಿಗೆ ಇವು ಸಾಲುತ್ತಿಲ್ಲ. ಹಾವೇರಿಗೆ ಆಗಮಿಸುವ ಸರ್ಕಾರಿ ನೌಕರರು ಒಂದು ಬಾಡಿಗೆ ಮನೆಯಲ್ಲಿರಬೇಕು ಇಲ್ಲದಿದ್ದರೆ ಸಮೀಪದ ಬೇರೆ ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಕೇಂದ್ರ ಹಾವೇರಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜಿಲ್ಲೆಯಾಗಿ 25 ವರ್ಷಗಳೇ ಕಳೆದಿವೆ. ಆದರೆ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ವಸತಿಗೃಹಗಳು ಸರ್ಕಾರಿ ನೌಕರರಿಗೆ ಲಭ್ಯವಿಲ್ಲದಿರುವುದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ ಕುಮಾರ್ ನೀರಲಗಿ ಒತ್ತಾಯಿಸಿದರು.

ಇದನ್ನೂ ಓದಿ.. ಹಾವೇರಿ ಶಾಸಕ ಓಲೇಕಾರ್ ಬಗ್ಗೆ ಪರ ವಿರೋಧ ಗೊಂದಲದ ವಾತಾವರಣ.. ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ

ಸಿಎಂ ಬೊಮ್ಮಾಯಿ, ಕೃಷಿ ಸಚಿವ ಬಿ ಸಿ ಪಾಟೀಲ್​ ಅವರ ತವರು ಜಿಲ್ಲೆ.. ಹಾವೇರಿ ಜಿಲ್ಲೆ ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಾಗಿದೆ ಮತ್ತು ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರತಿನಿಧಿಸುವ ಜಿಲ್ಲೆಯಾಗಿದೆ. ಇಂತಹ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ನೌಕರರಿಗೆ ಸೂಕ್ತ ವಸತಿ ಸೌಕರ್ಯ ಇಲ್ಲದಿರುವುದು ಬೇಸರ ತಂದಿದೆ. ನಗರದ ಮಧ್ಯಭಾಗದಲ್ಲಿರುವ ಹಳೆಯ ಕಾಲದ ವಾಸಿಸಲು ಯೋಗ್ಯವಲ್ಲದ ಮನೆಗಳನ್ನು ಸರ್ಕಾರ ಈ ಕೂಡಲೇ ನೆಲಸಮ ಮಾಡಬೇಕು. ಆ ಜಾಗದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಿ ಹಾವೇರಿ ಜಿಲ್ಲೆಯ ಸರ್ಕಾರಿ ನೌಕರರಿಗೆ ವಸತಿ ಸೌಲಭ್ಯ ಕಲ್ಪಸುವಂತೆ ಸಂಜೀವಕುಮಾರ್ ಮನವಿ ಮಾಡಿದರು.

ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಅನಾಹುತ ತಪ್ಪಿಸಲಿ.. ಕೆಲವು ಮನೆಗಳು ಕುಸಿದು ಬೀಳುವ ಹಂತದಲ್ಲಿದ್ದು, ಅನಾಹುತಗಳು ಸಂಭವಿಸುವುದಕ್ಕೂ ಮುನ್ನ ಸರ್ಕಾರ ಎತ್ತೆಚ್ಚುಕೊಂಡು ಇತ್ತ ಗಮನ ಹರಿಸಬೇಕು ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಮನೆಗಳನ್ನ ಆದಷ್ಟು ಬೇಗ ಕೆಡವಿ ಜಿಲ್ಲಾ ಕೇಂದ್ರ ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರು ವಸತಿ ಸಮಸ್ಯೆ ಎದುರಿಸದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನ ನಿರ್ಮಿಸಬೇಕು ಎಂದು ಸಂಜೀವಕುಮಾರ್ ಹೇಳಿದರು.

ಇದನ್ನೂ ಓದಿ: 'ನಾನು ಯಾರ ಹತ್ತಿರವೂ ಸೂಟ್‌ಕೇಸ್ ಪಡೆದಿಲ್ಲ': ಮಾಜಿ ಸಚಿವ ಮನೋಹರ್ ತಹಶೀಲ್ದಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.