ರಾಣೆಬೆನ್ನೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಹೇಳಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆದು ಮಾತನಾಡುತ್ತಾರೆ ಎಂದು ತೋಟಗಾರಿಕೆ ಸಚಿವ ಆರ್.ಶಂಕರ್ ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಹಸ್ಯ ಸಭೆ ಬಗ್ಗೆ ಮಾಹಿತಿ ಇಲ್ಲ. ಅಲ್ಲದೇ ಪಕ್ಷದ ವಿರುದ್ಧ ಯಾವುದೇ ಹೇಳಿಕೆ ಕೊಡಬಾರದು ಎಂಬ ಆದೇಶ ಇದೆ. ರಮೇಶ್ ಜಾರಕಿಹೊಳಿಯವರು ಮಾಡೋದೆ ಬೇರೆ, ಆದರೆ ಮಾಧ್ಯಮದವರು ತೋರಿಸುವುದೇ ಬೇರೆ ಇದೆ. ಯಾರಾದರೂ ದೆಹಲಿಗೆ ತೆರಳಿದರೆ ಮುಖ್ಯಮಂತ್ರಿ ಬದಲಾವಣೆ ಅನ್ನುವುದು ಊಹಾಪೋಹಗಳು ಎಂದು ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಧಾನ ಪರಿಷತ್ತು ಅನುದಾನದ ಅಡಿ ಮೂರು ಆ್ಯಂಬುಲೆನ್ಸ್ ಲೋಕಾರ್ಪಣೆ ಮಾಡಿದರು. ರಾಣೆಬೆನ್ನೂರು ಅಭಿವೃದ್ಧಿಗೆ ಈಗಾಗಲೇ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ. ನಗರದ ಎನ್ ವಿ ಹೋಟೆಲ್ನಿಂದ ದೇವರಗುಡ್ಡ ರಸ್ತೆಯವರಗೆ ರಿಂಗ್ ರಸ್ತೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಆ್ಯಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಕೇಲಗಾರ, ಸಂತೋಷ ಪಾಟೀಲ, ಪ್ರಭಾವತಿ ತಿಳವಳ್ಳಿ, ಮಾಳಪ್ಪ ಪೂಜಾರ ಹಾಜರಿದ್ದರು.