ಹಾವೇರಿ : ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಲು 60 ಶಾಸಕರ ಸಮ್ಮತಿ ಇದೆ ಎಂದು ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಒಬ್ಬೊಬ್ಬ ಶಾಸಕರಿಗೆ ಪಾಲ್ಗೊಳ್ಳುವ ಅವಕಾಶವಿದ್ದಿದ್ದರಿಂದ ನಾನು ವೈಯಕ್ತಿಕವಾಗಿ ಅರುಣ್ ಸಿಂಗ್ ಭೇಟಿ ಮಾಡಿ ಅರುಣ್ ಸಿಂಗ್ ಮುಂದೆ ತಮ್ಮ ಅಹವಾಲುಗಳನ್ನು ಹೇಳಿಕೊಂಡಿದ್ದೆ ಎಂದಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಮಾಡುವ ಕುರಿತಂತೆ ಐದಾರು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಲ್ಲದ್,ಯತ್ನಾಳ್, ಮುರುಗೇಶ್ ನಿರಾಣಿ, ಸಿ ಪಿ ಯೋಗೇಶ್ವರ್ ಸೇರಿದಂತೆ ಐದಾರು ಜನ ಸಿಎಂ ಬದಲಾವಣೆಯ ಪ್ರಸ್ತಾಪ ಮಾಡಿದ್ದಾರೆ. ಆದರೆ, ಅರುಣ್ ಸಿಂಗ್ ಈ ಕುರಿತಂತೆ ಏನೂ ಹೇಳಿಲ್ಲ.
ನಮ್ಮೆಲ್ಲರ ಅಭಿಪ್ರಾಯ ಪಡೆದಿರುವ ಅರುಣ್ ಸಿಂಗ್, ದೆಹಲಿಗೆ ತೆರಳಿ ವರಿಷ್ಠರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಆ ಮೇಲೆ ನಾಯಕತ್ವ ಬದಲಾವಣೆ ಕುರಿತಂತೆ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ ಎಂದು ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
ಓದಿ:ಬಿಜೆಪಿ ಕೋರ್ ಕಮಿಟಿ ಸಭೆ ಆರಂಭ.. ನಾಯಕತ್ವ ಗೊಂದಲಕ್ಕೆ ಬೀಳುತ್ತಾ ಬ್ರೇಕ್..?