ETV Bharat / state

ನವೀನ್​ ಮೃತದೇಹ ತಾಯ್ನಾಡಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ, ಇದು ಮೋದಿ ವರ್ಚಸ್ಸು: ಸಿಎಂ ಬೊಮ್ಮಾಯಿ - ನವೀನ್​ ಮೃತದೇಹ ತರುವಲ್ಲಿ ಮೋದಿ ಪ್ರಯತ್ನದ ಬಗ್ಗೆ ಸಿಎಂ ಮಾತು

ಸಿಎಂ ಬೊಮ್ಮಾಯಿ ಅವರು ನವೀನ್​ ಪಾರ್ಥಿವ ಶರೀರ​ಕ್ಕೆ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ, ನವೀನ್ ಮೃತದೇಹವನ್ನು ರಾಜ್ಯಕ್ಕೆ ತರುವಲ್ಲಿ ಸಹಾಯ ಮಾಡಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.

CM Basavaraj Bommai thanks to PM
ಮೋದಿಗೆ ಧನ್ಯವಾದ ಅರ್ಪಿಸಿದ ಸಿಎಂ ಬೊಮ್ಮಾಯಿ
author img

By

Published : Mar 21, 2022, 2:26 PM IST

ಹಾವೇರಿ: ಉಕ್ರೇನ್ ​- ರಷ್ಯಾ ಯುದ್ಧದಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ​ವನ್ನು ತಾಯ್ನಾಡಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹೊಂದಿರುವ ವರ್ಚಸ್ಸು ಮತ್ತು ತಾಕತ್ತು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮೋದಿಗೆ ಧನ್ಯವಾದ ಅರ್ಪಿಸಿದ ಸಿಎಂ ಬೊಮ್ಮಾಯಿ

ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್ ಪಾರ್ಥಿವ ಶರೀರ​ದ ಅಂತಿಮ ದರ್ಶನ ಪಡೆದು ಬಳಿಕ ಮಾತನಾಡಿದ ಅವರು, ರಷ್ಯಾ- ಉಕ್ರೇನ್ ನಡುವಿನ ಭೀಕರ ಯುದ್ಧದ ನಡುವೆಯೂ ನವೀನ್​​​ ಪಾರ್ಥಿವ ಶರೀರವನ್ನು ಸುರಕ್ಷಿತವಾಗಿ ತಲುಪಿಸುವಲ್ಲಿ ಮೋದಿಯವರು ತೀವ್ರ ಪ್ರಯತ್ನ ಮಾಡಿದ್ದಾರೆ. ಈ ಒಂದು ಘಟನೆಯಿಂದ ವಿಶ್ವದಲ್ಲಿ ಮೋದಿ ಅವರ ಶಕ್ತಿ ಏನು ಎಂಬುದನ್ನು ತಿಳಿಸುತ್ತದೆ. ಪ್ರಧಾನಿಯವರು ನವೀನ್​​​ 'ಆಪ್​ ಕಾ ಬೇಟಾ ನಹೀ, ದೇಶ ಕಾ ಬೇಟಾ' ಎಂದು ಯುವಕನ ತಂದೆ ಶೇಖರಪ್ಪ ಅವರಿಗೆ ಹೇಳಿದ್ದರು. ಅದರಂತೆ ನಡೆದುಕೊಂಡಿದ್ದಾರೆ ಎಂದರು.

