ಹಾವೇರಿ: ಸಾರಿಗೆ ಸಿಬ್ಬಂದಿ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಪ್ರಯತ್ನಿಸುತ್ತಿದ್ದ ಡಿಪೋ ಮ್ಯಾನೇಜರ್ ಮೇಲೆ ಕೋಪಗೊಂಡ ಕಂಟ್ರೋಲರ್, ಏಕಾಏಕಿ ಕಪಾಳಕ್ಕೆ ಹೊಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಬಸ್ ನಿಲ್ದಾಣದಲ್ಲಿರುವ ಹೋಟೆಲ್ನಲ್ಲಿ ಘಟನೆ ನಡೆದಿದೆ. ಡಿಪೋ ಮ್ಯಾನೇಜರ್ ಹನುಮಂತಪ್ಪ ಜಾವೂರ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಜೆ.ಆರ್.ಹಾವನೂರ ಹಲ್ಲೆ ಮಾಡಿದ ಕಂಟ್ರೋಲರ್ ಎಂಬ ಆರೋಪ ಕೇಳಿಬಂದಿದೆ.
ಓದಿ: ಬಿಎಂಟಿಸಿ ಬಸ್ಗೆ ಅಡ್ಡಲಾಗಿ ಮಲಗಿದ ನೌಕರ: ವಿಡಿಯೋ ವೈರಲ್
ಹಿರಿಯ ಅಧಿಕಾರಿಗಳ ಸೂಚನೆಯಂತೆ ಡಿಪೋ ಮ್ಯಾನೇಜರ್ ಸಾರಿಗೆ ಸಿಬ್ಬಂದಿ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗಿ ಬಸ್ ಸಂಚಾರ ಆರಂಭಿಸುವಂತೆ ಪ್ರಯತ್ನಿಸುತ್ತಿದ್ದರು. ಇದಕ್ಕೆ ಗರಂ ಆದ ಕಂಟ್ರೋಲರ್, ಹೋಟೆಲ್ನಲ್ಲಿ ಕುಳಿತಿದ್ದ ಮ್ಯಾನೇಜರ್ ಬಳಿ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಹಲ್ಲೆಯ ದೃಶ್ಯ ಹೋಟೆಲ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಕಂಟ್ರೋಲರ್ ವಿರುದ್ಧ ಡಿಪೋ ಮ್ಯಾನೇಜರ್ ದೂರು ದಾಖಲಿಸಿದ್ದಾರೆ.