Cars Under 8 Lakh: ಈಗಿನ ಕಾಲದಲ್ಲಿ ಬಹುತೇಕರು ತಮ್ಮ ಮನೆಯಲ್ಲಿ ಕಾರೊಂದು ಇರಬೇಕು ಎಂಬ ಆಸೆ ಹೊಂದಿದ್ದಾರೆ. ಕಾರು ಖರೀದಿಸುವುದು ಅಂದ್ರೆ ಅದೊಂದು ಸಾಮಾನ್ಯ ಕೆಲಸವಲ್ಲ. ಹೊಸ ಕಾರು ಖರೀದಿಸುವ ಮೊದಲು ನಾವು ಅದರ ವೈಶಿಷ್ಟ್ಯಗಳು, ಕಾರಿನ ಮೈಲೇಜ್, ಔಟ್ ಮತ್ತು ಇನ್ ಲುಕ್ ಸೇರಿದಂತೆ ಇನ್ನಿತರ ಕುರಿತು ತಿಳಿದುಕೊಳ್ಳಬೇಕು. ಅಷ್ಟೇ ಅಲ್ಲ ಇವೆಲ್ಲವನ್ನೂ ಒಳಗೊಂಡಿರುವ ಕಾರು ಕೇವಲ ಕೈಗೆಟುಕುವ ದರದಲ್ಲಿ ನಮಗೆ ಲಭ್ಯವಾಗಬೇಕು ಎಂಬುದು ನಮ್ಮ ಆಲೋಚನೆಯಾಗಿರುತ್ತದೆ. ಅದಕ್ಕಾಗಿ ನಾವು ಸೆಫ್ಟಿ, ಫೀಚರ್ ಮತ್ತು ಮೈಲೇಜ್ ನೀಡುವಂತಹ ಕೆಲ ವಾಹನಗಳ ಲಿಸ್ಟ್ ಕೊಟ್ಟಿದ್ದೇವೆ. ಈ ಕಾರುಗಳು ಕೇವಲ 8 ಲಕ್ಷ ರೂಪಾಯಿಗಳೊಳಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ಈ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಟಾಟಾ ನೆಕ್ಸಾನ್: ಟಾಟಾ ನೆಕ್ಸಾನ್ 5500 ಸಿಸಿ ಎಂಜಿನ್ ಹೊಂದಿದೆ. ಈ ಎಂಜಿನ್ ಜೊತೆ ಈ ಕಾರು 88.2 ಪಿಎಸ್ ಪವರ್ ನೀಡುತ್ತದೆ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು 382 ಲೀಟರ್ ಬೂಟ್ ಸ್ಪೇಸ್ನೊಂದಿಗೆ ಬರುತ್ತದೆ. ಈ ಟಾಟಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಲಭ್ಯವಿದೆ. ಈ ವಾಹನವು 17 ರಿಂದ 24 kmpl ಮೈಲೇಜ್ ನೀಡುತ್ತದೆ.
ಈ ಟಾಟಾ ಕಾರಿಗೆ ಸುರಕ್ಷತೆಗಾಗಿ 6 ಏರ್ಬ್ಯಾಗ್ಗಳನ್ನು ನೀಡಲಾಗಿದೆ. ಗ್ಲೋಬಲ್ ಎನ್ಸಿಎಪಿಯ ಕ್ರ್ಯಾಶ್ ಟೆಸ್ಟ್ನಲ್ಲಿ ಈ ಕಾರು 5 - ಸ್ಟಾರ್ ಸುರಕ್ಷತಾ ರೇಟಿಂಗ್ ಸಹ ಪಡೆದುಕೊಂಡಿದೆ. ಈ ಕಾರು ಎಲೆಕ್ಟ್ರಿಕ್ ಸನ್ರೂಫ್ ಸಹ ಹೊಂದಿದೆ. ಟಾಟಾ ನೆಕ್ಸಾನ್ನ ಎಕ್ಸ್ ಶೋ ರೂಂ ಬೆಲೆ ರೂ 7.99 ಲಕ್ಷದಿಂದ ಪ್ರಾರಂಭವಾಗುತ್ತದೆ.
