ETV Bharat / state

ಅನಗತ್ಯ ಓಡಾಟ: ಬಸ್ಕಿ ಹೊಡೆದು ಸುಸ್ತಾದವರಿಗೆ ತಿನ್ನಲು ಬಾಳೆಹಣ್ಣು ಕೊಟ್ಟ ಚೆಕ್​ಪೋಸ್ಟ್​ ಅಧಿಕಾರಿ

ಸವಣೂರು ತಾಲೂಕಿನ ಯಲವಿಗಿ ಚೆಕ್ ಪೋಸ್ಟ್ ಅಧಿಕಾರಿ ಸದಾನಂದ ಅಮರಾಪುರ ಅವರು ಸುಖಾಸುಮ್ಮನೆ ಹೊರಬಂದ ಬೈಕ್​ಸವಾರರಿಗೆ ಬಸ್ಕಿ ಹೊಡೆಸಿ ಸುಸ್ತಾದ ಯುವಕರಿಗೆ ತಿನ್ನಲು ಬಾಳೆಹಣ್ಣು ಕೊಟ್ಟಿದ್ದಾರೆ.

ತಲಾ 50 ಬಸ್ಕಿ ಹೊಡೆಸಿ ಕೊರೊನಾ ಜಾಗೃತಿ
ತಲಾ 50 ಬಸ್ಕಿ ಹೊಡೆಸಿ ಕೊರೊನಾ ಜಾಗೃತಿ
author img

By

Published : Apr 3, 2020, 10:17 AM IST

ಹಾವೇರಿ: ಭಾರತ ಲಾಕ್ ಡೌನ್ ಇದ್ರೂ ಅನಗತ್ಯವಾಗಿ ಬೈಕ್​ನಲ್ಲಿ ಓಡಾಡುತ್ತಿದ್ದವರಿಗೆ ಚೆಕ್ ಪೋಸ್ಟ್ ಅಧಿಕಾರಿಯೊಬ್ಬರು ಬಸ್ಕಿ ಹೊಡೆಸಿ ತಕ್ಕ ಪಾಠ ಕಲಿಸಿದ್ದಾರೆ.

ಸವಣೂರು ತಾಲೂಕಿನ ಯಲವಿಗಿ ಚೆಕ್ ಪೋಸ್ಟ್ ಅಧಿಕಾರಿ ಸದಾನಂದ ಅಮರಾಪುರ ಅವರು ಸುಖಾಸುಮ್ಮನೆ ಹೊರಬಂದ ಬೈಕ್​ಸವಾರರಿಗೆ ಬಸ್ಕಿ ಹೊಡೆಸಿ ಕೊರೊನಾ ಜಾಗೃತಿ ಮೂಡಿಸಿದ್ದಾರೆ.

ಪ್ರತಿಯೊಬ್ಬರಿಂದ ತಲಾ ಐವತ್ತು ಬಸ್ಕಿ ಹೊಡೆಸಿದ್ದಾರೆ. ಬಸ್ಕಿ ಹೊಡೆದು ಸುಸ್ತಾದ ಮೇಲೆ ತಮ್ಮದೇ ತೋಟದಲ್ಲಿ ತಂದ ಬಾಳೆಹಣ್ಣುಗಳನ್ನ ತಿನ್ನಲು ಕೊಟ್ಟು ಅನಗತ್ಯವಾಗಿ ಓಡಾಡಬೇಡಿ, ಮನೆಯಲ್ಲೇ ಇರಿ. ಎಲ್ಲರೂ ಸೇರಿ ಕೊರೊನಾ ಸೋಂಕು ಹರಡೋದನ್ನ ತಡೆಯೋಣ ಅಂತಾ ಹೇಳಿ ಕಳಸ್ತಿದ್ದಾರೆ‌. ಬಸ್ಕಿ ಹೊಡೆದು ಸುಸ್ತಾದ ಬೈಕ್ ಸವಾರರು ಅಧಿಕಾರಿ ಕೊಟ್ಟ ಬಾಳೆಹಣ್ಣು ತಿಂದು ಮನೆಯತ್ತ ತೆರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.