ಹಾವೇರಿ: ಪ್ರಧಾನಿ ಮೋದಿ ಮತ್ತು ಗೃಹ ಸಚುವ ಅಮಿತ್ ಶಾ ಜೋಡಿ ದೇಶದ ಸ್ಥಿತಿಯನ್ನ ಅದೋಗತಿಗೆ ತಂದಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಸಿಎಂ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಪಾರ್ಲಿಮೆಂಟ್ನಲ್ಲಿ ಇದರ ಬಗ್ಗೆ ಚರ್ಚೆ ಆಗುತ್ತಿಲ್ಲ. ಆರು ವರ್ಷಗಳಿಂದ ಮೂರು ತಲಾಕ್, 371, ಸಿಎಎ, ಎನ್ಆರ್ ಸಿ ಇಂಥಹದ್ದನ್ನೇ ಮಾಡಿಕೊಂಡು ಬರಲಾಗಿದೆ ಎಂದು ಕಿಡಿಕಾರಿದರು..
1947 ರಿಂದಲೂ ನಾಗರಿಕತ್ವ ಕೊಡುತ್ತಲೇ ಬಂದಿದ್ದೇವೆ. ಸಂವಿಧಾನ ತಿದ್ದುಪಡಿ ಮಾಡೋದರ ಅಗತ್ಯವಿತ್ತೆ.? ಟೂರಿಸಂ, ವಿದ್ಯುತ್ ಶಕ್ತಿ ಉತ್ಪಾದನೆ ಎಲ್ಲವೂ ಹಾಳಾಗಿದೆ. ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಅಡ್ವಾಣಿಯವರು ಮೌನ ಮುರಿಬೇಕಿದೆ. ಅಡ್ವಾಣಿಯವರೇ ನೀವು ಬಿಜೆಪಿ ಕಟ್ಟಿದ್ದೀರಿ. ನೀವು ಮೋದಿ, ಶಾಗೆ ಬುದ್ಧಿ ಹೇಳಿ ಎಂದು ಮನವಿ ಮಾಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದಂತೆ ಎಲ್ಲರೂ ಈ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ನೋಟ್ ಬಂದ್ ಮಾಡಿದಾಗ ಜನರು ಬ್ಯಾಂಕ್ ಮುಂದೆ ನಿಂತಂತೆ ತಲಾಟಿ ಆಫೀಸ್ ಮುಂದೆ ನಿಲ್ಲೋ ಪರಿಸ್ಥಿತಿ ಬರುತ್ತೆ. ಬಿಜೆಪಿ ರಾಜ್ಯಗಳಿದ್ದಲ್ಲಿ ಗಲಾಟೆಗಳು ಆಗ್ತಿವೆ. ರಾಜ್ಯದ ಜನರು ಶಾಂತಿ ಪ್ರಿಯರು. ಇದು ಬಸವಣ್ಣನ ನಾಡು. ಆದ್ರೂ ಮಂಗಳೂರಲ್ಲಿ ಗಲಾಟೆ ಆಯ್ತು. ಸಿಎಂ ಯಡಿಯೂರಪ್ಪ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಯಡಿಯೂರಪ್ಪನವರೇ ನೀವು ವೀರಶೈವರು, ವೀರತ್ವ ತೋರಿಸಿ ಎಂದು ಕಾಲೆಳೆದ ಇಬ್ರಾಹಿಂ ಅವರು ಸಿಎಂ ಬಿಎಸ್ವೈ ಡ್ರೈವಿಂಗ್ ಸೀಟ್ಲ್ಲಿ ಕುಳಿತಿದ್ದಾರೆ. ಸ್ಟೇರಿಂಗ್, ಗೇರ್ ಬಾಕ್ಸ್ ಬಿ ಎಲ್ ಸಂತೋಷ್ ಕೈಯಲ್ಲಿ ಇವೆ ಎಂದು ವ್ಯಂಗ್ಯವಾಡಿದರು.