ಹಾವೇರಿ: ಹಾನಗಲ್ ಉಪಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಉಪಚುನಾವಣೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹಾನಗಲ್ ಕ್ಷೇತ್ರದಲ್ಲಿ ಇಂದಿನಿಂದ ಇನ್ನೂ ಎರಡು ದಿನಗಳ ಕಾಲ ಇಲ್ಲೇ ಇದ್ದು ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.
ಸಿಂದಗಿಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಅಧಿಕ ಮತಗಳಿಂದ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಹಾನಗಲ್ ಹಿಂದೆ ಎಂದೂ ಕಾಣದಂತೆ ಸಾಮಾಜಿಕ ಸಮೀಕರಣ ಆಗಿದೆ. ಇಲ್ಲೂ ಕೂಡ ನಮ್ಮ ಅಭ್ಯರ್ಥಿ ಅತ್ಯಂತ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂದರು.
ವಿಧಾನಸೌಧ ಬೀಗ ಹಾಕಿಲ್ಲ. ಉಪ ಚುನಾವಣೆ ಸಂಬಂಧ ಎಲ್ಲ ಸಚಿವರು, ಎರಡು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದರೆ ಇವರಿಗೇಕೆ ಭಯ. ಜಾತಿ ಧರ್ಮದ ಚರ್ಚೆ ಪ್ರಾರಂಭ ಮಾಡಿದ್ದು ಯಾರು. ನಾವು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ. ಉದಾಸಿ ಅವರ ಸಾವಿನಿಂದ ಚುನಾವಣೆ ಬಂದಿದೆ. ಕ್ಷೇತ್ರದಲ್ಲಿ ಉದಾಸಿಯವರು 38 ವರ್ಷ ಕೆಲಸ ಮಾಡಿದ್ದಾರೆ. ಈ ಗಳಿಗೆಯಲ್ಲಿ ನಾವು ಉದಾಸಿ ಅವರನ್ನ ನೆನಪು ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಜಾತಿ ವಿಚಾರ ಚರ್ಚೆ ಮಾಡಿದರು ಯಾರು..? ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿ ಅಂತಾ ಹೇಳಿದ್ದೇನೆ. ದಾಖಲೆ ತೋರಿಸಿ ಹೇಳಿದ್ದೇನೆ. ಸಾಮಾಜಿಕ ಸಮೀಕರಣ ಆಗಿದ್ದು, ಜನರಿಗೆ ಬಿಜೆಪಿ ಒಲವು ಇದೆ. ಹೆಣ್ಣು ಮಕ್ಕಳ ಭದ್ರತೆ. ಅವರ ಕಾಲದಲ್ಲಿ ಎಷ್ಟು ಭದ್ರತೆ ಕೊಟ್ಟಿದ್ದರು, ನಾವು ಎಷ್ಟು ಕೊಟ್ಟಿದ್ದೇವೆ ಅವರೇ ಹೇಳಲಿ.
ವಾಕ್ಸಿನೇಷನ್ ಹೆಚ್ಚು ನೀಡಿದ್ದರಿಂದ ಸಾವಿನ ಪ್ರಮಾಣವನ್ನ ತಗ್ಗಿಸುವ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಜನರು ಖುಷಿಯಿಂದ ವಾಕ್ಸಿನೇಷನ್ ಸಂಭ್ರಮ ಮಾಡಿದ್ದಾರೆ. ಸರಿಯಾದ ಸಮಯದಲ್ಲಿ ಸರಿಯಾದ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಯಡಿಯೂರಪ್ಪ ಕರ್ಮಕಾಂಡ ಏನೋ ಇಲ್ಲ. ಇನ್ನೂ ನನ್ನ ಪಾಲು ಏಲ್ಲಿ ಬರಬೇಕು, ಜನರಿಗೆ ಎಲ್ಲಾ ಗೊತ್ತಿದೆ, ಅವರು ಮತ ಹಾಕುತ್ತಾರೆ. ನನ್ನ ನಗ್ಗೆ ಮಾತನಾಡಿದರೆ ಅವರಿಗೆ ಏನೋ ಲಾಭ ಆಗುತ್ತೇ ಗೊತ್ತಿಲ್ಲ. ನಮ್ಮ ಶಕ್ತಿ ಮೇಲೆ ನಾವು ಚುನಾವಣೆ ಮಾಡುತ್ತಿದ್ದೇವೆ. ಅವರು ಬೇರೆಯವರ ಶಕ್ತಿ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಇನ್ನೂ ಹಾನಗಲ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜೇಯೇಂದ್ರ. ನಾನು ಇಲ್ಲಿನ ಯುವಕರ ಉತ್ಸಾಹ ನೋಡಿ ಖುಷಿಯಾಗಿದ್ದೇನೆ. ಯುವಕರ ಉತ್ಸಾಹ ನೋಡಿದ್ರೆ ಮೇಲ್ನೋಟಕ್ಕೆ ಬಿಜೆಪಿಗೆ ಹೆಚ್ಚಿನ ಒಲವು ಕಾಣಿಸುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ರಾಜ್ಯಾಧ್ಯಕ್ಷರ ಸೂಚನೆಯಂತೆ ಸಿಂದಗಿಯಲ್ಲಿ ಎರಡು ದಿನ ಪ್ರಚಾರ ಮುಗಿಸಿದ್ದೇನೆ, ಅಲ್ಲಿ ದೊಡ್ಡ ರೆಸ್ಪಾನ್ಸ್ ಸಿಕ್ಕಿದೆ. ಹಾನಗಲ್ ನಲ್ಲಿ ಎರಡು ದಿನ ಇದ್ದು, ಇಲ್ಲಿಯೂ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.