ಉಕ್ರೇನ್ ರಾಯಭಾರಿ ಕಚೇರಿ, ಭಾರತೀಯ ರಾಯಭಾರಿ ಕಚೇರಿ, ಪೋಲ್ಯಾಂಡ್​​ನ ಭಾರತೀಯ ರಾಯಭಾರಿ ಕಚೇರಿಗಳು ಸೇರಿದಂತೆ ಅಕ್ಕಪಕ್ಕದ ಇಂಡಿಯನ್ ರಾಯಭಾರಿ ಕಚೇರಿಗಳು ಬಹಳ ಮುತುವರ್ಜಿ ವಹಿಸಿ ಇಷ್ಟು ದಿನಗಳ ಕಾಲ ನವೀನ್​​ ದೇಹವನ್ನು ಸಂರಕ್ಷಣೆ ಮಾಡಿದ್ದಾರೆ. ಪ್ರಮುಖವಾಗಿ ಕೇಂದ್ರ ಸಚಿವ ಜೈಶಂಕರ್ ಅವರಿಂದ ಈ ಕೆಲಸ ಸಾಧ್ಯವಾಗಿದೆ. ಯುದ್ಧ ಭೂಮಿಯಿಂದ ಸೈನಿಕರನ್ನು ತರುವುದೇ ಕಷ್ಟವಾಗಿರುತ್ತದೆ. ಅಂತಹದರಲ್ಲಿ ನಾಗರಿಕರ ಮೃತದೇಹವನ್ನು ತರುವುದು ಬಹಳ ಕಷ್ಟ.

ಇನ್ನು ನವೀನ್​​ ತಾಯಿಯವರು ನಮ್ಮ ಬಳಿ ಕೇಳಿಕೊಂಡಿದ್ದರು. ಮಗ ಜೀವಂತವಾಗಿ ಬರಲಿಲ್ಲ. ಆದರೆ, ಆತನ ಮೃತದೇಹವನ್ನು ತನ್ನಿ ಎಂದಿದ್ದರು. ನಾವು ಮಾತು ಕೊಟ್ಟಂತೆ ಇಂದು ಆತನ ಮೃತದೇಹವನ್ನು ತವರಿಗೆ ಬಂದಿದೆ ಎಂದರು. ಉಕ್ರೇಕ್​ನಿಂದ 19,000 ವಿದ್ಯಾರ್ಥಿಗಳನ್ನ ದೇಶದಲ್ಲಿ ಕರೆತರಲಾಗಿದೆ. ಅದರಲ್ಲಿ 572 ನಮ್ಮ ರಾಜ್ಯದ ವಿದ್ಯಾರ್ಥಿಗಳಾಗಿದ್ದಾರೆ. 61 ವಿದ್ಯಾರ್ಥಿಗಳು ಆಪರೇಷನ್ ಗಂಗಾದಡಿ ಮೊದಲೇ ದೇಶಕ್ಕೆ ಬಂದಿದ್ದಾರೆ ಎಂದು ಸಿಎಂ ಹೇಳಿದರು.

ಯಾವ ದೇಶವೂ ಇಷ್ಟೊಂದು ಶ್ರಮ ಪಟ್ಟಿಲ್ಲ. ಮೋದಿಯವರ ಪ್ರಯತ್ನದಿಂದ ದೇಶ, ರಾಜ್ಯದ ಜನರನ್ನು ಕರೆತರಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಉಕ್ರೇನ್​ನಿಂದ ಜನರನ್ನು ರಕ್ಷಣೆ ಮಾಡಲಾಗಿದೆ ಎಂದರು. ನವೀನ್​ಗೆ ಶೆಲ್ ನೇರವಾಗಿ ಬಡದಿಲ್ಲ, ಪಕ್ಕದ ಕಟ್ಟಡಕ್ಕೆ ಬಡಿದು ಬಳಿಕ ವಿದ್ಯಾರ್ಥಿ ತಲೆಗೆ ತಗುಲಿ ಸಾವನ್ನಪ್ಪಿದ್ದಾರೆ. ಮಾರ್ಚ್​​.01 ರಿಂದ ಸರ್ಕಾರ ನವೀನ್ ಮೃತದೇಹ ತರಲು ಪ್ರಯತ್ನ ಮಾಡುತ್ತಿತ್ತು. ನವೀನ್​​ ದೇಹ ಡಿಕಂಪೋಸ್​​​ ಆಗಲಿ, ಗಾಯವಾಗಿಲ್ಲ ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

ಇದನ್ನೂ ಓದಿ: 'ಡಾಕ್ಟರ್​ ಆಗಿ ಬರ್ತಿನಿ ಅಂದಿದ್ಯಲ್ಲೊ, ನಿನಗೆ ಸೆಲ್ಯೂಟ್​ ಕಣೋ': ನವೀನ್​ ತಾಯಿಯ ಅಳಲು

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.