ಹಾವೇರಿ: ಕನ್ನಡಿಗರನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಹ್ವಾನ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದಾರೆ.
ಕನ್ನಡ ನಾಡು ನುಡಿ ನೆಲ ವಿಚಾರದಲ್ಲಿ ಯಾರಿಂದಲೂ ಕನ್ನಡಿಗರನ್ನು ಅಲುಗಾಡಿಸಲು ಸಾಧ್ಯವಿಲ್ಲ. ರಾಜ್ಯ ಎಲ್ಲ ರೀತಿಯಲ್ಲಿ ಸಮೃದ್ಧವಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ಪ್ರಸ್ತುತ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲಾಗುತ್ತದೆ. ಎಲ್ಲರೂ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿವಂತೆ ಮನವಿ ಮಾಡಿದರು. ಉತ್ಕೃಷ್ಟವಾದ ಚಿಂತನೆ, ಭವ್ಯ ಕರುನಾಡು ನಿರ್ಮಾಣದ ಭವ್ಯಕನಸು. ಆಶೋತ್ತರಗಳನ್ನು ಈಡೇರಿಸುವ ಕನ್ನಡಿಗರ ಅಭಿಮಾನ ಸ್ವಾಭಿಮಾನ ಮೆರೆಯುವ ಸಮ್ಮೇಳನ ಇದಾಗಲಿದೆ ಎಂದು ಸಿಎಂ ತಿಳಿಸಿದರು.
ಗಡಿ ಇರಲಿ, ಮಧ್ಯಭಾಗವಿರಲಿ ಕನ್ನಡ ಅಭಿವೃದ್ಧಿಯಾಗಬೇಕು. ಕನ್ನಡದ ಕಂಪು ಎಲ್ಲೆಡೆ ಪಸರಿಸಬೇಕು. ಕನ್ನಡ ಸಮ್ಮೇಳನ ಮಾದರಿ ಸಮ್ಮೇಳನವಾಗಿರುತ್ತೆ. ಉತ್ಕೃಷ್ಟ ಚಿಂತನೆಗಳು ಇಲ್ಲಿ ನಡೆಯುತ್ತವೆ ಎಂದು ತಿಳಿಸಿದರು. ಕನ್ನಡಭಾಷೆ ದೇಶದ ಎಲ್ಲ ಭಾಷೆಗಳಿಗಿಂತ ಪ್ರಾಚೀನವಾಗಿದೆ. ಎಲ್ಲ ಕನ್ನಡಿಗರು ಸಾಹಿತ್ಯ ಸಮ್ಮೇಳನದ ಆರಂಭ ಮತ್ತು ಸಮಾರೋಪದಲ್ಲಿ ಪಾಲ್ಗೊಳ್ಳುವುದಲ್ಲ, ಎಲ್ಲ ಗೋಷ್ಠಿಗಳಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸುವಂತೆ ಸಿಎಂ ಕೋರಿದರು.
ಹಾವೇರಿಯಲ್ಲಿ ಸಮ್ಮೇಳನ ನಡೆಯುತ್ತಿರುವುದು ಸೌಭಾಗ್ಯ. ಸಾಹಿತಿಗಳು ಮಾರ್ಗದರ್ಶನ ಮಾಡುವುದು ಸರಿಯಾಗಿಲ್ಲದ ಕಾರಣ ಹಾವೇರಿ ಸಮ್ಮೇಳನ ಈ ಹಿಂದೆ ಮುಂದೂಡಲಾಗಿತ್ತು ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.
ಇದನ್ನೂ ಓದಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನ.. ಅತಿಥಿಗಳಿಗೆ ಕಲ್ಯಾಣ ಮಂಟಪ, ಸಮುದಾಯ ಭವನ ಉಚಿತವಾಗಿ ನೀಡಲು ಮುಂದಾದ ಹಾವೇರಿ ಜನ