ETV Bharat / state

ರಾಹುಲ್​ ಗಾಂಧಿ ಯುವಕರಿಗೆ ದೊಡ್ಡ ಶಕ್ತಿ; ಕಾಂಗ್ರೆಸ್​ ಅಭ್ಯರ್ಥಿ ಮಾನೆ - ಶಾಸಕ ಶ್ರೀನಿವಾಸ್​ ಮಾನೆ

ಯುವಕರನ್ನು ರಾಜಕೀಯಕ್ಕೆ ತರಲು ಹಾಗೂ ಅವರಲ್ಲಿ ಹುಮ್ಮಸ್ಸು ತುಂಬಲು ರಾಹುಲ್ ಗಾಂಧಿ ಅವರು ಹಾನಗಲ್​ಗೆ ಬರುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸ್​ ಮಾನೆ ಅವರು ತಿಳಿಸಿದ್ದಾರೆ.

ಶಾಸಕ ಶ್ರೀನಿವಾಸ ಮಾನೆ
ಶಾಸಕ ಶ್ರೀನಿವಾಸ ಮಾನೆ
author img

By

Published : Apr 23, 2023, 10:21 PM IST

ಶಾಸಕ ಶ್ರೀನಿವಾಸ ಮಾನೆ

ಹಾವೇರಿ : ಜಿಲ್ಲೆಯ ಹಾನಗಲ್‌ಗೆ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ನಗರದ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ರಾಹುಲ್ ಭಾಷಣ ಮಾಡಲಿದ್ದಾರೆ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಸೋಮವಾರ್ ರಾಹುಲ್ ಗಾಂಧಿ ನಡೆಸಲಿರುವ ಬೃಹತ್ ಸಮಾವೇಶದ ಪೂರ್ವಸಿದ್ಧತೆಯನ್ನ ವೀಕ್ಷಿಸಿ ಅವರು ಮಾತನಾಡುತ್ತಿದ್ದರು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ : ದೂರು ದಾಖಲು

ಸೋಮವಾರ ಸಂಜೆ ಐದು ಗಂಟೆಗೆ ರಾಹುಲ್ ಗಾಂಧಿ ಹೆಲಿಕಾಪ್ಟರ್ ಮೂಲಕ ಹಾನಗಲ್‌ಗೆ ಆಗಮಿಸಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶ್ರೀನಿವಾಸ ಮಾನೆ ತಿಳಿಸಿದರು. ಇದೇ ವೇಳೆ ಸಮಾವೇಶದಲ್ಲಿ ರಾಹುಲ್ ಗಾಂಧಿ ಜೊತೆ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಪ್ರಮುಖರು ಸಹ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಈ ಸಮಾವೇಶದಲ್ಲಿ ಪಾಲ್ಗೊಳ್ಳಬಹುದು ಎಂದು ಶ್ರೀನಿವಾಸ ಮಾನೆ ತಿಳಿಸಿದರು.

ಇದನ್ನೂ ಓದಿ: ಕೈ ಕಮಲ ಕಲಿಗಳಿಂದ ಅದ್ಧೂರಿ ಪ್ರಚಾರ, ಜಗಳೂರಿನಲ್ಲಿ ಕಾಂಗ್ರೆಸ್​ಗೆ ಬಂಡಾಯದ ಬಿಸಿ

ಯಾವ ಹಬ್ಬಕ್ಕೂ ಕಡಿಮೆ ಇಲ್ಲ : ಇದೊಂದು ಐತಿಹಾಸಿಕ ಸಮಾವೇಶವಾಗಲಿದೆ. ಯುವಕರನ್ನು ರಾಜಕೀಯದಲ್ಲಿ ತರಲು ಅವರಿಗೆ ಹುಮ್ಮಸ್ಸು ತುಂಬಲು ರಾಹುಲ್ ಹಾನಗಲ್‌ಗೆ ಆಗಮಿಸಲಿದ್ದಾರೆ. ರಾಹುಲ್ ಗಾಂಧಿ ಯುವಕರಿಗೆ ಒಂದು ದೊಡ್ಡ ಶಕ್ತಿ. ಭಾರತ್​ ಜೋಡೋ ಮುಗಿಸಿಕೊಂಡು ಭಾವೈಕ್ಯತೆ ಸಾರಿರುವ ಅವರು ನಮ್ಮ ಊರಿಗೆ ಬರುತ್ತಿರುವುದು ಯಾವ ಹಬ್ಬಕ್ಕೂ ಕಡಿಮೆ ಇಲ್ಲ ಎಂದು ಮಾನೆ ತಿಳಿಸಿದರು.

ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ನಾನೇ ಆ್ಯಕ್ಟರ್​​​, ಡೈರೆಕ್ಟರ್​, ನನ್ನದೇ ಸಂಕಲನ: ಬಸನಗೌಡ ಪಾಟೀಲ್ ಯತ್ನಾಳ್

ಕಾರ್ಯಕ್ರಮಕ್ಕೂ ಮುನ್ನ ಹಾನಗಲ್ ನಗರದಲ್ಲಿ ಆಯೋಜಿಸಲಾಗಿದ್ದ ರೋಡ್ ಶೋ ರದ್ದಾಗಿದೆ ಎಂದ ಅವರು, ರಾಹುಲ್ ಗಾಂಧಿ ಆಗಮಿಸುವ ಮೂಲಕ ಇಲ್ಲಿಯ ಕಾರ್ಯಕರ್ತರಿಗೆ ಶಕ್ತಿಯನ್ನು ತುಂಬಲಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್

ರಾಹುಲ್ ಹೋದಲ್ಲಿ ಕಾಂಗ್ರೆಸ್​ ಸೋತಿದೆ: ರಾಹುಲ್ ಆಗಮನದ ಕುರಿತಂತೆ ಮಾತನಾಡಿದ ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಅವರು, ರಾಹುಲ್ ಗಾಂಧಿ ಎಲ್ಲೆಲ್ಲಿ ಹೋಗುತ್ತಾರೋ ಅಲ್ಲಿ ಕಾಂಗ್ರೆಸ್ ಸೋತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿಕೆಯಿಂದ ನೋವಾಗಿದೆ : ಶಾಸಕ ಅರವಿಂದ ಬೆಲ್ಲದ

ಅವರು ಹೋದ ಕಡೆ ಕಾಂಗ್ರೆಸ್ ನಿರ್ನಾಮವಾಗಿದೆ: ಅವರು ಪ್ರಚಾರಕ್ಕೆ ಹೋದ ರಾಜ್ಯಗಳಲ್ಲಿ ಕಾಂಗ್ರೆಸ್ ಎಲ್ಲಿಯೂ ಸಹ ಅಧಿಕಾರಕ್ಕೆ ಬಂದಿಲ್ಲ. ಅವರು ಯಾವ ಯಾವ ಕ್ಷೇತ್ರಕ್ಕೆ ಹೋಗಿದ್ದಾರೋ ಅಲ್ಲಿ ಕಾಂಗ್ರೆಸ್​ ನೆಲಕಚ್ಚಿದ್ದು ಹಾನಗಲ್‌ನಲ್ಲಿ ಸಹ ಇದೇ ರೀತಿ ಆಗಲಿದೆ ಎಂದು ಸಜ್ಜನರ್ ಭವಿಷ್ಯ ನುಡಿದರು. ರಾಹುಲ್ ಗಾಂಧಿ ಹಾನಗಲ್ ಪ್ರಚಾರ ಮಾಡುತ್ತಿರುವುದು ನಮಗೆ ಹೆಚ್ಚು ಲಾಭ ಎಂದು ಸಜ್ಜನರ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ : ಬಿಜೆಪಿಯೊಳಗೆ ಲಿಂಗಾಯತ ನಾಯಕರನ್ನು ಮುಗಿಸುವ ವ್ಯವಸ್ಥಿತ ಸಂಚು: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.