ಮಹೀಂದ್ರ XUV 3XO: ಮಹೀಂದ್ರಾ XUV 3XO ಸಹ ಬಜೆಟ್ ಸ್ನೇಹಿ ಕಾರು. ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಲಭ್ಯವಿದೆ. ಈ ಕಾರಿನಲ್ಲಿ ಅಳವಡಿಸಲಾಗಿರುವ ಡೀಸೆಲ್ ಎಂಜಿನ್ 86 kW ಪವರ್ ಮತ್ತು 300 Nm ಟಾರ್ಕ್ ಉತ್ಪಾದಿಸುತ್ತದೆ. ಆದರೆ, ಪೆಟ್ರೋಲ್ ಎಂಜಿನ್ನಿಂದ ಈ ಕಾರು 96 kW ಪವರ್ ನೀಡುತ್ತದೆ ಮತ್ತು 230 Nm ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 18 ರಿಂದ 21 kmpl ಮೈಲೇಜ್ವರೆಗೆ ನೀಡುತ್ತದೆ.
ಮಹೀಂದ್ರಾದ ಈ ಕಾರು 2024 ರಲ್ಲಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಕಾರು ಇತ್ತೀಚೆಗೆ ಭಾರತ್ ಎನ್ಸಿಎಪಿಯಿಂದ ಕ್ರ್ಯಾಶ್ ಟೆಸ್ಟ್ನಲ್ಲಿ 5 - ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಈ ವಾಹನದ ಎಲ್ಲ ರೂಪಾಂತರಗಳಲ್ಲಿ 6 ಏರ್ಬ್ಯಾಗ್ಗಳನ್ನು ಒದಗಿಸಲಾಗಿದೆ. ಮಹೀಂದ್ರಾ ವಾಹನದಲ್ಲಿ ಸ್ಕೈರೂಫ್ ವೈಶಿಷ್ಟ್ಯವನ್ನು ಸಹ ಸೇರಿಸಲಾಗಿದೆ. ಮಹೀಂದ್ರಾ XUV 3XO ನ ಎಕ್ಸ್ ಶೋ ರೂಂ ಬೆಲೆ ರೂ 7.79 ಲಕ್ಷದಿಂದ ಪ್ರಾರಂಭವಾಗುತ್ತದೆ.
ಮಾರುತಿ ಡಿಸೈರ್: ಮಾರುತಿ ಡಿಸೈರ್ನ ಅಪ್ಡೇಟ್ಡ್ ಮಾದರಿಯನ್ನು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರು ಮಾರುಕಟ್ಟೆಯಲ್ಲಿ ಏಳು ಬಣ್ಣಗಳಲ್ಲಿ ಲಭ್ಯವಿದೆ. ಸುರಕ್ಷತೆಗಾಗಿ ಈ ಕಾರಿಗೆ 6 ಏರ್ಬ್ಯಾಗ್ಗಳನ್ನು ನೀಡಲಾಗಿದೆ. ಹೊಸ ಡಿಸೈರ್ ಕ್ರ್ಯಾಶ್ ಟೆಸ್ಟ್ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಮಾರುತಿಯಿಂದ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರುತಿಯ ಈ ಕಾರಿನಲ್ಲಿ ಸನ್ರೂಫ್ ಕೂಡ ನೀಡಲಾಗಿದೆ.
ಮಾರುತಿಯ ಕಾರು 1.2-ಲೀಟರ್ Z-ಸರಣಿ ಎಂಜಿನ್ ಹೊಂದಿದೆ. ಇದರೊಂದಿಗೆ ಈ ಕಾರು ಸಿಎನ್ಜಿಯಲ್ಲಿಯೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಾರುತಿ ಡಿಜೈರ್ ಪೆಟ್ರೋಲ್ ರೂಪಾಂತರದಲ್ಲಿ 24.79 kmpl ಮೈಲೇಜ್ ನೀಡುತ್ತದೆ ಮತ್ತು ಅದರ CNG ವಾಹನವು 33.73 km/kg ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ. ಹೊಸ ಡಿಸೈರ್ನ ಎಕ್ಸ್ ಶೋ ರೂಂ ಬೆಲೆ ರೂ.6.79 ಲಕ್ಷದಿಂದ ಆರಂಭವಾಗುತ್ತದೆ.
ಓದಿ: ಈ ತಿಂಗಳಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಈ ಪವರ್ಫುಲ್ SUV ಕಾರುಗಳು!