ETV Bharat / state

Bear attack: ಶಿಗ್ಗಾಂವಿ: ರೈತರ ಮೇಲೆ ಕರಡಿ ದಾಳಿ.. ಇಬ್ಬರಿಗೆ ಗಂಭೀರ ಗಾಯ - ಅರಣ್ಯ ಇಲಾಖೆ ಸಿಬ್ಬಂದಿ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಸವನಕಟ್ಟಿ ಗ್ರಾಮದಲ್ಲಿ ಕರಡಿಯೊಂದು ಏಕಾಎಕಿ ಇಬ್ಬರ ರೈತರ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ. ಇಬ್ಬರು ರೈತರನ್ನು ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

bear ಸಾಂದರ್ಭಿಕ ಚಿತ್ರ
ಕರಡಿ ಸಾಂದರ್ಭಿಕ ಚಿತ್ರ
author img

By

Published : Jun 24, 2023, 7:14 PM IST

ಹಾವೇರಿ: ಜಮೀನಿಗೆ ತೆರಳಿದ್ದ ಇಬ್ಬರು ರೈತರ ಮೇಲೆ ಏಕಾಏಕಿ ಕರಡಿಯೊಂದು ದಾಳಿ ಮಾಡಿ ತೀವ್ರ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಸವನಕಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಕರಡಿ ದಾಳಿಯಿಂದ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಸೀರಸಾಬ್ (45) ಮತ್ತು ರಜಾಕ್ (30) ವರ್ಷದ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಮೀನಿಗೆ ತೆರಳಿದ್ದ ವೇಳೆ ಈ ಇಬ್ಬರ ಮೇಲೆ ಕರಡಿ ದಾಳಿ ಮಾಡಿ, ತೀವ್ರವಾಗಿ ಗಾಯಗೊಳಿಸಿರುವುದು ಶಿಗ್ಗಾಂವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಗಾಗ್ಗೆ ರೈತರ ಮೇಲೆ ಕರಡಿಗಳು ದಾಳಿ: ಒಂದು ವರ್ಷದಲ್ಲೇ ಶಿಗ್ಗಾಂವಿ ತಾಲೂಕಿನಲ್ಲಿ ರೈತರ ಮೇಲೆ ಕರಡಿ ದಾಳಿ ಮಾಡಿರುವ ಪ್ರಕರಣಗಳು ಆಗಿವೆ. ಶಿಗ್ಗಾಂವಿ ತಾಲೂಕಿನ ಅರಣ್ಯದಲ್ಲಿ ಕರಡಿಗಳು ಹೆಚ್ಚಾಗಿದ್ದು, ಅವುಗಳು ರೈತರ ಜಮೀನುಗಳಿಗೆ ಬಂದು ರೈತರ ಮೇಲೆ ದಾಳಿ ಮಾಡುತ್ತಿವೆ. ಕರಡಿಗಳು ಜಮೀನಿಗೆ ಬಾರದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಮೀನುಗಳಿಗೆ ಹೋಗಲು ರೈತರು ಭಯ ಪಡಬೇಕಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕರಡಿಯೊಂದಿಗೆ ಕಾದಾಡಿ ಬದುಕುಳಿದ ಅಜ್ಜ...! ಕಣ್ಣು ಗುಡ್ಡೆಯನ್ನು ಕಿತ್ತಿದ್ದ ಕರಡಿಯೊಂದಿಗೆ 72 ವರ್ಷದ ವೃದ್ಧ ಗಂಟೆ ಕಾಲ ಕಾದಾಡಿ ಪವಾಡ ಸದೃಶ್ಯ ಎಂಬಂತೆ ಬದುಕುಳಿದ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಜಗಲ್ ಪೇಟನ ತಿಂಬಾಲಿಯಲ್ಲಿ ಶುಕ್ರವಾರ ನಡೆದಿತ್ತು. ಮಾಲೋರ್ಗಿ ಗ್ರಾಮದ ನಿವಾಸಿ ವಿಠ್ಠಲ್​ ಸಲಾಕೆ ಎಂಬ ವೃದ್ಧನು ಕರಡಿ ದಾಳಿಯಿಂದ ಗಂಭೀರ ಗಾಯಗೊಂಡವರು.

ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಕರಡಿಯೊಂದಿಗೆ ವಿಠ್ಠಲ್ ಸಲಾಕೆ 15 ನಿಮಿಷಕ್ಕೂ ಹೆಚ್ಚು ಕಾಲ ಕಾದಾಡಿ ಜೀವ ಉಳಿಸಿಕೊಂಡಿದ್ದಾರೆ. ದಾಳಿ ವೇಳೆ, ಕರಡಿಯೂ ಅವರ ಒಂದು ಕಣ್ಣನ್ನು ಕಿತ್ತು ಹಾಕಿದ್ದು, ಮತ್ತೊಂದು ಕಣ್ಣನ್ನು ಗಂಭೀರವಾಗಿ ಗಾಯಗೊಳಿಸಿದೆ. ಅಲ್ಲದೇ ತಲೆಯ ಭಾಗದ ಚರ್ಮವನ್ನು ಕಿತ್ತಿರುವ ಕರಡಿ ದೇಹದ ವಿವಿಧ ಭಾಗಗಳ ಮೇಲೆ ಸಾಕಷ್ಟು ಗಾಯ ಮಾಡಿದೆ.

ಇಷ್ಟಾದರೂ ಕರಡಿಯೊಂದಿಗೆ ಸೆಣಸಾಡಿದ ವೃದ್ಧ ಕೊನೆಗೆ ಜೋರಾಗಿ ಕೂಗಾಡಿದ್ದಾರೆ. ಬಳಿಕ ಕರಡಿ ಬಿಟ್ಟು ಪರಾರಿಯಾಗಿದೆ. ಕರಡಿ ದಾಳಿಯಿಂದ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವೃದ್ಧ ಸುಮಾರು ಎರಡು ಕಿಲೋಮೀಟರ್​ ದೂರದಲ್ಲಿದ್ದ ತಮ್ಮ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗಿದ್ದಾರೆ. ರಕ್ತದ ಮಡುವಿನಲ್ಲಿದ್ದ ಅವರನ್ನು ಕೂಡಲೇ ರಾಮನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೃದ್ಧನ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಅವರನ್ನು ಬೆಳಗಾವಿಯ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಗೊಂಡಿರುವ ವಿಠ್ಠಲ್​ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಕಣ್ಣಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಮುಂದಿನ ಎರಡ್ಮೂರು ದಿನಗಳಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂಓದಿ:ಮೂರು ದಿನಗಳ ಹಿಂದೆ ಮದುವೆ.. ನವದಂಪತಿ ಸೇರಿ ಐವರನ್ನು ಕೊಡಲಿಯಿಂದ ಕೊಚ್ಚಿ ಆತ್ಮಹತ್ಯೆಗೆ ಶರಣಾದ ಹಂತಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.