ETV Bharat / state

ಕಾಂಗ್ರೆಸ್​ ಪಕ್ಷದ ಯೋಜನೆಗಳನ್ನು ಬಿಜೆಪಿ ಮುಂದುವರೆಸಿದೆ: ಅಶೋಕ ಚಕ್ರವರ್ತಿ

ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಿಂದ ದೇಶದ ಜನಸೇವೆ ಮಾಡಿಕೊಂಡು ಬಂದಂತಹ ಪಕ್ಷ. ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷ ನೀಡಿದ ಅಭಿವೃದ್ಧಿ ಕೆಲಸಗಳನ್ನು ಇಂದಿನ ಬಿಜೆಪಿ ಸರ್ಕಾರ ಮುಂದುವರೆಸಿದೆ ಎಂದು ರಾಹುಲ್ ಬ್ರಿಗೇಡ್ ರಾಜ್ಯಾಧ್ಯಕ್ಷ ಅಶೋಕ ಚಕ್ರವರ್ತಿ ಹೇಳಿದರು.

ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಗೌರವ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ

author img

By

Published : Aug 27, 2020, 3:18 PM IST

ರಾಣೆಬೆನ್ನೂರು: ಕಾಂಗ್ರೆಸ್ ಸಾಕಷ್ಟು ಇತಿಹಾಸ ಹೊಂದಿರುವ ಪಕ್ಷವಾಗಿದ್ದು, ಅಂದಿನ ಅಭಿವೃದ್ಧಿ ಕೆಲಸಗಳನ್ನು ಇಂದು ಬಿಜೆಪಿಯವರು ಮುಂದುವರೆಸುತ್ತಿದ್ದಾರೆ ಎಂದು ರಾಹುಲ್ ಬ್ರಿಗೇಡ್ ರಾಜ್ಯಾಧ್ಯಕ್ಷ ಅಶೋಕ ಚಕ್ರವರ್ತಿ ಹೇಳಿದ್ದಾರೆ.

ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಗೌರವ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ

ರಾಣೆಬೆನ್ನೂರು ನಗರದಲ್ಲಿ ಏರ್ಪಡಿಸಿದ್ದ ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಗೌರವಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ‌ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರಿಗೆ ಪಕ್ಷದಲ್ಲಿ ಮುಂಚೂಣಿ ಸ್ಥಾನ ನೀಡುವ ಸಲುವಾಗಿ ಬ್ರಿಗೇಡ್ ರಚನೆ ಮಾಡಲಾಗಿದೆ. ರಾಹುಲ್‌ ಗಾಂಧಿ ಮಾರ್ಗದರ್ಶನದಡಿ ದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು‌ ಮುಂದಾಗುತ್ತೇವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಬ್ರಿಗೇಡ್ ಗೌರವ ರಾಜ್ಯಾಧ್ಯಕ್ಷ ನಾಗರಾಜ ಕುಡಲಪಲಿ, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಮಹೇಶ ಚಕ್ರವರ್ತಿ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ನಗರಸಭಾ ಸದಸ್ಯರಾದ ಪುಟ್ಟಪ್ಪ ‌ಮರಿಯಮ್ಮನವರ, ನಿಂಗರಾಜ ಕೋಡಿಹಳ್ಳಿ, ಚೈತ್ರಾ ಮಾಗನೂರ, ಶೇರುಖಾನ‌ ಕಾಬೂಲಿ ಮುಂತಾದವರು ಈ ವೇಳೆ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.