ಹಾವೇರಿ: ಉಕ್ರೇನ್‌ನಲ್ಲಿ ಮೃತಪಟ್ಟಿರುವ ವೈದ್ಯಕೀಯ ವಿದ್ಯಾರ್ಥಿ ನವೀನ್ ತಂದೆ ಶೇಖರಪ್ಪ ಮಾಧ್ಯಮದವರ ಜೊತೆ ಮಾತನಾಡಿದ್ದು, ಎರಡ್ಮೂರು ದಿನದಲ್ಲಿ ನನ್ನ ಮಗನ ಮೃತದೇಹವನ್ನು ತರಿಸುವ ಭರವಸೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದು ಹೇಳಿದರು.
ಶೇಖರಪ್ಪ ಅವರಿಗೆ ಪ್ರಧಾನಿ ಮೋದಿ ದೂರವಾಣಿ ಮೂಲಕ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲಿ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ಮೃತದೇಹ ತರುವುದು ಕಷ್ಟಕರವಾಗಿದೆ. ಅದ್ರೂ ನವೀನ್ ಮೃತದೇಹವನ್ನು ತರಲು ಎಲ್ಲ ಪ್ರಯತ್ನ ಮಾಡ್ತೀವಿ ಎಂದು ಪ್ರಧಾನಿಯವರು ಶೇಖರಪ್ಪ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು: ಪೋಷಕರಿಗೆ ಕರೆ ಮಾಡಿ ಧೈರ್ಯ ತುಂಬಿದ ಮೋದಿ
ನನ್ನ ಮಗ ಇರುವ ಕಡೆ ಡೇಂಜರ್ ಝೋನ್ ಇತ್ತು, ಅತ್ತ ಯಾರೂ ಗಮನ ಹರಿಸಿಲ್ಲ. ಭಾರತೀಯ ರಾಯಭಾರ ಕಚೇರಿಗೆ ನನ್ನ ಮಗ ಕರೆ ಮಾಡಿದ್ರು, ಯಾರೂ ಕರೆ ಸ್ವೀಕರಿಸಿಲ್ಲ. ಇನ್ನೂ ಕೆಲ ವಿದ್ಯಾರ್ಥಿಗಳು ಅಲ್ಲಿದ್ದಾರೆ, ಅವರನ್ನಾದ್ರು ಕರೆ ತನ್ನಿ ಎಂದು ಮೃತ ನವೀನ್ ತಂದೆ ಶೇಖರಪ್ಪ ಮನವಿ ಮಾಡಿದ್ದಾರೆ.