ಹಾವೇರಿ : ಮತ ಎಣಿಕೆಗೆ ಆಗಮಿಸುತ್ತಿದ್ದ ಇಬ್ಬರು ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಬಳಿ ನಡೆದಿದೆ. ಬಸವನಕಟ್ಟಿ ಗ್ರಾಮದ ಯುಟಿಪಿ ಕಾಲುವೆಯಲ್ಲಿ ಕಾರು ಉರುಳಿ ಬಿದ್ದಿದೆ. ಮೃತರನ್ನು ಪ್ರಕಾಶ್(40) ಬನ್ನಿಮಟ್ಟಿ ಮತ್ತು ಸಿದ್ದನಗೌಡ ಬಿಷ್ಟನಗೌಡ್ರ (45) ಎಂದು ಗುರುತಿಸಲಾಗಿದೆ.
ಓದಿ: ಬೆಳಗಾವಿಯಲ್ಲಿ ಮಹಿಳಾ ಸೆಕ್ಯೂರಿಟಿ ಗಾರ್ಡ್ ಹತ್ಯೆ..
ಈ ಇಬ್ಬರು ಹಾವೇರಿ ತಾಲೂಕು ನೆಗಳೂರು ಗ್ರಾಮ ನಿವಾಸಿಗಳಾಗಿದ್ದಾರೆ. ಪಂಚಾಯತ್ ಚುನಾವಣೆ ಮತ ಎಣಿಕೆಗಾಗಿ ಹಾವೇರಿಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಪ್ರಕಾಶ್ ಅಭ್ಯರ್ಥಿ ಪರ ಏಜೆಂಟ್ ಆಗಿದ್ದು, ಸಿದ್ದನಗೌಡ ಜೊತೆ ಹಾವೇರಿ ಮತ ಎಣಿಕಾ ಕೇಂದ್ರಕ್ಕೆ ಬರುತ್ತಿದ್ದರು ಎನ್ನಲಾಗಿದೆ.