ETV Bharat / state

ಉದ್ಯೋಗ ಸೃಷ್ಟಿಸುವ ಕೈಗಾರಿಕೆ ತರಲು ಪ್ರಯತ್ನಿಸುತ್ತೇವೆ: ಸಿಎಂ ಬೊಮ್ಮಾಯಿ - ವರದಿ-ಬೇಡ್ತಾ ನದಿ ಜೋಡಣೆ

ರಾಜ್ಯದಲ್ಲಿ ಜನಪರ, ಜನಸ್ನೇಹಿ ವ್ಯವಸ್ಥೆ ತಂದು ಜನರಿಗೆ ಸುಸೂತ್ರವಾಗಿ ಸೇವೆಗಳು ಸಿಗುವಂತೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

cm-basavaraja-bommai
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Sep 1, 2021, 5:48 PM IST

ಹಾವೇರಿ: ಜಿಲ್ಲೆಗೆ ಇಂಡಸ್ಟ್ರಿಯಲ್​ ಟೌನ್​ಶಿಪ್​ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳನ್ನು ತರಲು ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಜನರ ಅಲೆದಾಟ ತಪ್ಪಿಸಲು ತಂತ್ರಜ್ಞಾನ ಬಳಕೆ ಮಾಡಿಕೊಂಡು ಸೌಲಭ್ಯಗಳು ಸಿಗುವ ವ್ಯವಸ್ಥೆ ತರಬೇಕಿದೆ. ಗ್ರಾಮ ಮಟ್ಟದಲ್ಲೇ ಜನರಿಗೆ ಕೆಲವು ಸೇವೆಗಳನ್ನು ಕೊಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

ಹಾವೇರಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಈ ನಿಟ್ಟಿನಲ್ಲಿ ಅಧಿಕಾರಿಗಳು ಕೊನೆಯ ಹಂತಕ್ಕೆ ಹೋಗಿ ಪರಿಶೀಲನೆ ಮಾಡಲು ತಿಳಿಸಿದ್ದೇನೆ. ಆಡಳಿತದಲ್ಲಿ ಬಹಳಷ್ಟು ಬದಲಾವಣೆ ತರುವ ಯೋಜನೆಗಳು ನಮ್ಮ ಮುಂದಿವೆ ಎಂದರು.

ಸರ್ಕಾರಿ ಯೋಜನೆಗಳು, ಆಶ್ರಯ ಮನೆಗಳು ಸೇರಿದಂತೆ ಸಾಮಾನ್ಯ ಜನರಿಗೂ ಮರಳು ಸಿಗುವಂತೆ ಯೋಜನೆ ರೂಪಿಸಲು ತಿಳಿಸಿದ್ದೇನೆ. ಸೂಕ್ತವಾದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೂ ಆಗುತ್ತದೆ. ಯಾವುದೂ ನೆನೆಗುದಿಗೆ ಬಿದ್ದಿಲ್ಲಲ ಎಂದು. ಇದೇ ವೇಳೆ, ವರದಾ-ಬೇಡ್ತಾ ನದಿ ಜೋಡಣೆ ಬಗ್ಗೆಯೂ ಈಗಾಗಲೇ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ಬಸ್ ಸೌಕರ್ಯ ಕಲ್ಪಿಸುವಂತೆ ಸೂಚನೆ: ಹೊರಗಡೆಯಿಂದ ಬರುವ ವಿದ್ಯಾರ್ಥಿಗಳಿಗೆ ಏಳು ದಿನಗಳ ಕ್ವಾರಂಟೈನ್ ಮಾಡಿ ಚೆಕ್ ಮಾಡ್ತಿದ್ದೇವೆ. ಕೊಪ್ಪಳದಲ್ಲಿ ಶಾಲಾ ಮಕ್ಕಳಿಗೆ ಬಸ್ ಇಲ್ಲದ್ದಕ್ಕೆ ಜೆಸಿಬಿಯಲ್ಲಿ ಕೂರಿಸಿಕೊಂಡು ಹೋದ ವಿಚಾರ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಎಲ್ಲ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಚಾಮರಾಜನಗರ ಡಿಸಿ ಆದೇಶದ ವಿರುದ್ಧ ಈಶ್ವರಪ್ಪ ಕಿಡಿ: ಸಿದ್ದರಾಮಯ್ಯ, ಹೆಚ್​ಡಿಕೆಗೆ ಟಾಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.