ETV Bharat / state

ಹಾವೇರಿ: ಮಿಂಚಿನಂತೆ ಓಡಿ ನೋಡುಗರನ್ನು ರೋಮಾಂಚನಗೊಳಿಸಿದ ಎತ್ತುಗಳು

ಹಾವೇರಿ ಸಮೀಪದ ದೇವಗಿರಿ ಯಲ್ಲಾಪುರದಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಖಾಲಿ ಎತ್ತಿನ ಗಾಡಿ ಓಡಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

bullock cart ride held in haveri
ರಾಜ್ಯಮಟ್ಟದ ಖಾಲಿ ಎತ್ತಿನ ಗಾಡಿ ಓಡಿಸುವ ಸ್ಪರ್ಧೆ
author img

By

Published : Dec 22, 2022, 12:16 PM IST

Updated : Dec 22, 2022, 1:59 PM IST

ಹಾವೇರಿಯಲ್ಲಿ ನಡೆದ ಖಾಲಿ ಎತ್ತಿನ ಗಾಡಿ ಓಡಿಸುವ ಸ್ಪರ್ಧೆ

ಹಾವೇರಿ: ಗ್ರಾಮೀಣ ಸೊಗಡಿನ ಕ್ರೀಡೆಗಳು ಎಂದರೆ ದನ ಬೆದರಿಸುವುದು, ಎತ್ತಿನಗಾಡಿ ಓಟ ಮತ್ತು ಟಗರು ಕಾಳಗ. ಜಿಲ್ಲೆಯಲ್ಲಿ ಬಹುತೇಕ ಕೃಷಿ ಚಟುವಟಿಕೆಗಳು ಮುಕ್ತಾಯ ಹಂತಕ್ಕೆ ತಲುಪಿದ್ದು, ಈ ಹಿನ್ನೆಲೆ ರೈತರು ಜಾನಪದ ಕ್ರೀಡೆಗಳನ್ನು ಆಯೋಜಿಸಿ ಮನರಂಜನೆ ಪಡೆಯುತ್ತಿದ್ದಾರೆ.

ಹಾವೇರಿ ಸಮೀಪದ ದೇವಗಿರಿಯಲ್ಲಾಪುರದಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ (ಖಾಲಿ ಎತ್ತಿನ ಗಾಡಿ ಓಡಿಸುವ ಸ್ಪರ್ಧೆ) ಆಯೋಜನೆ ಮಾಡಲಾಗಿತ್ತು. ಕಲ್ಮೇಶ್ವರ ಹೋರಿಯ ಸವಿ ನೆನಪಿಗಾಗಿ ಕಲ್ಮೇಶ್ವರ ಯುವಕ ಸಂಘದವರು ಈ ಸ್ಪರ್ಧೆ ಆಯೋಜಿಸಿದ್ದರು. ಹಾವೇರಿ, ಗದಗ, ಧಾರವಾಡ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಅನೇಕ ರೈತರು ಪಾಲ್ಗೊಂಡಿದ್ದರು.

ನಿಗದಿತ ವೇಳೆಯಲ್ಲಿ ಎತ್ತುಗಳು ಖಾಲಿ ಗಾಡಿಯನ್ನ ಎಷ್ಟು ದೂರ ಎಳೆದುಕೊಂಡು ಹೋಗುತ್ತವೆ ಎನ್ನುವ ಆಧಾರದ ಮೇಲೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು.

ಇದನ್ನೂ ಓದಿ: ಜೋಡೋ ಯಾತ್ರೆ: ಎತ್ತಿನ ಗಾಡಿ ಸವಾರಿಯಲ್ಲಿ ರಾಹುಲ್​ ಗಾಂಧಿ

ಪ್ರಥಮ ಬಹುಮಾನ ಮತ್ತು ದ್ವಿತೀಯ ಬಹುಮಾನವಾಗಿ ದ್ವಿಚಕ್ರ ವಾಹನಗಳನ್ನ ನೀಡಿದರೆ, ತೃತೀಯ ಮತ್ತು ಇತರ ಬಹುಮಾನಗಳಾಗಿ ಫ್ರಿಡ್ಜ್ ಸೇರಿದಂತೆ ವಿವಿಧ ಬಹುಮಾನಗಳನ್ನ ನೀಡಲಾಯಿತು. ದೂರದ ಊರುಗಳಿಂದ ಆಗಮಿಸಿದ ರೈತರು ತಮ್ಮ ನೆಚ್ಚಿನ ಹೋರಿಗಳನ್ನ ಗಾಡಿಗೆ ಕಟ್ಟಿಕೊಂಡು ಓಡಿಸಿದರು. ಕೆಲ ಎತ್ತುಗಳು ಮಿಂಚಿನಂತೆ ಓಡಿ ನೋಡುಗರನ್ನು ರೋಮಂಚನಗೊಳಿಸಿದವು.

ಇದನ್ನೂ ಓದಿ: ಎತ್ತಿನಗಾಡಿ ಮೂಲಕ ಶಾಲಾ ಮಕ್ಕಳ ಮನೆ ಬಾಗಿಲಿಗೆ ರೇಷನ್ ವಿತರಿಸಿದ ಶಿಕ್ಷಕ

Last Updated : Dec 22, 2022, 1:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.