ಹಾವೇರಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ತವರು ಕ್ಷೇತ್ರಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದು, ಶಿಗ್ಗಾವಿ ಮತ್ತು ಸವಣೂರು ತಾಲೂಕುಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಶಿಗ್ಗಾವಿ ತಾಲೂಕಿನ ತಡಸ್ ಗ್ರಾಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಗ್ರಾಮದಲ್ಲಿ ರಸ್ತೆ ಸುಧಾರಣಾ ಕಾಮಗಾರಿ ಮತ್ತು ನೂತನ ಪ್ರವಾಸಿ ಮಂದಿರದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 11.30ಕ್ಕೆ ಶಿಗ್ಗಾವಿ ತಾಲೂಕಿನ ರಾಜೀವ ಗ್ರಾಮದಲ್ಲಿ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. 12 ಗಂಟೆಗೆ ಬಾಡ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಕೇಂದ್ರದ ಉದ್ಘಾಟನೆ ನೆರವೇರಿಸಲಿದ್ದಾರೆ.
ಬಳಿಕ 1 ಗಂಟೆಗೆ ಬಂಕಾಪುರ ಪಟ್ಟಣದಲ್ಲಿ ಕಾರವಾರ - ಇಳಕಲ್ ರಸ್ತೆ ಸುಧಾರಣೆಗೆ ಶಂಕುಸ್ಥಾಪನೆ ಮತ್ತು ಶಾದಿ ಮಹಲ್ ನೂತನ ಕಟ್ಟಡದ ಉದ್ಘಾಟನೆ ನಡೆಸಲಿದ್ದಾರೆ. 3 ಗಂಟೆಗೆ ಸವಣೂರಿನ ದೊಡ್ಡಹುಣಸಿ ಕಲ್ಮಠ ಕೆಸಿಸಿಸಿ ಬ್ಯಾಂಕ್ ನೂತನ ಕಟ್ಟಡ ಹಾಗೂ ಮಂಗಳ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ನಾಲ್ಕು ಗಂಟೆಗೆ ಶಿಗ್ಗಾವಿಯಲ್ಲಿ ಪುರಸಭೆಯ ನೂತನ ಕಟ್ಟಡ ಉದ್ಘಾಟನೆ, ಡಿವಿವೈಎಸ್ಪಿ ಕಟ್ಟಡದ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗೆಳಿಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ನಂತರ ಸಿಎಂ ಹುಬ್ಬಳ್ಳಿಗೆ ತೆರಳಲಿದ್ದು, ದಿನವಿಡಿ ಕಾರ್ಯಕ್ರಮಕ್ಕೆ ವಿವಿಧ ಸಚಿವರು ಮತ್ತು ಶಾಸಕರು ಸಾಥ್ ನೀಡಲಿದ್ದಾರೆ.
ಇದನ್ನೂ ಓದಿ: ಜಗತ್ತಿನ ಭೂಪಟದಲ್ಲಿ ದೇಶವೊಂದು ಅಸ್ತಿತ್ವದಲ್ಲಿ ಇರುವುದಿಲ್ಲವೆಂದು ಮೊದಲೇ ಭವಿಷ್ಯ ನುಡಿದಿದ್ದೆ: ಕೋಡಿಮಠ ಶ್ರೀ